‘ತುಂಬ ಸಂಕಟ ಆಗ್ತಿದೆ, ಕೈ ನಡುಗುತ್ತಿದೆ’; ಪುನೀತ್ ಬಗ್ಗೆ ಮಾತಾಡುತ್ತ ಮೌನ ತಾಳಿದ ರಚಿತಾ ರಾಮ್
‘ನನಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ತುಂಬ ಸಂಕಟ ಆಗುತ್ತಿದೆ. ಕೈ ನಡುಗುತ್ತಿದೆ’ ಎಂದು ರಚಿತಾ ಕಣ್ಣೀರು ಸುರಿಸಿದ್ದಾರೆ. ಕಂಠೀರವ ಸ್ಟೇಡಿಯಂಗೆ ಆಗಮಿಸಿ ಅವರು ಅಂತಿಮ ನಮನ ಸಲ್ಲಿಸಿದ್ದಾರೆ.
‘ನಟ ಸಾರ್ವಭೌಮ’ ಮತ್ತು ‘ಚಕ್ರವ್ಯೂಹ’ ಸಿನಿಮಾಗಳಲ್ಲಿ ಪುನೀತ್ ರಾಜ್ಕುಮಾರ್ ಮತ್ತು ರಚಿತಾ ರಾಮ್ ಜೊತೆಯಾಗಿ ನಟಿಸಿದ್ದರು. ಇಂದು (ಅ.30) ಪುನೀತ್ ಅವರ ಪಾರ್ಥಿವ ಶರೀರದ ದರ್ಶನ ಪಡೆದ ರಚಿತಾ ರಾಮ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗ ಅವರು ತುಂಬ ಸಂಕಟ ಆಗುತ್ತಿದೆ ಎಂದು ಅರ್ಧದಲ್ಲಿಯೇ ಮಾತು ನಿಲ್ಲಿಸಿದರು. ಅಪ್ಪು ನಿಧನದಿಂದ ಅಷ್ಟರಮಟ್ಟಿಗೆ ಅವರ ಮನಸ್ಸಿಗೆ ಘಾಸಿ ಆಗಿದೆ.
‘ಪುನೀತ್ ಜೊತೆ ನಟಿಸಲು ನಾನು ಪುಣ್ಯ ಮಾಡಿದ್ದೆ. ಅದು ನಮ್ಮ ತಾಯಿಯ ಆಸೆ ಆಗಿತ್ತು. ಅದಕ್ಕಾಗಿ ದೇವರಿಗೆ ನಾನು ಧನ್ಯವಾದ ಹೇಳಬೇಕು. ಮೊನ್ನೆತಾನೇ ಗುರುಕಿರಣ್ ಅವರ ಬರ್ತ್ಡೇ ಪಾರ್ಟಿಯಲ್ಲಿ ಪುನೀತ್ ಸಿಕ್ಕಿದ್ದರು. ರಾತ್ರಿ ಅವರು ಪಾರ್ಟಿ ಮುಗಿಸಿ ಹೊರಟಾಗ ಹುಷಾರು ಅಂತ ಹೇಳಿದ್ದೆ. ನನಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ತುಂಬ ಸಂಕಟ ಆಗುತ್ತಿದೆ. ಕೈ ನಡುಗುತ್ತಿದೆ’ ಎಂದು ರಚಿತಾ ಕಣ್ಣೀರು ಸುರಿಸಿದ್ದಾರೆ.
ಇದನ್ನೂ ಓದಿ:
ಪುನೀತ್ ನಿಧನದಿಂದ ಮಕ್ಕಳ ಮನಸ್ಸಿಗೆ ಘಾಸಿ; ‘ಅಪ್ಪು ಅಣ್ಣ ಬೇಕು’ ಅಂತ ಅಳುವ ಕಂದಮ್ಮಗಳ ವಿಡಿಯೋ ವೈರಲ್
‘ಪುನೀತ್ ಸಾವಿನಿಂದ ಕಟು ಸತ್ಯ ಬಯಲಾಗಿದೆ’: ಆತಂಕದಲ್ಲೇ ಅನಿಸಿಕೆ ಹಂಚಿಕೊಂಡ ರಾಮ್ ಗೋಪಾಲ್ ವರ್ಮಾ
ಅಸ್ಸಾಂನ ಬುಡಕಟ್ಟು ಮಹಿಳೆಯ ಪಾದ ಮುಟ್ಟಿ ನಮಸ್ಕರಿಸಿದ ಪ್ರಧಾನಿ ಮೋದಿ!
ಅಸ್ಸಾಂನಲ್ಲಿ 19,480 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದ ಮೋದಿ
ಸಿದ್ದರಾಮಯ್ಯ ಆಪ್ತ ಶಾಸಕನ ಕೈಯಲ್ಲಿ ಮಿಂಚಿದ 18 ಲಕ್ಷ ರೂ. ವಾಚ್
ನೌಕಾ ಡ್ರೋನ್ಗಳು, ಕ್ಷಿಪಣಿಗಳ ಭೂಗತ ಸುರಂಗದ ವಿಡಿಯೋ ಬಿಡುಗಡೆ ಮಾಡಿದ ಇರಾನ್

