Puneeth Rajkumar: ಪುನೀತ್ ದಾರಿಯನ್ನೇ ಕಾಯುತ್ತಿವೆ ಅವರ ನೆಚ್ಚಿನ 10 ಸೈಕಲ್​ಗಳು

Puneeth Rajkumar: ಪುನೀತ್ ದಾರಿಯನ್ನೇ ಕಾಯುತ್ತಿವೆ ಅವರ ನೆಚ್ಚಿನ 10 ಸೈಕಲ್​ಗಳು

TV9 Web
| Updated By: shivaprasad.hs

Updated on:Nov 03, 2021 | 8:21 AM

ನಟ ಪುನೀತ್ ರಾಜಕುಮಾರ್ ಅವರಿಗೆ ಕಾರುಗಳಷ್ಟೇ ಸೈಕಲ್​ಗಳ ಮೇಲೂ ಪ್ರೀತಿ. ಲಾಕ್​ಡೌನ್ ಸಮಯದಲ್ಲಿ ಸೈಕಲ್​ನಲ್ಲಿ ಬೆಂಗಳೂರು ಸುತ್ತುತ್ತಿದ್ದ ಅವರು, ಆ ವಿಡಿಯೋಗಳನ್ನು ಪಿಆರ್​ಕೆ ಯೂಟ್ಯೂಬ್ ಚಾನಲ್​ನಲ್ಲಿ ಹಂಚಿಕೊಂಡಿದ್ದರು.

ನಟ ಪುನೀತ್ ರಾಜಕುಮಾರ್ ಅವರಿಗೆ ಕಾರುಗಳಷ್ಟೇ ಸೈಕಲ್​ಗಳೂ ಪಂಚಪ್ರಾಣ. ಆದ್ದರಿಂದಲೇ ಅವರ ಗ್ಯಾರೇಜ್​ನಲ್ಲಿ 12 ಕಾರುಗಳ ಜೊತೆಗೆ 10 ಸೈಕಲ್​ಗಳೂ ಇದ್ದವು. ಲಾಕ್​ಡೌನ್ ಸಮಯದಲ್ಲಿ ಸೈಕಲ್​ನಲ್ಲಿಯೇ ಬೆಂಗಳೂರನ್ನು ಸುತ್ತುತ್ತಿದ್ದರಂತೆ ಅಪ್ಪು. ಈಗ ಅವರಿಲ್ಲದೇ ಸೈಕಲ್​ಗಳೆಲ್ಲವೂ ಅನಾಥವಾಗಿವೆ. ಶೂಟಿಂಗ್ ಇಲ್ಲದ ಸಮಯದಲ್ಲಿ ಸ್ನೇಹಿತರ ಜೊತೆ ಸೇರಿ ಪುನೀತ್ ನಂದಿ ಬೆಟ್ಟಕ್ಕೆ ಸೈಕ್ಲಿಂಗ್ ಹೋಗಿದ್ರಂತೆ. ಅಷ್ಟೇ ಅಲ್ಲ ಅವರ ಬಳಿ ಇರುವ ಸೈಕಲ್ ಅನ್ನು ಯಾರಾದರೂ ಕೇಳಿದರೆ ಸುತ್ತಲು ಕೊಟ್ಟು ಕಳುಹಿಸುತ್ತಿದ್ದರಂತೆ. ಈಗ ಸೈಕಲ್​ಗಳು ಪುನೀತ್​ರನ್ನು ಮಿಸ್ ಮಾಡಿಕೊಳ್ಳುತ್ತಿವೆ.

ಪುನೀತ್ ರಾಜಕುಮಾರ್ ಅವರ ಬಳಿ 10 ಸೈಕಲ್ ಗಳಿದ್ದು, ಅವುಗಳಲ್ಲಿ ಹಳದಿ ಬಣ್ಣದ ಸೈಕಲ್, ಗ್ರೇ ವಿತ್ ರೆಡ್ ಸೈಕಲ್, ಆರೇಂಜ್ ಸೈಕಲ್ ಅಪ್ಪು ಅವರಿಗೆ ಸಖತ್ ಅಚ್ಚು ಮೆಚ್ಚಿನ ಸೈಕಲ್​ಗಳಾಗಿದ್ದವಂತೆ. ಅಲ್ಲದೆ ಲಾಕ್ ಡೌನ್ ವೇಳೇ ಅಪ್ಪು ಆರೆಂಜ್ ಕಲರ್ ಸೌಕಲ್​ನಲ್ಲೆ ಬೆಂಗಳೂರಲ್ಲಿ ಒಂದ್ ರೌಂಡ್ ಹಾಕಿ ಎಂಜಾಯ್ ಮಾಡಿದ್ರು. ಇದೀಗ ಅವರ ಕಾರು, ಸೈಕಲ್​ಗಳು ಅಪ್ಪು ದಾರಿಯನ್ನೇ ಕಾಯುತ್ತಾ ಕುಳಿತಿವೆ.

ಇದನ್ನೂ ಓದಿ:

ಪುನೀತ್​ ರಾಜ್​ಕುಮಾರ್​ ಸಾವಿನಲ್ಲೂ ಲಾಭ ಪಡೆದ ರಣಹದ್ದುಗಳು; ಆಕ್ರೋಶ ಹೊರ ಹಾಕಿದ ಅಭಿಮಾನಿಗಳು

ಪುನೀತ್ ರಾಜಕುಮಾರ್ ಅವರಿಗೆ ರೀಯಲ್ ಲೈಫ್​ನಲ್ಲಂತೆ ರೀಲ್ ಲೈಫ್​ನಲ್ಲೂ ಓಡಿಸಿದ್ದು ಥರಾವರಿ ಬೈಕ್​​ಗಳು

Published on: Nov 03, 2021 08:15 AM