ಪುನೀತ್ ರಾಜಕುಮಾರ್ ಬಳಸುತ್ತಿದ್ದ ಎಲ್ಲ ವಸ್ತುಗಳಿಗೆ ಅವುಗಳದ್ದೇ ಆದ ವೈಶಿಷ್ಟ್ಯತೆ ಇರುತ್ತಿತ್ತು! ಇಲ್ಲಿದೆ ವಿವರ

ಪುನೀತ್ ರಾಜಕುಮಾರ್ ಬಳಸುತ್ತಿದ್ದ ಎಲ್ಲ ವಸ್ತುಗಳಿಗೆ ಅವುಗಳದ್ದೇ ಆದ ವೈಶಿಷ್ಟ್ಯತೆ ಇರುತ್ತಿತ್ತು! ಇಲ್ಲಿದೆ ವಿವರ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 02, 2021 | 5:30 PM

ಪುನೀತ್ ಬಳಸುತ್ತಿದ್ದ ಸ್ನೀಕರ್ಸ್ ಸಹ ಯುವಕರಲ್ಲಿ ಕ್ರೇಜ್ ಹುಟ್ಟಿಸಿದ್ದವು. ಅವರು ಉಪಯೋಗಿಸುತ್ತಿದ್ದ ವಸ್ತುಗಳು ಯಾರಿಗಾದರೂ ಇಷ್ಟವಾಗಿ ಕೊಡಿ ಅಂತ ಕೇಳಿದರೆ, ಸಂತೋಷದಿಂದ ಕೊಟ್ಟುಬಿಡುತ್ತಿದ್ದರು.

ಪುನೀತ್ ರಾಜಕುಮಾರ ಅವರ ನಿಧನ ಹೊಂದಿ 5ನೇ ದಿನವಾದ ಮಂಗಳವಾರ ಅವರ ಕುಟುಂಬದ ಸದಸ್ಯರು ಹಾಲು ತುಪ್ಪ ಕಾರ್ಯ ನೆರವೇರಿಸಿದ್ದಾರೆ. ಅದೇ ಕಾರಣಕ್ಕೇ ಕಂಠೀರವ ಸ್ಟುಡಿಯೋ ಸುತ್ತ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿತ್ತು. ಮಾಧ್ಯಮವರು ಪ್ರತಿದಿನ ಪುನೀತ್ ಅವರನ್ನು ಕುರಿತ ಹೊಸ ಹೊಸ ವಿಷಯಗಳನ್ನು ಜನರಿಗೆ ತಿಳಿಸುತ್ತಿದ್ದಾರೆ. ಅವರ ಬಗ್ಗೆ ಬೆಟ್ಟದಷ್ಟು ಸರಕಿದೆ, ಅದು ಮುಗಿಯದ ಸರಕು. ಯಾಕೆಂದರೆ ಪುನೀತ್ ಕೇವಲ ಒಬ್ಬ ಶ್ರೇಷ್ಠ ಕಲಾವಿದ ಮಾತ್ರ ಅಗಿರದೆ, ಧೀಮಂತ ವ್ಯಕ್ತಿಯೂ ಅಗಿದ್ದರು. ಅವರು ಉತ್ತಮ ಗಾಯಕರೂ ಆಗಿದ್ದರೆನ್ನುವುದು ನಮಗೆಲ್ಲ ಗೊತ್ತಿರುವ ವಿಷಯವೇ. ಪುನೀತ್ ಏನೇ ಮಾಡಿದರೂ ಅದಕ್ಕೊಂದು ವೈಶಿಷ್ಟ್ಯತೆ ಇರುತ್ತಿತ್ತು. ಅವರ ಹಾಡುಗಾರಿಕೆ ವಿಷಯವನ್ನೇ ತೆಗೆದುಕೊಳ್ಳಿ. ಹಾಡುವಾಗ ಅವರ ಸದಾ ಒಂದೇ ಹೆಡ್ ಪೋನ್ ಬಳಸುತ್ತಿದ್ದರು, ಎರಡೂ ಬದಿಯಲ್ಲಿ ಅವರ ಅಪ್ಪಾಜಿಯ ಪೋಟೋ ಇದ್ದ ಹೆಡ್ ಫೋನ್! ಅಪ್ಪನ ಬಗ್ಗೆ ಅವರಿಗೆ ಅದೆಷ್ಟು ಪ್ರೀತಿ, ಗೌರವ, ಆದರ ಮತ್ತು ಭಕ್ತಿ!

ಬಹುಭಾಷಾ ನಟಿ, ಕಮಲಹಾಸನ್ ಅವರ ಅಣ್ಣನ ಮಗಳು ಮತ್ತು ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಪತ್ನಿ ಸುಹಾಸಿನಿ ಅಸಲಿಗೆ ಸಿನಿಮಾಟೋಗ್ರಫಿಯಲ್ಲಿ ಪದವಿ ಪಡೆದಿರುವುದದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಅವರು ನಟಿಯಾಗಿದ್ದ್ದು ಆಕಸ್ಮಿಕ. ಅವರಂತೆಯೇ, ಪುನೀತ್ ಅವರಿಗೂ ಪೋಟೋಗ್ರಫಿ ಮೇಲೆ ಅಪಾರ ಆಸಕ್ತಿ ಮತ್ತು ವ್ಯಾಮೋಹ. ಅವರಲ್ಲಿ ಒಂದು ಅತ್ಯಾಧುನಿಕ ಹೈ-ಡೆಫಿನಿಶನ್ ಕೆಮೆರಾ ಕೂಡ ಇತ್ತು. ಪೋಟೋಗ್ರಫಿಯಲ್ಲಿ ಸಾಧಿಸಿದ ಪರಿಣಿತಿಯ ಹಿನ್ನೆಲೆಯಲ್ಲೇ ಅವರು ಚಿತ್ರ ನಿರ್ದೇಶನ ಮಾಡಬೇಕೆಂದುಕೊಂಡಿದ್ದರೇನೋ?

ಸಾಮಾನ್ಯವಾಗಿ ನಟ-ನಟಿಯರು ಶೂಟಿಂಗ್ ವೇಳೆ ತಮ್ಮ ಸ್ವಂತದ ವಸ್ತುಗಳನ್ನು ಬಳಸುವುದಿಲ್ಲ. ಆದರೆ, ಪುನೀತ್ ಮಾತ್ರ ಸ್ವಂತದ ಶೇಡ್ಸ್, ಕೂಲಿಂಗ್ ಗ್ಲಾಸ್ ಮತ್ತು ವಾಚ್​ಗಳನ್ನು ಬಳಸುತ್ತಿದ್ದರು. ಸಿನಿಮಾಗಳಲ್ಲಿ ಅವರು ಬಳಸುತ್ತಿದ್ದ ಮೊಬೈಲ್ ಪೋನ್ ಅವರದ್ದೇ ಆಗಿರುತಿತ್ತು.

ಪುನೀತ್ ಬಳಸುತ್ತಿದ್ದ ಸ್ನೀಕರ್ಸ್ ಸಹ ಯುವಕರಲ್ಲಿ ಕ್ರೇಜ್ ಹುಟ್ಟಿಸಿದ್ದವು. ಅವರು ಉಪಯೋಗಿಸುತ್ತಿದ್ದ ವಸ್ತುಗಳು ಯಾರಿಗಾದರೂ ಇಷ್ಟವಾಗಿ ಕೊಡಿ ಅಂತ ಕೇಳಿದರೆ, ಸಂತೋಷದಿಂದ ಕೊಟ್ಟುಬಿಡುತ್ತಿದ್ದರು. ಪುನೀತ್ ಬಗ್ಗೆ ಮಾತು ಮುಗಿಯುವುದಿಲ್ಲ ಮಾರಾಯ್ರೇ!

ಇದನ್ನೂ ಓದಿ:   ಅಪ್ಪುದು ಸಡನ್ ಡೆತ್ -ಈ ಹಿಂದೆ ಯಾವುದೇ ಸಮಸ್ಯೆ ಇರಲಿಲ್ಲ: ಕೊನೆಯ ಕ್ಷಣ ವಿವರಿಸಿದ ಡಾ. ರಮಣ, ವಿಡಿಯೋ ನೋಡಿ