AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Puneeth Rajkumar: ನವೆಂಬರ್ 16ಕ್ಕೆ ಅರಮನೆ ಮೈದಾನದಲ್ಲಿ ಪುನೀತ್ ನಮನ ಕಾರ್ಯಕ್ರಮ; ಚಿತ್ರರಂಗದವರಿಗೆ ಮಾತ್ರ ಪ್ರವೇಶ

ಪುನೀತ್ ರಾಜಕುಮಾರ್: ನಟ ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸಲು ಚಿತ್ರರಂಗದ ವತಿಯಿಂದ ‘ಪುನೀತ್ ನಮನ’ ಕಾರ್ಯಕ್ರಮ ಆಯೋಜಿಸಲು ತೀರ್ಮಾನಿಸಲಾಗಿದೆ. ಈ ಕುರಿತು ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್ ಮಾಹಿತಿ ನೀಡಿದ್ಧಾರೆ.

Puneeth Rajkumar: ನವೆಂಬರ್ 16ಕ್ಕೆ ಅರಮನೆ ಮೈದಾನದಲ್ಲಿ ಪುನೀತ್ ನಮನ ಕಾರ್ಯಕ್ರಮ; ಚಿತ್ರರಂಗದವರಿಗೆ ಮಾತ್ರ ಪ್ರವೇಶ
ಪುನೀತ್​ ರಾಜ್​ ಕುಮಾರ್
TV9 Web
| Updated By: shivaprasad.hs|

Updated on: Nov 03, 2021 | 12:05 PM

Share

ಅಕಾಲಿಕ ನಿಧನಹೊಂದಿದ ನಟ ಪುನೀತ್ ರಾಜಕುಮಾರ್ ಅವರಿಗೆ ಗೌರವ ನಮನ ಸಲ್ಲಿಸುವ ಉದ್ದೇಶದಿಂದ ‘ಪುನೀತ್ ನುಡಿ ನಮನ’ ಕಾರ್ಯಕ್ರಮ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಬೆಂಗಳೂರಿನಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್ ಹೇಳಿಕೆ ನೀಡಿದ್ದಾರೆ. ನ.16ರಂದು ಕಾರ್ಯಕ್ರಮ ನಡೆಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನುಮತಿ ನೀಡಿದ್ದಾರೆ. ಕಾರ್ಯಕ್ರಮದ ರೂಪರೇಷೆ ಸಿದ್ಧಪಡಿಸುತ್ತಿದ್ದೇವೆ. ತೆಲುಗು, ತಮಿಳು ಚಿತ್ರರಂಗದವರನ್ನು ಕರೆಯಲು ನಿರ್ಧಾರ ಮಾಡಲಾಗಿದೆ. ಇದಕ್ಕಾಗಿ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘದಿಂದ ಜಂಟಿಯಾಗಿ ಕಾರ್ಯಕ್ರಮ ಮಾಡಲು ತೀರ್ಮಾನಿಸಲಿದ್ದೇವೆ ಎಂದು ಅವರು ನುಡಿದಿದ್ದಾರೆ.

ಚಿತ್ರರಂಗದವರಿಗೆ ಮಾತ್ರ ಪ್ರವೇಶ; ಸಾ.ರಾ ಗೋವಿಂದು ಪುನೀತ್ ರಾಜ್ ಕುಮಾರ್ ನಿಧನದ ನೋವು ತಡೆದುಕೊಳ್ಳುವ ಶಕ್ತಿ ‌ಯಾರಿಗು ಇಲ್ಲ. ಅಂದು ಸುಮಾರು 20 ಲಕ್ಷ ಜನ ದರ್ಶನ ಪಡೆದಿದ್ದಾರೆ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯ ಮಾಡುವ ತೀರ್ಮಾನ ಮಾಡಿದ್ದೇವೆ ಎಂದು ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಮಾಹಿತಿ ನೀಡಿದ್ದಾರೆ. ‘ಪುನೀತ್ ನಮನ’ ಹೆಸರಿನಲ್ಲಿ ಕಾರ್ಯಕ್ರಮ ಮಾಡಲಿದ್ದೇವೆ. ಅರಮನೆ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ಸಂಗೀತ ನಮನ ಕೂಡ ಇರಲಿದೆ ಎಂದು ಅವರು ತಿಳಿಸಿದ್ದಾರೆ. ಸಂಗೀತ ನಮನದ ಉಸ್ತುವಾರಿಯನ್ನು ಗುರುಕಿರಣ್ ವಹಿಸಿಕೊಂಡಿದ್ದಾರೆ. ಚಿತ್ರರಂಗದವರಿಗೆ ಮಾತ್ರ ಸೀಮಿತವಾದ ಕಾರ್ಯಕ್ರಮ ಇದಾಗಿದ್ದು, ರಾಜ್ ಕುಟುಂಬದ ಸದಸ್ಯರು ಇರಲಿದ್ದಾರೆ. ಚಿತ್ರರಂಗದ ಎಲ್ಲಾ ಸಂಘಟನೆ ,ಸಂಘ ಸಂಸ್ಥೆಗಳು ಭಾಗವಹಿಸಲು ಮನವಿ ಮಾಡುತ್ತೇವೆ. ಸಾರ್ವಜನಿಕರು ಮಾಧ್ಯಮಗಳ ಮೂಲಕ ನೋಡಿ ಸಹಕರಿಸಬೇಕು ಎಂದು ಸಾರಾ ಗೋವಿಂದು ವಿನಂತಿಸಿದ್ದಾರೆ.

ದೀಪಾವಳಿಗೆ ಪುನೀತ್ ಕ್ಯಾಲೋರಿ ಸುಡಿ ಎಂದು ಹಾರೈಸಿದ್ದ ವಿಡಿಯೋ ವೈರಲ್: ದೀಪಾವಳಿ ಹಬ್ಬಕ್ಕೆ ಪುನೀತ್​ ವಿಶ್​ ಮಾಡಿದ್ದ ಹಳೆಯ ವಿಡಿಯೋ ವೈರಲ್ ಆಗಿದೆ. ಈ ದೀಪಾವಳಿ ಎಲ್ಲರಿಗೂ ಒಳ್ಳೆಯದನ್ನ ಮಾಡಲಿ. ದೀಪಾವಳಿ ಹಬ್ಬಕ್ಕೆ ಪಟಾಕಿ ಹಚ್ಚುವುದು ಬೇಡ. ಅದರ ಬದಲಾಗಿ ದೇಹದ ಕ್ಯಾಲೋರಿ ಸುಡುವ ಎಂದು ಅವರು ಮನವಿ ಮಾಡಿದ್ದರು. ಇದೀಗ ದೀಪಾವಳಿಯ ಸಂದರ್ಭದಲ್ಲಿ ಪುನೀತ್ ಅವರ ಹಳೆಯ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

Puneeth Rajkumar: ಒಂದು ಸ್ಟೆಪ್ ಹಾಕ್ತೀವಿ ಎದ್ದು ಬನ್ನಿ ಅಪ್ಪು; ಪುನೀತ್ ದರ್ಶನಕ್ಕೆ ಬಂದ ಮಕ್ಕಳ ಮಾತಿಗೆ ನೆರೆದವರು ಭಾವುಕ

Puneeth Rajkumar: ಪವರ್ ಸ್ಟಾರ್ ಪುನೀತ್ ಪುತ್ಥಳಿ‌ ನಿರ್ಮಾಣಕ್ಕೆ ಹೆಚ್ಚಿದ ಬೇಡಿಕೆ, ಒಬ್ಬೊಬ್ಬ ಶಿಲ್ಪಿಗೂ 60-70 ಪುತ್ಥಳಿ ಆರ್ಡರ್