AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಿನಿಮಾಗೆ ರೆಸ್ಪಾನ್ಸ್ ಬರ್ತಿಲ್ಲ, ಭವಿಷ್ಯ ಇಲ್ಲಿಗೆ ಕೊನೆಯಾದ ಹಾಗೆ ಅನಿಸುತ್ತಿದೆ’; ‘ಭಜರಂಗಿ 2’ ಖಳನ ಕಣ್ಣೀರು

‘ಭಜರಂಗಿ’, ‘ವಜ್ರಕಾಯ’ ನಂತರದಲ್ಲಿ ನಟ ಶಿವರಾಜ್​ಕುಮಾರ್​ ಹಾಗೂ ನಿರ್ದೇಶಕ ಎ. ಹರ್ಷ ‘ಭಜರಂಗಿ 2’ಗಾಗಿ ಮತ್ತೆ ಒಂದಾಗಿದ್ದರು. ಈ ಸಿನಿಮಾ ಮೂಲಕ ಹರ್ಷ ಪ್ರೇಕ್ಷಕರ ಎದುರು ಮತ್ತೊಂದು ಫ್ಯಾಂಟಸಿ ಜಗತ್ತನ್ನು ತೆರೆದಿಟ್ಟಿದ್ದರು.

‘ಸಿನಿಮಾಗೆ ರೆಸ್ಪಾನ್ಸ್ ಬರ್ತಿಲ್ಲ, ಭವಿಷ್ಯ ಇಲ್ಲಿಗೆ ಕೊನೆಯಾದ ಹಾಗೆ ಅನಿಸುತ್ತಿದೆ’; ‘ಭಜರಂಗಿ 2’ ಖಳನ ಕಣ್ಣೀರು
ಚೆಲುವರಾಜ್​
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Nov 03, 2021 | 4:55 PM

Share

‘ಭಜರಂಗಿ 2’ ಸಿನಿಮಾ ಅಕ್ಟೋಬರ್​ 29ರಂದು ತೆರೆಗೆ ಬಂದಿತ್ತು. ಅದೇ ದಿನ ನಟ ಪುನೀತ್​ ರಾಜ್​ಕುಮಾರ್​ ಕೂಡ ನಿಧನರಾದರು. ಹೀಗಾಗಿ, ಆ ದಿನ ಅನೇಕ ಕಡೆಗಳಲ್ಲಿ ಸಿನಿಮಾ ಪ್ರದರ್ಶನ ರದ್ದು ಮಾಡಲಾಯಿತು. ಇನ್ನು, ರಾಜ್​ ಕುಟುಂಬ ಹಾಗೂ ಅವರ ಅಭಿಮಾನಿಗಳು ದುಃಖದಲ್ಲಿದ್ದಾರೆ. ಈ ಕಾರಣಕ್ಕೆ ಯಾರೂ ಸಿನಿಮಾಗೆ ತೆರಳೋಕೆ ಅಷ್ಟಾಗಿ ಮನಸ್ಸು ಮಾಡುತ್ತಿಲ್ಲ. ಚಿತ್ರತಂಡ ಕೂಡ ಪ್ರಚಾರ ಮಾಡುವ ಹುಮ್ಮಸ್ಸಿನಲ್ಲಿ ಇಲ್ಲ. ಈ ಎಲ್ಲಾ ಕಾರಣಕ್ಕೆ ಚಿತ್ರದ ಬಾಕ್ಸ್​ ಆಫೀಸ್​ಗೆ ಹೊಡೆತ ಬಿದ್ದಿದೆ. ಇದು ಚಿತ್ರತಂಡದ ಚಿಂತೆಯನ್ನು ಹೆಚ್ಚಿಸಿದೆ. ಈ ಬಗ್ಗೆ ‘ಭಜರಂಗಿ 2’ ವಿಲನ್ ಚೆಲುವ ರಾಜ್ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

‘ಅಕ್ಟೋಬರ್​ 29. ಒಂದು ಕಡೆ ಸಿನಿಮಾ ರಿಲೀಸ್ ಆಯ್ತು, ಮತ್ತೊಂದು ಕಡೆ ಪವರ್​ ಸ್ಟಾರ್ ನಿಧನ ಹೊಂದಿದರು. ಒಂದು ಕಡೆ ಖುಷಿ, ಮತ್ತೊಂದು ಕಡೆ ದುಃಖ. ಅಂತಹ ದಿನ ಮರೆಯೋಕೆ ಸಾಧ್ಯವಿಲ್ಲ. ದೇವರ ಮಗನನ್ನು ಕಳೆದುಕೊಂಡೆವು. ಅವರು ನಮ್ಮ ಜತೆ ಇಲ್ಲ.  ಭಜರಂಗಿ 2 ಮೂರು ವರ್ಷದ ಶ್ರಮ. ಆದರೆ, ಚಿತ್ರಕ್ಕೆ ರೆಸ್ಪಾನ್ಸ್ ಸಿಗುತ್ತಿಲ್ಲ. ನಮ್ಮ ಭವಿಷ್ಯ ಇಲ್ಲಿಗೆ ಕೊನೇ ಆಗುತ್ತಿದೆಯೇನೋ ಎನಿಸುತ್ತಿದೆ. ದಯವಿಟ್ಟು ನಮಗೆ ಸಪೋರ್ಟ್ ಕೊಡಿ. ನಮ್ಮನ್ನ ನಡುನೀರಲ್ಲಿ ಕೈಬಿಡಬೇಡಿ’ ಎಂದು ಚೆಲುವ ರಾಜ್ ಕೇಳಿಕೊಂಡಿದ್ದಾರೆ.

‘ಭಜರಂಗಿ’, ‘ವಜ್ರಕಾಯ’ ನಂತರದಲ್ಲಿ ನಟ ಶಿವರಾಜ್​ಕುಮಾರ್​ ಹಾಗೂ ನಿರ್ದೇಶಕ ಎ. ಹರ್ಷ ‘ಭಜರಂಗಿ 2’ಗಾಗಿ ಮತ್ತೆ ಒಂದಾಗಿದ್ದರು. ಈ ಸಿನಿಮಾ ಮೂಲಕ ಹರ್ಷ ಪ್ರೇಕ್ಷಕರ ಎದುರು ಮತ್ತೊಂದು ಫ್ಯಾಂಟಸಿ ಜಗತ್ತನ್ನು ತೆರೆದಿಟ್ಟಿದ್ದರು. ಮಂತ್ರ-ತಂತ್ರ, ಧನ್ವಂತರಿ, ಪುನರ್ಜನ್ಮ ಹೀಗೆ ನಾನಾ ವಿಚಾರಗಳನ್ನು ಹೇಳುವುದರ ಜತೆಗೆ ಸಮಾಜಕ್ಕೆ ಒಂದೊಳ್ಳೆಯ ಸಂದೇಶ ರವಾನಿಸುವ ಪ್ರಯತ್ನ ಮಾಡಿದ್ದರು.  ಆದರೆ, ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಇದನ್ನೂ ಓದಿ: ‘ಆ ಸೀನ್​ ನನಗೆ ಟಚ್​ ಆಯ್ತು’; ‘ಭಜರಂಗಿ 2’ ನೋಡಿದ ಶಿವಣ್ಣನ ಮಾತು

Bhajarangi 2 Movie Review: ಫ್ಯಾಂಟಸಿ ಲೋಕದ ‘ಭಜರಂಗಿ 2’ ಕಥೆಯಲ್ಲಿ ಶಿವಣ್ಣನ ಎನರ್ಜಿಯೇ ಹೈಲೈಟ್

ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
ಸಾಲು ಸಾಲು ರಜೆ: ಊರಿಗೆ ತೆರಳುತ್ತಿರುವ ಜನ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಮೈಸೂರು ಸ್ಯಾಂಡಲ್ ಸೋಪ್ ಜಾಹೀರಾತಿಗೆ ಕೋಟ್ಯಾಂತರ ರೂ.ಖರ್ಚು!
ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ
ಕೊಲ್ಕತ್ತಾ ಮೆಟ್ರೋದಲ್ಲಿ ವಿದ್ಯಾರ್ಥಿಗಳು, ಕಾರ್ಮಿಕರ ಜೊತೆ ಮೋದಿ ಪ್ರಯಾಣ
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ತುಂಗಭದ್ರಾ ಜಲಾಶಯದ ಹೊರ ಹರಿವು ಇಳಿಕೆ: ಕಂಪ್ಲಿ ಸೇತುವೆ ಸಂಚಾರಕ್ಕೆ ಮುಕ್ತ
ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ
ಶಾಸಕರ ಸಭೆ ಕರೆದು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ ಸಿಎಂ
ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ
ವೀರಶೈವ ಲಿಂಗಾಯತ ಶಾಸಕರ ಸಭೆ: ಜಾತಿ ಗಣತಿ ಬಗ್ಗೆ ಮಹತ್ವದ ನಿರ್ಣಯ
ಮುಂದಿನ ಚುನಾವಣೆಯಲ್ಲಿ 175 ಸೀಟು ಗೆಲ್ಲುತ್ತೇವೆ, ಬರೆದಿಟ್ಟುಕೊಳ್ಳಿ: ಅಶೋಕ
ಮುಂದಿನ ಚುನಾವಣೆಯಲ್ಲಿ 175 ಸೀಟು ಗೆಲ್ಲುತ್ತೇವೆ, ಬರೆದಿಟ್ಟುಕೊಳ್ಳಿ: ಅಶೋಕ
ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ
ಕೊಲ್ಕತ್ತಾದಲ್ಲಿ ಹೊಸ ಮೆಟ್ರೋ ಮಾರ್ಗಗಳಿಗೆ ಪ್ರಧಾನಿ ಮೋದಿ ಚಾಲನೆ
ಧರ್ಮಸ್ಥಳ ಪ್ರಕರಣದ ಬಗ್ಗೆ ನಟಿ ರಮ್ಯಾ ಮಾತು
ಧರ್ಮಸ್ಥಳ ಪ್ರಕರಣದ ಬಗ್ಗೆ ನಟಿ ರಮ್ಯಾ ಮಾತು
ಚುನಾವಣಾ ಅಯೋಗದ ವಿರುದ್ಧ ಅಭಿಯಾನ ನಡೆಸುತ್ತಿರುವ ರಾಹುಲ್ ಗಾಂಧಿ
ಚುನಾವಣಾ ಅಯೋಗದ ವಿರುದ್ಧ ಅಭಿಯಾನ ನಡೆಸುತ್ತಿರುವ ರಾಹುಲ್ ಗಾಂಧಿ