AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Puneeth Rajkumar: ಮಾನವೀಯ ಮೌಲ್ಯಗಳನ್ನು ಪುನೀತ್​ರಿಂದ ಕಲಿಯಬೇಕು; ಅಪ್ಪು ಸ್ಮರಿಸಿ ಕಂಬನಿ ಮಿಡಿದ ರಾಮ್ ಚರಣ್

Ram Charan: ನಟ ಪುನೀತ್ ರಾಜಕುಮಾರ್ ನಿವಾಸಕ್ಕೆ ಟಾಲಿವುಡ್ ನಟ ರಾಮಚರಣ್ ಭೇಟಿ ನೀಡಿದ್ಧಾರೆ. ಕುಟುಂಬದವರಿಗೆ ಅವರು ಸಾಂತ್ವನ ಹೇಳಿದ್ದಾರೆ. ಇದೇ ವೇಳೆ ಅವರು ಮಾತನಾಡಿ, ಪುನೀತ್ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡಿದ್ದಾರೆ.

Puneeth Rajkumar: ಮಾನವೀಯ ಮೌಲ್ಯಗಳನ್ನು ಪುನೀತ್​ರಿಂದ ಕಲಿಯಬೇಕು; ಅಪ್ಪು ಸ್ಮರಿಸಿ ಕಂಬನಿ ಮಿಡಿದ ರಾಮ್ ಚರಣ್
ರಾಮ್ ಚರಣ್
TV9 Web
| Edited By: |

Updated on:Nov 03, 2021 | 12:45 PM

Share

ಟಾಲಿವುಡ್ ನಟ ರಾಮ್ ಚರಣ್ ಪುನೀತ್ ರಾಜಕುಮಾರ್ ಅವರ ನಿವಾಸಕ್ಕೆ ಭೇಟಿ ನಿಡಿ ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ. ನಂತರ ಮಾತನಾಡಿದ ಅವರು, ‘‘ಪುನೀತ್ ರಾಜ್‌ಕುಮಾರ್ ನಿಧನ ಅತಿ ದೊಡ್ಡ ನಷ್ಟ. ನಮ್ಮ ಕುಟುಂಬದ ಸದಸ್ಯನನ್ನು ಕಳೆದುಕೊಂಡಂತಾಗಿದೆ. ಈಗಲೂ ಪುನೀತ್ ನಿಧನದ ಸುದ್ದಿ ನಂಬುವುದಕ್ಕೆ ಆಗುತ್ತಿಲ್ಲ. ನಮ್ಮ ಮನೆಗೆ ಬಂದಾಗ ತುಂಬಾ ಆತ್ಮೀಯವಾಗಿ ಇರುತ್ತಿದ್ದರು. ನಾವು ಅವರಿಗೆ ಗೆಸ್ಟ್ ಅನ್ನುವಂತೆ ನಮ್ಮ ಜತೆ ಇರುತ್ತಿದ್ದರು. ಮಾನವೀಯ ಮೌಲ್ಯಗಳನ್ನು ಪುನೀತ್​ರಿಂದ ಕಲಿಯಬೇಕು. ವಿ ಲವ್ ಯು ಪುನೀತ್ ರಾಜ್‌ಕುಮಾರ್’’ ಎಂದು ರಾಮ್ ಚರಣ್ ನುಡಿದಿದ್ಧಾರೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಅವರು ಸಂತಾಪ ಸೂಚಿಸಿದ್ಧಾರೆ. ರಾಮ್ ಚರಣ್ ಶಿವರಾಜ್ ಕುಮಾರ್ ಅವರ ನಿವಾಸಕ್ಕೂ ತೆರಳಿ, ಸಾಂತ್ವನ ಹೇಳಿದ್ಧಾರೆ.

ಪುನೀತ್ ನಿಧನಕ್ಕೆ ಟಾಲಿವುಡ್ ಚಿತ್ರರಂಗ ಶೋಕ ವ್ಯಕ್ತಪಡಿಸಿತ್ತು. ಹಲವು ನಟರು ಆಗಮಿಸಿ, ಅಂತಿಮ ದರ್ಶನ ಪಡೆದಿದ್ದರು. ನಿನ್ನೆ (ಅಕ್ಟೋಬರ್ 02) ನಾಗಾರ್ಜುನ ಆಗಮಿಸಿ, ಪುನೀತ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಚಿರಂಜೀವಿ, ಅಲಿ, ಜ್ಯೋ.ಎನ್​ಟಿಆರ್, ಪ್ರಭುದೇವ, ನಂದಮೂರಿ ಬಾಲಕೃಷ್ಣ ಮೊದಲಾದವರು ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿದ್ದರು. ರಾಮ್ ಚರಣ್ ತಂದೆ ಚಿರಂಜೀವಿ ಕೂಡ ಪುನೀತ್ ಜೊತೆಗಿನ ನೆನಪುಗಳನ್ನು ಹಾಗೂ ಡಾ.ರಾಜ್ ಕುಟುಂಬದ ಜೊತೆಗಿನ ಒಡನಾಟವನ್ನು ಮೆಲುಕು ಹಾಕಿದ್ದರು.

‘‘ರಾಜ್‌ಕುಮಾರ್ ಕುಟುಂಬ ಎಲ್ಲ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದರು. ಪುನೀತ್ ಅಕಾಲಿಕ ನಿಧನ ಬಹಳ ಅನ್ಯಾಯ. ಒಪ್ಪಿಕೊಳ್ಳಲು ಕಷ್ಟಕರವಾಗಿದೆ. ಭಗವಂತ ಪುನೀತ್​ಗೆ ಅನ್ಯಾಯ ಮಾಡಿದ್ದಾರೆ. ಆ ದೇವರೇ ಅವರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಬೇಕು. ಬೆಂಗಳೂರಿಗೆ ಯಾವಾಗ ಬಂದರೂ ಅವರನ್ನ ಭೇಟಿಯಾಗುತ್ತಿದ್ದೆ. ಡಾ.ರಾಜ್‌ಕುಮಾರ್ ಇದ್ದಾಗ ಅವರ ಮನೆಗೆ ಹೋಗುತ್ತಿದ್ದೆ. ಅವರ ಕುಟುಂಬಸ್ಥರ ಜತೆ ಯಾವಾಗಲೂ ಮಾತನಾಡುತ್ತಿದ್ದೆ. ಇತ್ತೀಚೆಗೆ ಪುನೀತ್, ಶಿವರಾಜ್‌ಕುಮಾರ್‌ರನ್ನು ಭೇಟಿಯಾಗಿದ್ದೆ. ಪುನೀತ್ ಬಹಳ ವಿನಯದಿಂದ ನಡೆದುಕೊಳ್ಳುತ್ತಿದ್ದರು. ಪುನೀತ್ ಆತ್ಮಕ್ಕೆ ಶಾಂತಿ ನೀಡುವಂತೆ ಪ್ರಾರ್ಥನೆ ಮಾಡುತ್ತೇನೆ’’ ಎಂದು ಚಿರಂಜೀವಿ ಸಂತಾಪ ಸೂಚಿಸಿದ್ದರು.

ಇದನ್ನೂ ಓದಿ:

Puneeth Rajkumar: ಒಂದು ಸ್ಟೆಪ್ ಹಾಕ್ತೀವಿ ಎದ್ದು ಬನ್ನಿ ಅಪ್ಪು; ಪುನೀತ್ ದರ್ಶನಕ್ಕೆ ಬಂದ ಮಕ್ಕಳ ಮಾತಿಗೆ ನೆರೆದವರು ಭಾವುಕ

Puneeth Rajkumar: ನವೆಂಬರ್ 16ಕ್ಕೆ ಅರಮನೆ ಮೈದಾನದಲ್ಲಿ ಪುನೀತ್ ನಮನ ಕಾರ್ಯಕ್ರಮ; ಚಿತ್ರರಂಗದವರಿಗೆ ಮಾತ್ರ ಪ್ರವೇಶ

Published On - 12:26 pm, Wed, 3 November 21

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್