ಪುನೀತ್​ ನಿಧನದಿಂದ ಮಕ್ಕಳ ಮನಸ್ಸಿಗೆ ಘಾಸಿ; ‘ಅಪ್ಪು ಅಣ್ಣ ಬೇಕು’ ಅಂತ ಅಳುವ ಕಂದಮ್ಮಗಳ ವಿಡಿಯೋ ವೈರಲ್​

Puneeth Rajkumar: ಈ ದೃಶ್ಯಗಳನ್ನು ನೋಡಿದರೆ ನಿಜಕ್ಕೂ ಮನ ಕಲಕುತ್ತದೆ. ಇಷ್ಟು ಒಳ್ಳೆಯ ವ್ಯಕ್ತಿಯನ್ನು ದೇವರು ಯಾಕೆ ಇಷ್ಟು ಬೇಗ ಕರೆಸಿಕೊಂಡ ಎಂಬ ಪ್ರಶ್ನೆ ಕಾಡುತ್ತದೆ. ಆದರೆ ಈ ಪ್ರಶ್ನೆ ಉತ್ತರ ಹೇಳೋರು ಯಾರು?

ಪುನೀತ್​ ನಿಧನದಿಂದ ಮಕ್ಕಳ ಮನಸ್ಸಿಗೆ ಘಾಸಿ; ‘ಅಪ್ಪು ಅಣ್ಣ ಬೇಕು’ ಅಂತ ಅಳುವ ಕಂದಮ್ಮಗಳ ವಿಡಿಯೋ ವೈರಲ್​
ಪುನೀತ್​ಗಾಗಿ ಅಳುತ್ತಿರುವ ಮಕ್ಕಳು
Follow us
| Updated By: ಮದನ್​ ಕುಮಾರ್​

Updated on:Oct 30, 2021 | 5:18 PM

ಕನ್ನಡ ಚಿತ್ರರಂಗದಲ್ಲಿ ಎಲ್ಲರಿಗಿಂತಲೂ ಭಿನ್ನವಾಗಿ ಗುರುತಿಸಿಕೊಂಡವರು ನಟ ಪುನೀತ್​ ರಾಜ್​ಕುಮಾರ್​. ಬಾಲನಟನಾಗಿ ಚಿತ್ರರಂಗಕ್ಕೆ ಬಂದ ಅವರ ಮನಸ್ಸು ಕೊನೆವರೆಗೂ ಮಗುವಿನ ರೀತಿಯೇ ಇತ್ತು. ಎಲ್ಲ ವಯೋಮಾನದವರ ಜೊತೆಗೆ ಅವರು ವಿನಯದಿಂದ ನಡೆದುಕೊಳ್ಳುತ್ತಿದ್ದರು. ವಿಶೇಷವಾಗಿ ಮಕ್ಕಳಿಗೆ ಪುನೀತ್​ ಎಂದರೆ ಸಖತ್​ ಇಷ್ಟ. ಈಗ ಅಪ್ಪು ನಮ್ಮೊಂದಿಗೆ ಇಲ್ಲ ಎಂಬುದನ್ನು ಮಕ್ಕಳು ಕೂಡ ಒಪ್ಪುತ್ತಿಲ್ಲ. ಪುನೀತ್​ ನಿಧನರಾಗಿದ್ದಾರೆ ಎಂಬ ಸುದ್ದಿ ತಿಳಿದು ಪುಟಾಣಿಗಳೆಲ್ಲ ಕಂಬನಿ ಸುರಿಸುತ್ತಿದ್ದಾರೆ. ರಾಜ್ಯದ ಮೂಲೆ ಮೂಲೆಗಳಲ್ಲಿ ಇರುವ ಮಕ್ಕಳು ರೋದಿಸುತ್ತಿದ್ದಾರೆ.

ಈ ಪರಿ ಅಭಿಮಾನಿಗಳನ್ನು ಕರುನಾಡಿನಲ್ಲಿ ಬೇರೆ ಯಾವ ನಟನೂ ಸಂಪಾದಿಸಿರಲಿಕ್ಕಿಲ್ಲ. ಮಕ್ಕಳು ಅಳುತ್ತಿರುವ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ಅವರನ್ನು ಸಮಾಧಾನ ಮಾಡಲು ಪೋಷಕರು ಕಷ್ಟಪಡುತ್ತಿದ್ದಾರೆ. ‘ಅಪ್ಪು ಸತ್ತಿಲ್ಲ’ ಎಂದು ಎಷ್ಟು ಹೇಳಿದರೂ ಕೂಡ ಮಕ್ಕಳು ಸಮಾಧಾನಗೊಳ್ಳುತ್ತಿಲ್ಲ. ಸತ್ಯ ತಿಳಿದುಕೊಂಡಿರುವ ಕಂದಮ್ಮಗಳೆಲ್ಲ ‘ಅಪ್ಪು ಅಣ್ಣ ಬೇಕು. ಪುನೀತ್​ ಅಂಕಲ್​ ಬೇಕು’ ಎಂದು ಗೋಳಾಡುತ್ತಿವೆ. ಈ ದೃಶ್ಯಗಳನ್ನು ನೋಡಿದರೆ ನಿಜಕ್ಕೂ ಮನ ಕಲಕುತ್ತದೆ. ಇಷ್ಟು ಒಳ್ಳೆಯ ವ್ಯಕ್ತಿಯನ್ನು ದೇವರು ಯಾಕೆ ಇಷ್ಟು ಬೇಗ ಕರೆಸಿಕೊಂಡ ಎಂಬ ಪ್ರಶ್ನೆ ಕಾಡುತ್ತದೆ. ಆದರೆ ಈ ಪ್ರಶ್ನೆ ಉತ್ತರ ಹೇಳೋರು ಯಾರು?

ಕಂಠೀರವ ಸ್ಟೇಡಿಯಂನಲ್ಲಿ ಪುನೀತ್​ ಅವರ ಪಾರ್ಥಿವ ಶರೀರವನ್ನು ಇರಿಸಲಾಗಿದೆ. ಶುಕ್ರವಾರ ಮಧ್ಯಾಹ್ನದಿಂದಲೂ ಅವರನ್ನು ನೋಡಲು ಜನಸಾಗರ ಹರಿದುಬರುತ್ತಿದೆ. ಆ ನೂಕು ನುಗ್ಗಲಿನ ನಡುವೆಯೂ ಮಹಿಳೆಯರು ಮತ್ತು ಮಕ್ಕಳು ಬಂದು ಪುನೀತ್​ಗಾಗಿ ಕಣ್ಣೀರು ಹಾಕುತ್ತಿದ್ದಾರೆ. ಎಷ್ಟೋ ಅಭಿಮಾನಿಗಳು ಅಸ್ವಸ್ಥರಾಗಿದ್ದಾರೆ. ಪುನೀತ್​ ಇನ್ನಿಲ್ಲ ಎಂಬ ಸುದ್ದಿ ತಿಳಿದು ಕೆಲವರು ಹೃದಯಾಘಾತಕ್ಕೆ ಒಳಗಾಗಿ ನಿಧನರಾಗಿದ್ದಾರೆ.

ಈ ಎಲ್ಲ ಘಟನೆಗಳಿಂದ ಕರುನಾಡಿನಲ್ಲಿ ಕತ್ತಲು ಆವರಿಸಿದೆ. ಪುನೀತ್​ ಪುತ್ರಿ ಧೃತಿ ಅವರು ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಿದ್ದರು. ತಂದೆಯ ಸಾವಿನ ವಿಷಯ ತಿಳಿಯುತ್ತಿದ್ದಂತೆಯೇ ಅವರು ನ್ಯೂಯಾರ್ಕ್​ನಿಂದ ಹೊರಟರು. ವಿಮಾನ ಪ್ರಯಾಣದ ಮೂಲಕ ಇಂದು (ಅ.30) ಮಧ್ಯಾಹ್ನ ಬೆಂಗಳೂರಿಗೆ ಬಂದು ಇಳಿದಿದ್ದಾರೆ. ಇನ್ನೂ ಲಕ್ಷಾಂತರ ಜನರು ಪುನೀತ್​ ಅವರ ಅಂತಿಮ ದರ್ಶನ ಪಡೆಯಲು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ (ಅ.31) ಕೂಡ ಅವಕಾಶ ಮಾಡಿಕೊಡಲಾಗುತ್ತಿದೆ.

ಇದನ್ನೂ ಓದಿ:

Puneeth Rajkumar: ‘ನನ್ನ ತಮ್ಮ ರಾಯಲ್​ ಆಗಿಯೇ ಇರುತ್ತಾನೆ’; ಕ್ರೂರ ವಿಧಿಯಿಂದ ಸುಳ್ಳಾಯ್ತು ಶಿವಣ್ಣನ ಈ ಮಾತು

‘ಪುನೀತ್​ ಸಾವಿನಿಂದ ಕಟು ಸತ್ಯ ಬಯಲಾಗಿದೆ’: ಆತಂಕದಲ್ಲೇ ಅನಿಸಿಕೆ ಹಂಚಿಕೊಂಡ ರಾಮ್​ ಗೋಪಾಲ್​ ವರ್ಮಾ

Published On - 5:16 pm, Sat, 30 October 21

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ