AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Puneeth Rajkumar Death: ತುಮಕೂರಿನಲ್ಲಿ ಮತ್ತೊಬ್ಬ ಪುನೀತ್ ರಾಜ್​ಕುಮಾರ್ ಅಭಿಮಾನಿ ಸಾವು

ತುಮಕೂರು ತಾಲೂಕಿನ ಹಿರೇಹಳ್ಳಿಯ ಅಪ್ಪು ಶ್ರೀನಿವಾಸ್ (32) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಎರಡು ದಿನಗಳ ಕಾಲ ಪುನೀತ್ ಅಂತಿಮ ದರ್ಶನ ಪಡೆದಿದ್ದ ಅಪ್ಪು ಶ್ರೀನಿವಾಸ್ ಅಂತಿಮ ದರ್ಶನ ಪಡೆದು ಮನೆಗೆ ಮರಳಿದಾಗ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

Puneeth Rajkumar Death: ತುಮಕೂರಿನಲ್ಲಿ ಮತ್ತೊಬ್ಬ ಪುನೀತ್ ರಾಜ್​ಕುಮಾರ್ ಅಭಿಮಾನಿ ಸಾವು
ತುಮಕೂರಿನಲ್ಲಿ ಮತ್ತೊಬ್ಬ ಪುನೀತ್ ರಾಜ್ಕುಮಾರ್ ಅಭಿಮಾನಿ ಸಾವು
TV9 Web
| Updated By: ಆಯೇಷಾ ಬಾನು|

Updated on:Nov 03, 2021 | 11:05 AM

Share

ತುಮಕೂರು: ಅಕ್ಟೋಬರ್ 29 ಇಡೀ ಕರ್ನಾಟಕ ಬಿಕ್ಕಿ ಬಿಕ್ಕಿ ಅತ್ತಿತ್ತು. ಅಂದು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ತಮ್ಮ ಕೋಟ್ಯಾಂತರ ಅಭಿಮಾನಿ ಬಳಗವನ್ನು ಬಿಟ್ಟು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದರು. ಈ ದಿಡೀರ್ ಘಟನೆ ನಡೆದು 6 ದಿನಗಳೆದರೂ ಅಪ್ಪು ನಮ್ಮ ಜೊತೆ ಇರಲ್ಲ ಎಂಬ ಸತ್ಯವನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅವರ ಮುದ್ದು ನಗು ಮುಖ ಕಣ್ಣಿಂದ ಕೆಲ ಕ್ಷಣವೂ ಮರೆಯಾಗುತ್ತಿಲ್ಲ. ಅಗಲಿದ ಅಪ್ಪು ಇನ್ನಿಲ್ಲ ಎಂಬುದನ್ನು ಯೋಚಿಸಲೂ ಸಾಧ್ಯವಾಗದೆ ಅಪ್ಪಟ ಅಭಿಮಾನಿಗಳು ಅಪ್ಪುವನ್ನೇ ಹಿಂಬಾಲಿಸುತ್ತಿದ್ದಾರೆ. 6 ದಿನಗಳೆದರೂ ಅಭಿಮಾನಿಗಳ ಸಾವು ನಿಂತಿಲ್ಲ. ತುಮಕೂರಿನಲ್ಲಿ ಮತ್ತೊಬ್ಬ ಪುನೀತ್ ಅಭಿಮಾನಿ ಮೃತಪಟ್ಟಿದ್ದಾರೆ.

ತುಮಕೂರು ತಾಲೂಕಿನ ಹಿರೇಹಳ್ಳಿಯ ಅಪ್ಪು ಶ್ರೀನಿವಾಸ್ (32) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಎರಡು ದಿನಗಳ ಕಾಲ ಪುನೀತ್ ಅಂತಿಮ ದರ್ಶನ ಪಡೆದಿದ್ದ ಅಪ್ಪು ಶ್ರೀನಿವಾಸ್ ಅಂತಿಮ ದರ್ಶನ ಪಡೆದು ಮನೆಗೆ ಮರಳಿದಾಗ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಿಸದೆ ಜಿಲ್ಲಾಸ್ಪತ್ರೆಯಲ್ಲಿ ಶ್ರೀನಿವಾಸ್ ಕೊನೆಯುಸಿರೆಳೆದಿದ್ದಾರೆ. ನಿನ್ನೆ ಸಂಜೆ ಹೆಬ್ಬೂರಿನಲ್ಲಿ ಭರತ್ ಎಂಬ ಅಪ್ಪು ಅಭಿಮಾನಿ ಆತ್ಮಹತ್ಯೆ ಮಾಡಿಕೊಂಡಿದ್ದ. ಜಿಲ್ಲೆಯಲ್ಲಿ ಒಟ್ಟು ಇಬ್ಬರು ಪುನೀತ್ ಅಭಿಮಾನಿಗಳು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಪುನೀತ್ ಹಠಾತ್ ನಿಧನದಿಂದ ರಾಜ್​ಕುಮಾರ್ ಹೆಸರಿನ ಹೋಟೆಲ್ ನಡೆಸುತ್ತಿದ್ದ ಅಭಿಮಾನಿ ಸಾವು!

Published On - 9:51 am, Wed, 3 November 21