Puneeth Rajkumar: ಒಂದು ಸ್ಟೆಪ್ ಹಾಕ್ತೀವಿ ಎದ್ದು ಬನ್ನಿ ಅಪ್ಪು; ಪುನೀತ್ ದರ್ಶನಕ್ಕೆ ಬಂದ ಮಕ್ಕಳ ಮಾತಿಗೆ ನೆರೆದವರು ಭಾವುಕ
ಪುನೀತ್ ರಾಜಕುಮಾರ್: ನಟ ಪುನೀತ್ ರಾಜಕುಮಾರ್ ಅವರ ಸಮಾಧಿಯ ದರ್ಶನ ಪಡೆಯಲು ರಾಜ್ಯದ ವಿವಿಧ ಭಾಗದಿಂದ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ವಿಶೇಷವಾಗಿ ಮಕ್ಕಳು ಹಾಗೂ ವೃದ್ಧರು ಕೂಡ ಆಗಮಿಸುತ್ತಿದ್ದು, ಅಪ್ಪು ದರ್ಶನ ಮಾಡಿ ಕಣ್ಣೀರಾಗುತ್ತಿದ್ದಾರೆ.
ಬೆಂಗಳೂರು: ಇಂದಿನಿಂದ ನಟ ಪುನೀತ್ ರಾಜಕುಮಾರ್ ಅಭಿಮಾನಿಗಳಿಗೆ ಸಮಾಧಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕಳೆದ ಕೆಲವು ದಿನದಿಂದ ಕಾಯುತ್ತಿದ್ದ ಅಭಿಮಾನಿಗಳು, ಇಂದು ದರ್ಶನ ಪಡೆದು ನಮನ ಸಲ್ಲಿಸುತ್ತಿದ್ಧಾರೆ. ರಾಜ್ಯದ ವಿವಿಧ ಭಾಗದಿಂದ ಹಿರಿಯರು, ಮಕ್ಕಳು ಸೇರಿದಂತೆ ಅಭಿಮಾನಿಗಳು ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಪುನೀತ್ ಸಮಾಧಿಯ ಸಮೀಪಕ್ಕೆ ತೆರಳಿ ದರ್ಶನ ಮಾಡುವ ಅವಕಾಶ ಕಲ್ಪಿಸಲಾಗಿದ್ದು, ಅಭಿಮಾನಿಗಳು ಪುನೀತ್ ಅವರನ್ನು ದರ್ಶಿಸಿ ನಮನ ಸಲ್ಲಿಸುತ್ತಿದ್ದಾರೆ. ಬಿಗಿ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದ್ದು, ಸರತಿ ಸಾಲಿನಲ್ಲಿ ಆಗಮಿಸಿ ದರ್ಶನ ಪಡೆಯಬಹುದಾಗಿದೆ. ಸಮಾಧಿಯ ಸುತ್ತ ಬ್ಯಾರಿಕೇಡ್ಗಳನ್ನು ಅಳವಡಿಸಿ ಭದ್ರತೆ ಏರ್ಪಡಿಸಲಾಗಿದೆ. ಅಪ್ಪು ದರ್ಶನಕ್ಕೆ ವಿಶೇಷವಾಗಿ ಮಕ್ಕಳು ಆಗಮಿಸುತ್ತಿದ್ದು, ಪುನೀತ್ ತಮ್ಮ ನೃತ್ಯ ಶಾಲೆಗೆ ಬರುತ್ತೇವೆಂದು ಹೇಳಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ಪುನೀತ್ ದರ್ಶನಕ್ಕೆ ಪುಟ್ಟ ಕಂದಮ್ಮಗಳೂ ಆಗಮಿಸುತ್ತಿದ್ದು, ಅಪ್ಪು ನಮ್ಮ ಡ್ಯಾನ್ಸ್ ಕ್ಲಾಸ್ಗೆ ಬರ್ತೀನಿ ಅಂದಿದ್ರು. ಈಗ ಯಾರು ಬರ್ತಾರೆ? ಎಂದು ಕಣ್ಣೀರಿಟ್ಟಿದ್ದಾರೆ. ಅಪ್ಪು ಎಂದರೆ ನಮಗೆ ತುಂಬಾ ಇಷ್ಟ. ಡಾನ್ಸ್ ಮಾಡ್ತೀನಿ ಎದ್ದು ಬನ್ನಿ ಎಂದು ಪುಟ್ಟ ಕಂದ ಸಂಸ್ಕೃತಿ ನುಡಿದಾಗ ನೆರೆದಿದ್ದವರು ಭಾವುಕರಾಗಿದ್ದಾರೆ.
ಮದ್ದೂರಿನಿಂದ ಬಂದ ಗೌರಮ್ಮ ಎಂಬ ಮಹಿಳೆಯೋರ್ವರು, ಅಪ್ಪು ತಮ್ಮ ಸೊಸೆಯ ಹೊಟ್ಟೆಯಲ್ಲಿ ಹುಟ್ಟಿ ಬರಲಿ ಎಂದಿದ್ದಾರೆ. ‘‘ಅಪ್ಪು ಇಷ್ಟು ಬೇಗ ಕಳೆದುಕೊಳ್ತೀವಿ ಅಂತ ಅಂದುಕೊಂಡಿರಲಿಲ್ಲ. ಅವರು ಮಾಡ್ತಾ ಇದ್ದ ಸಮಾಜ ಸೇವೆ ಯಾರಿಗೂ ಗೊತ್ತಾಗ್ತಾ ಇರಲಿಲ್ಲ. ಗೊತ್ತಾದ ಮೇಲೆ ಅವರ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಾಗಿದೆ’’ ಎಂದು ಅವರು ಹೇಳಿದ್ದಾರೆ.
ಪುನೀತ್‌ಗೆ ಪದ್ಮಶ್ರೀ ನೀಡಲು ಆಗ್ರಹ: ನಟ ಪುನೀತ್‌ಗೆ ಪದ್ಮಶ್ರೀ ನೀಡಬೇಕೆಂದು ದಾವಣಗೆರೆ ಜಿಲ್ಲೆ ರುದ್ರಾಪುರದ ಸೇವಾನಗರದ ನಿವಾಸಿಗಳು ಆಗ್ರಹಿಸಿದ್ದಾರೆ. ಗ್ರಾಮಸ್ಥರು ಸಭೆ ಸೇರಿ, ಅಪ್ಪುಗೆ ಪದ್ಮಶ್ರೀ ನೀಡಬೇಕೆಂದು ಒತ್ತಾಯಿಸಿದ್ದಾರೆ. ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶಾಲಾ ಮಕ್ಕಳಿಂದ ಪುನೀತ್ ಹಾಡುಗಳನ್ನು ಗ್ರಾಮಸ್ಥರು ಹಾಡಿಸಿದ್ದಾರೆ. ಗ್ರಾಮದ ಪ್ರವೇಶ ದ್ವಾರದ ಬಳಿ ನಟ ಪುನೀತ್ ನಾಮಫಲಕವನ್ನೂ ಗ್ರಾಮದ್ಥರು ಹಾಕಿದ್ದಾರೆ.
ಇದನ್ನೂ ಓದಿ:
Puneeth Rajkumar Death: ತುಮಕೂರಿನಲ್ಲಿ ಮತ್ತೊಬ್ಬ ಪುನೀತ್ ರಾಜ್ಕುಮಾರ್ ಅಭಿಮಾನಿ ಸಾವು
Published On - 11:38 am, Wed, 3 November 21