AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Puneeth Rajkumar: ಪವರ್ ಸ್ಟಾರ್ ಪುನೀತ್ ಪುತ್ಥಳಿ‌ ನಿರ್ಮಾಣಕ್ಕೆ ಹೆಚ್ಚಿದ ಬೇಡಿಕೆ, ಒಬ್ಬೊಬ್ಬ ಶಿಲ್ಪಿಗೂ 60-70 ಪುತ್ಥಳಿ ಆರ್ಡರ್

ಅಪ್ಪು ಅಭಿಮಾನಿಗಳು ತಮ್ಮ ತಮ್ಮ ಏರಿಯಾಗಳಲ್ಲಿ ಕೂರಿಸಲು ಅಪ್ಪು ಪುತ್ಥಳಿ‌ ನಿರ್ಮಾಣಕ್ಕೆ ಆರ್ಡರ್ ಕೊಡುತ್ತಿದ್ದಾರೆ. ಬೆಂಗಳೂರಿನಲ್ಲಿ ಕಳೆದ ಭಾನುವಾರದಂದೆ ಒಂದು ಸಾವಿರ ಅಪ್ಪು ಪುತ್ಥಳಿ ನಿರ್ಮಾಣಕ್ಕೆ ಅವರ ಅಭಿಮಾನಿಗಳು ಬೇಡಿಕೆ ಇಟ್ಟಿರುವುದಾಗಿ ಮಾಹಿತಿ ಸಿಕ್ಕಿದೆ.

Puneeth Rajkumar: ಪವರ್ ಸ್ಟಾರ್ ಪುನೀತ್ ಪುತ್ಥಳಿ‌ ನಿರ್ಮಾಣಕ್ಕೆ ಹೆಚ್ಚಿದ ಬೇಡಿಕೆ, ಒಬ್ಬೊಬ್ಬ ಶಿಲ್ಪಿಗೂ 60-70 ಪುತ್ಥಳಿ ಆರ್ಡರ್
ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್
TV9 Web
| Updated By: ಆಯೇಷಾ ಬಾನು|

Updated on:Nov 03, 2021 | 12:02 PM

Share

ಬೆಂಗಳೂರು: ಕರುನಾಡ ‘ಅರಸು’ ಸ್ಯಾಂಡಲ್ವುಡ್ ರಾಜಕುಮಾರ ಇಹಲೋಕ ತ್ಯಜಿಸಿ 6 ದಿನಗಳೇ ಕಳೆದಿದೆ. ಹೃದಯ ಸ್ತಂಭನದಿಂದ ಚಿರ ನಿದ್ರೆಗೆ ಜಾರಿದ ಯುವರತ್ನ ಅಪ್ಪು ಎಲ್ಲೂ ಹೋಗಿಲ್ಲ.. ನಮ್ಮೊಟ್ಟಿಗೆ ಇದ್ದಾರೆಂಬ ಭಾವ ಅಭಿಮಾನಿಗಳಲ್ಲಿದೆ. ಹೀಗಾಗಿ ಪುನೀತ್ ರಾಜ್ಕುಮಾರ್ ನೆನಪು ಸದಾ ಉಳಿಯಲಿ ಎಂದು ಅವರ ಅಭಿಮಾನಿಗಳು ಪುತ್ಥಳಿ‌ ನಿರ್ಮಾಣಕ್ಕೆ ಮುಂದಾಗಿದ್ದು ದಿವಂಗತ ಪುನೀತ್ ರಾಜ್ಕುಮಾರ್ ಪುತ್ಥಳಿ‌ ನಿರ್ಮಾಣಕ್ಕೆ ಬೇಡಿಕೆ ಹೆಚ್ಚಾಗಿದೆ.

ಅಪ್ಪು ಪುತ್ಥಳಿ ನಿರ್ಮಾಣಕ್ಕೆ ಭಾರೀ ಡಿಮ್ಯಾಂಡ್ ಅಪ್ಪು ಅಭಿಮಾನಿಗಳು ತಮ್ಮ ತಮ್ಮ ಏರಿಯಾಗಳಲ್ಲಿ ಕೂರಿಸಲು ಅಪ್ಪು ಪುತ್ಥಳಿ‌ ನಿರ್ಮಾಣಕ್ಕೆ ಆರ್ಡರ್ ಕೊಡುತ್ತಿದ್ದಾರೆ. ಬೆಂಗಳೂರಿನಲ್ಲಿ ಕಳೆದ ಭಾನುವಾರದಂದೆ ಒಂದು ಸಾವಿರ ಅಪ್ಪು ಪುತ್ಥಳಿ ನಿರ್ಮಾಣಕ್ಕೆ ಅವರ ಅಭಿಮಾನಿಗಳು ಬೇಡಿಕೆ ಇಟ್ಟಿರುವುದಾಗಿ ಮಾಹಿತಿ ಸಿಕ್ಕಿದೆ. ಅಪ್ಪು ಫ್ಯಾನ್ಸ್ ಬೆಂಗಳೂರಿನಲ್ಲಿರೋ ಪ್ರತಿ ಶಿಲ್ಪಿಗೂ ಕರೆ ಮಾಡುತ್ತಿದ್ದು ನಗರದಲ್ಲಿರುವ ಒಬ್ಬೊಬ್ಬ ಶಿಲ್ಪಿಗೂ ಸುಮಾರು 60-70 ಪುತ್ಥಳಿಗಳ ನಿರ್ಮಾಣಕ್ಕೆ ಬೇಡಿಕೆ ಬಂದಿದೆಯಂತೆ.

ಈಗಾಗಲೇ ಅಭಿಮಾನಿಗಳು ಅಡ್ವಾನ್ಸ್ ಕೊಟ್ಟು ಅಪ್ಪು ಪುತ್ಥಳಿ ನಿರ್ಮಾಣಕ್ಕೆ ಬುಕ್ ಮಾಡುತ್ತಿದ್ದಾರೆ. ಶಿಲ್ಪಿಗಳಿಗೆ, ಪುತ್ಥಳಿ ನಿರ್ಮಾಣ ಮಾಡುವ ಕಲಾವಿದರಿಗೆ ಅಪ್ಪು ಪುತ್ಥಳಿ ನಿರ್ಮಾಣ ಮಾಡಿಕೊಂಡುವಂತೆ ಮನವಿಗಳ ಕರೆಗಳು ಬರುತ್ತಿವೆ. ಚನ್ನಸಂಧ್ರದ ಶಿಲ್ಪಿಗೆ 60 ಜನ ಅಭಿಮಾನಿಗಳು ಕರೆ ಮಾಡಿದ್ದು, ಈಗಾಗಲೇ ಹತ್ತು ಪುತ್ಥಳಿ ನಿರ್ಮಾಣ ಮಾಡಿಕೊಡಲು ಬುಕ್ ಮಾಡಿದ್ದಾರಂತೆ. ನಗರದ ತುಂಬೆಲ್ಲ ಅಪ್ಪು ಪುತ್ಥಳಿ ಸ್ಥಾಪನೆಗೆ ಅಭಿಮಾನಿಗಳು ಸಜ್ಜಾಗುತ್ತಿದ್ದಾರೆ. ನಗರದೆಲ್ಲೆಡೆ ಬುಕಿಂಗ್ ಆರಂಭವಾಗಿದ್ದು ಅಪ್ಪು ಪುತ್ಥಳಿ ನಿರ್ಮಾಣ ಕಾರ್ಯ ಕೂಡ ಶುರುವಾಗಿದೆ. ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಭಾರೀ ಬೇಡಿಕೆ ಇದೆ.

ಇನ್ನು ಈ ಬಗ್ಗೆ ಶಿಲ್ಪಿ ಶಿವಕುಮಾರ್ ಮಾತನಾಡಿದ್ದು, ನನ್ನ ಕಲಾವಿದ ವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ಒಬ್ಬ ವ್ಯಕ್ತಿಯ ಪುತ್ಥಳಿ ನಿರ್ಮಾಣ ಆರ್ಡರ್ ಗಳು ಬಂದಿರೋದು. ಅಪ್ಪು ನಿಧನಹೊಂದಿ ಐದು ದಿನ ಕಳೆದಿದೆ ಅಷ್ಟರಲ್ಲಿ 69 ಜನ ಕರೆ ಮಾಡಿ ಪುತ್ಥಳಿ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಪ್ಪು ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಬುಕ್ ಮಾಡಲಾಗಿದೆ. ಪುನೀತ್ ಅವರ ನಗುವಿನ ಪುತ್ಥಳಿ ನಿರ್ಮಾಣ ಮಾಡ್ತೇವೆ ಎಂದು ತಿಳಿಸಿದ್ದಾರೆ.

ಹೈಕೋರ್ಟ್ ಮಾರ್ಗಸೂಚಿ ಬಗ್ಗೆ ತಲೆ ಕೆಡಿಸಿಕೊಂಡ ಬಿಬಿಎಂಪಿ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಪ್ಪು ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಬುಕ್ ಮಾಡಲಾಗಿದೆ. ಆದರೆ ಸಾರ್ವಜನಿಕ ಸ್ಥಳಗಳಲ್ಲಿ ಪುತ್ಥಳಿ ಸ್ಥಾಪಿಸಬಾರದು ಎಂದು ಹೈಕೋರ್ಟ್ ಮಾರ್ಗಸೂಚಿ ಇರುವುದರಿಂದ ಅನುಮತಿ ಪಡೆದು, ಸ್ಥಾಪಿಸುವ ಬಗ್ಗೆ ಬಿಬಿಎಂಪಿ ಚಿಂತಿಸುತ್ತಿದೆ.

ಇದನ್ನೂ ಓದಿ: ಪುನೀತ್ ರಾಜ್​ಕುಮಾರ್​​ಗೆ ನಾನ್​ವೆಜ್​​ ಎಂದರೆ ಅದೆಷ್ಟು ಪ್ರೀತಿಯಾಗಿತ್ತು; ಇಲ್ಲಿದೆ ವಿಡಿಯೋ

Published On - 11:05 am, Wed, 3 November 21