ಸಾಯುವ ಕೆಲವೇ ಗಂಟೆಗಳ ಮುನ್ನ ಪುನೀತ್​ ರಾಜ್​ಕುಮಾರ್​ ಮಾತನಾಡಿದ್ದೇನು? ಆಡಿಯೋ ಕ್ಲಿಪ್ ವೈರಲ್​

ಪುನೀತ್ ಮೃತಪಟ್ಟ ದಿನ ಶಿವರಾಜ್​ಕುಮಾರ್​ ನಟನೆಯ ‘ಭಜರಂಗಿ 2’ ಸಿನಿಮಾ ರಿಲೀಸ್​ ಆಗಿತ್ತು.ಈ ಸಿನಿಮಾ ಬಗ್ಗೆ ಪುನೀತ್​ ಕೂಡ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದರು.

ಸಾಯುವ ಕೆಲವೇ ಗಂಟೆಗಳ ಮುನ್ನ ಪುನೀತ್​ ರಾಜ್​ಕುಮಾರ್​ ಮಾತನಾಡಿದ್ದೇನು? ಆಡಿಯೋ ಕ್ಲಿಪ್ ವೈರಲ್​
ಮಂಜುನಾಥ್​ ಮತ್ತು ಪುನೀತ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 30, 2021 | 5:39 PM

ಪುನೀತ್​ ರಾಜ್​ಕುಮಾರ್​ ಅವರು ಇನ್ನಿಲ್ಲ ಎಂಬ ವಿಚಾರವನ್ನು ಯಾರೆಂದರೆ ಯಾರ ಬಳಿಯೂ ಒಪ್ಪಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಕನ್ನಡ ನಾಡಿನ ಬಗ್ಗೆ, ಕನ್ನಡ ಜನತೆ ಬಗ್ಗೆ ಅವರು ಇಟ್ಟುಕೊಂಡಿದ್ದ ಪ್ರೀತಿಯನ್ನು ಯಾರು ಕೂಡ ಮರೆಯೋಕೆ ಸಾಧ್ಯವಿಲ್ಲ. ಪುನೀತ್​ ಅವರು ಏಕಾಏಕಿ ಕೋಟ್ಯಂತರ ಅಭಿಮಾನಿಗಳನ್ನು ತೊರೆದು ಹೋಗಿದ್ದಾರೆ. ಅವರ ಅಂತಿಮ ದರ್ಶನ ಪಡೆಯೋಕೆ ಕೋಟ್ಯಂತರ ಅಭಿಮಾನಿಗಳು ಆಗಮಿಸಿದ್ದಾರೆ. ಈ ಮಧ್ಯೆ ಸಾಯುವುದಕ್ಕೂ ಮೊದಲು ಅವರು ದೂರವಾಣಿ ಮೂಲಕ  ಮಾತನಾಡಿದ್ದ ಆಡಿಯೋ ಕ್ಲಿಪ್​ ಒಂದು ವೈರಲ್​ ಆಗಿದೆ. ಈ ಆಡಿಯೋ ಕ್ಲಿಪ್​ನಲ್ಲಿ ಸಾಕಷ್ಟು ವಿಚಾರಗಳಿವೆ.

ಪುನೀತ್ ಮೃತಪಟ್ಟ ದಿನ ಶಿವರಾಜ್​ಕುಮಾರ್​ ನಟನೆಯ ‘ಭಜರಂಗಿ 2’ ಸಿನಿಮಾ ರಿಲೀಸ್​ ಆಗಿತ್ತು.ಈ ಸಿನಿಮಾ ಬಗ್ಗೆ ಪುನೀತ್​ ಕೂಡ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದರು. ಈ ಕಾರಣಕ್ಕೆ ಅವರು, ಈ ಚಿತ್ರದ ಪ್ರೀ ರಿಲೀಸ್ ಇವೆಂಟ್​ಗೆ ತೆರಳಿ ಶುಭ ಕೋರಿದ್ದರು. ಸಾಯುವ ಕೆಲವೇ ಗಂಟೆಗಳ ಮೊದಲು ಸಿನಿಮಾ ವಿತರಕ ಮಂಜುನಾಥ್​​ಗೆ ಕರೆ ಮಾಡಿ ಮಾತನಾಡಿದ್ದರು ಅಪ್ಪು. ಈ ವೇಳೆ ಸಿನಿಮಾ ಹೇಗಿತ್ತು ಎಂದು ಮಂಜುನಾಥ್​ ಬಳಿ ಅವರು ಪ್ರಶ್ನೆ ಮಾಡಿದ್ದರು. ಅವರ ಸಂಭಾಷಣೆ ಹೀಗಿದೆ.

ಮಂಜುನಾಥ್​: ಬಾಸ್​, ಗುಡ್​ ಮಾರ್ನಿಂಗ್​. ಪುನೀತ್​: ಗುಡ್​ ಮಾರ್ನಿಂಗ್​, ಸಿನಿಮಾ ಹೇಗಿದೆ? ಮಂಜುನಾಥ್: ಫಸ್ಟ್​ ಹಾಫ್​ ನಿಧಾನ ಎನಿಸಿತು. ಸಿಜಿ ಹಾಗೂ ದೃಶ್ಯಗಳು ಅದ್ದೂರಿಯಾಗಿ ಮೂಡಿ ಬಂದಿವೆ. ಸಿನಿಮಾ ಚೆನ್ನಾಗಿದೆ. ಪುನೀತ್​: ಶಂಕರ್​ನಾಗ್​ ಅಲ್ಲಿ ಯಾವುದು ಹಾಕಿದ್ದೀರಿ? ಮಂಜುನಾಥ್​: ‘ಭಜರಂಗಿ 2’ ಸಿನಿಮಾನೇ ಹಾಕಿದ್ದೇವೆ. ಮೂರು ಶೋ ಇದೆ. ಪುನೀತ್​: ಗುಡ್, ನವೆಂಬರ್​ 1ನೇ ತಾರೀಕಿನ ನಂತರ ಟೀಸರ್​ ಕಳುಹಿಸಿ ಕೊಡುತ್ತೇನೆ. ಅದನ್ನು ಚಿತ್ರಮಂದಿರದಲ್ಲಿ ಪ್ಲೇ ಮಾಡಿ. ಮಂಜುನಾಥ್​: ಮೊನ್ನೆ ತೋರಿಸಿದೀರಲ್ಲ. ಖಂಡಿತವಾಗಿಯೂ ಪ್ಲೇ ಮಾಡ್ತೀವಿ. ಕಳುಹಿಸಿಕೊಡಿ. ಪುನೀತ್​: ಥ್ಯಾಂಕ್​ಯೂ

ಇದನ್ನೂ ಓದಿ: ‘ಪುನೀತ್ ಜಿಮ್​ಗೆ ತೆರಳಿರಲಿಲ್ಲ’; ಮೃತಪಡುವುದಕ್ಕೂ ಮೊದಲು ನಡೆದಿದ್ದೇನು? ಕಣ್ಣೀರಿಡುತ್ತಲೇ ವಿವರಿಸಿದ ಅಪ್ಪು ಅಂಗರಕ್ಷಕ

‘ಆ ದೃಶ್ಯ ಇನ್ನೂ ನನ್ನನ್ನು ಕಾಡುತ್ತಿದೆ’; ಪುನೀತ್​ ರಾಜ್​ಕುಮಾರ್​ಗೆ ಸುದೀಪ್​ ಭಾವುಕ ನುಡಿ ನಮನ

ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ