ಬೆಂಗಳೂರು: ನಟ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನಕ್ಕೆ ಇಡೀ ನಾಡು ಕಂಬನಿ ಮಿಡಿದಿತ್ತು. ನಾಡಿನಾದ್ಯಂತ ವಿವಿಧ ರೀತಿಯಲ್ಲಿ ಅಪ್ಪುಗೆ ನಮನ ಸಲ್ಲಿಸಲಾಗಿತ್ತು. ಕಲಾವಿಉದರು ವಿವಿಧ ರೂಪದ ಕಲಾಕೃತಿಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದರು. ಇದೀಗ ಬೆಂಗಳೂರಿನ ಒಂಬತ್ತನೇ ತರಗತಿಯ ವಿದ್ಯಾರ್ಥಿಯೋರ್ವರು ರೂಬಿಕ್ಸ್ ಕ್ಯೂಬ್ಗಳನ್ನು ಬಳಸಿ, ಪುನೀತ್ ಅವರ ಕಲಾಕೃತಿ ತಯಾರಿಸಿದ್ದಾರೆ. ಇದು ಮೆಚ್ಚುಗೆಗೆ ಪಾತ್ರವಾಗಿದ್ದು, ಎಲ್ಲರ ಗಮನ ಸೆಳೆದಿದೆ. ಬೆಂಗಳೂರಿನ ಪಿಎಸ್ಪಿಬಿ ಶಾಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿ ಎಲ್.ದೀಪಕ್ ಅಕ್ಷಯ್ ರೂಬಿಕ್ಸ್ ಕ್ಯೂಬ್ ಬಳಸಿ ಅಪ್ಪು ಚಿತ್ರ ರಚಿಸಿದ್ದಾರೆ. ಆ ಮೂಲಕ ನೆಚ್ಚಿನ ನಟನ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ದೀಪಕ್ ಈ ಚಿತ್ರದ ರಚನೆಗಾಗಿ 500 ಕ್ಯೂಬಿಕ್ಗಳನ್ನು ಬಳಸಿಕೊಂಡಿದ್ದಾರೆ. ಕಲಾಕೃತಿ ರಚಿಸುವ ಸಂದರ್ಭದ ವಿಡಿಯೋವನ್ನು ಟೈಮ್ ಲ್ಯಾಪ್ಸ್ ಮುಖಾಂತರ ಅವರು ಸೆರೆಹಿಡಿದು ಹಂಚಿಕೊಂಡಿದ್ದು, ವೈರಲ್ ಆಗಿದೆ. ಶಾಲಾ ವಿದ್ಯಾರ್ಥಿಯ ಪ್ರತಿಭೆಗೆ ಹಾಗೂ ಪುನೀತ್ ಮೇಲಿನ ಅಭಿಮಾನವನ್ನು ಕಲಾಕೃತಿಯ ಮುಖಾಂತರ ವ್ಯಕ್ತಪಡಿಸಿರುವುದಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ:
‘ಆ ದಿನ ಪುನೀತ್ ಡಲ್ ಆಗಿದ್ದರು’; ಅಪ್ಪು ಸಾವಿನ ನಂತರ ಅಚ್ಚರಿಯ ವಿಚಾರ ಬಿಚ್ಚಿಟ್ಟ ಶಿವರಾಜ್ಕುಮಾರ್
Puneeth Rajkumar: ಮಾನವೀಯ ಮೌಲ್ಯಗಳನ್ನು ಪುನೀತ್ರಿಂದ ಕಲಿಯಬೇಕು; ಅಪ್ಪು ಸ್ಮರಿಸಿ ಕಂಬನಿ ಮಿಡಿದ ರಾಮ್ ಚರಣ್