AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುನೀತ್ ರಾಜಕುಮಾರ್ ಅವರಿಗೆ ರೀಯಲ್ ಲೈಫ್​ನಲ್ಲಂತೆ ರೀಲ್ ಲೈಫ್​ನಲ್ಲೂ ಓಡಿಸಿದ್ದು ಥರಾವರಿ ಬೈಕ್​​ಗಳು

ಪುನೀತ್ ರಾಜಕುಮಾರ್ ಅವರಿಗೆ ರೀಯಲ್ ಲೈಫ್​ನಲ್ಲಂತೆ ರೀಲ್ ಲೈಫ್​ನಲ್ಲೂ ಓಡಿಸಿದ್ದು ಥರಾವರಿ ಬೈಕ್​​ಗಳು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Nov 02, 2021 | 8:13 PM

Share

ಹಾಗೆ ನೋಡಿದರೆ, ಅಪ್ಪುಗೆ ಬುಲೆಟ್ ಬೈಕ್ ಮೇಲೆ ಇನ್ನಿಲ್ಲದ ಪ್ರೀತಿ. ‘ಅಣ್ಣಾ ಬಾಂಡ್’ ಅಲ್ಲದೆ, ‘ದೊಡ್ಮನೆ ಹುಡುಗ’, ‘ಅಂಜಿನಿ ಪುತ್ರ’, ’ನಟಸಾರ್ವಭೌಮ’, ‘ಯುವರತ್ನ’ ಮತ್ತು ‘ಪೃಥ್ವಿ’ ಚಿತ್ರಗಳಲ್ಲಿ ಅವರು ಬುಲೆಟ್ ಬೈಕ್ ಅನ್ನೇ ಬಳಸಿದ್ದಾರೆ.

ಪುನೀತ್ ರಾಜಕುಮಾರ್ ಅವರಿಗೆ ರೀಯಲ್ ಲೈಫ್ನಲ್ಲಿ ಬೈಕ್ ಗಳ ಮೇಲಿದ್ದ ವ್ಯಾಮೋಹ ಎಲ್ಲರಿಗೂ ಗೊತ್ತಿದೆ. ಸಿನಿಮಾಗಳಲ್ಲೂ ಅವರು ಬಗೆಬಗೆಯ ಬೈಕ್ಗಳನ್ನು ಓಡಿಸಿದ್ದರು. ಅವರು ಓಡಿಸಿದ ಬೈಕ್ಗಳಲ್ಲಿ ದೇಶೀಯ ಜೊತೆಗೆ ವಿದೇಶದ ಬೈಕ್ಗಳೂ ಸೇರಿವೆ. ಸೂಪರ್ ಹಿಟ್ ‘ಮಿಲನ’ ಚಿತ್ರದಲ್ಲಿ ಅವರು ಓಡಿಸಿದ್ದು ಕವಾಸಾಕಿ ಆರ್1 ಮೊಟಾರ್ ಸೈಕಲ್. ಸಿನಿಮಾಗಳಲ್ಲಿ ಅವರು ಓಡಿಸಿದ ಬೈಕ್ಗಳಲ್ಲಿ ಎಲ್ಲರ ಗಮನ ಸೆಳೆದಿದ್ದು ಅಂದರೆ, ‘ಅಣ್ಣಾ ಬಾಂಡ್’ ಚಿತ್ತದಲ್ಲಿ ಅಸ್ಥಿ ಪಂಜರದ ಹಾಗೆ ಮಾಡಿಫೈ ಮಾಡಿದ್ದ ರಾಯಲ್ ಎನ್ ಫೀಲ್ಡ್ ಬುಲೆಟ್ ಗಾಡಿ. ಆ ಚಿತ್ರದ ನಿರ್ದೇಶಕ ಸೂರಿ ಅವರಿಗೆ ಬೈಕಿಗೆ ಆ ರೂಪ ಕೊಡಬೇಕು ಅಂತ ಯಾಕೆ ಅನಿಸಿತೋ?

ಹಾಗೆ ನೋಡಿದರೆ, ಅಪ್ಪುಗೆ ಬುಲೆಟ್ ಬೈಕ್ ಮೇಲೆ ಇನ್ನಿಲ್ಲದ ಪ್ರೀತಿ. ‘ಅಣ್ಣಾ ಬಾಂಡ್’ ಅಲ್ಲದೆ, ‘ದೊಡ್ಮನೆ ಹುಡುಗ’, ‘ಅಂಜಿನಿ ಪುತ್ರ’, ’ನಟಸಾರ್ವಭೌಮ’, ‘ಯುವರತ್ನ’ ಮತ್ತು ‘ಪೃಥ್ವಿ’ ಚಿತ್ರಗಳಲ್ಲಿ ಅವರು ಬುಲೆಟ್ ಬೈಕ್ ಅನ್ನೇ ಬಳಸಿದ್ದಾರೆ.

ಅಂದಹಾಗೆ, ಜಾಕಿ ಚಿತ್ರದಲ್ಲಿ ಅವರು ಓಡಿಸಿದ್ದು ಯಮಾಹಾ ಆರ್ ಎಕ್ಸ್ 135 ಬೈಕ್. ಇದೇ ಸಿನಿಮಾದ ಹಾಡಿನ ಸೀಕ್ವೆನ್ಸ್ ನಲ್ಲಿ ಅವರು ಹಾರ್ಲೀ ಡೇವಿಡ್ಸನ್ ಬೈಕ್ ಓಡಿಸಿದ್ದರು.

ಹೊಸ ತಲೆಮಾರಿನ ಹುಡುಗರಿಗೆ ಕೆಟಿಎಮ್ ಬೈಕ್ ಬಹಳ ಇಷ್ಟವಾಗುತ್ತದೆ. ಅದು ಗೊತ್ತಿದ್ದ ಅಪ್ಪು ತಮ್ಮ ‘ಚಕ್ರವ್ಯೂಹ’ ಚಿತ್ರದಲ್ಲಿ ಈ ಬೈಕ್ ಬಳಸಿದ್ದರು. ಅವರಿಗೆ ಬೈಕ್​​ಗಳ  ಮೇಲೆ ಅದೆಂಥ ಪ್ರೀತಿ ಎಂದರೆ, ಶೂಟಿಂಗ್ ಬಂದವರ ಪೈಕಿ ಯಾರಲ್ಲಾದರೂ ಆಕರ್ಷಕ ಬೈಕ್ ಕಾಣಿಸಿದರೆ ಅವರಿಂದ ಇಸಿದುಕೊಂಡು ಒಂದು ರೌಂಡ್ ಹೋಗಿಬರುತ್ತಿದ್ದರು.

ಇದನ್ನೂ ಓದಿ:   ಪುನೀತ್​ ನಿಧನದಿಂದ ಮಕ್ಕಳ ಮನಸ್ಸಿಗೆ ಘಾಸಿ; ‘ಅಪ್ಪು ಅಣ್ಣ ಬೇಕು’ ಅಂತ ಅಳುವ ಕಂದಮ್ಮಗಳ ವಿಡಿಯೋ ವೈರಲ್​