AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮ್ಯುಚುವಲ್ ಫಂಡ್​ನಲ್ಲಿ ಹೂಡುವ ಹಣಕ್ಕೆ ರಿಸ್ಕ್ ಕಡಿಮೆಯಾಗಲು ಸ್ವಲ್ಪ ಭಾಗವನ್ನು ಡೆಟ್ ಫಂಡ್​ನಲ್ಲಿ ತೊಡಗಿಸಲಾಗುತ್ತದೆ: ಡಾ ಬಾಲಾಜಿ ರಾವ್

ಮ್ಯುಚುವಲ್ ಫಂಡ್​ನಲ್ಲಿ ಹೂಡುವ ಹಣಕ್ಕೆ ರಿಸ್ಕ್ ಕಡಿಮೆಯಾಗಲು ಸ್ವಲ್ಪ ಭಾಗವನ್ನು ಡೆಟ್ ಫಂಡ್​ನಲ್ಲಿ ತೊಡಗಿಸಲಾಗುತ್ತದೆ: ಡಾ ಬಾಲಾಜಿ ರಾವ್

TV9 Web
| Updated By: shruti hegde

Updated on: Nov 03, 2021 | 9:45 AM

ಡೆಟ್ ಫಂಡ್ ನಲ್ಲಿ ಹೂಡುವ ಹಣಕ್ಕೆ ರಿಸ್ಕ್ ಇರುವುದಿಲ್ಲ. ಹೀಗೆ ಈ ಡೆಟ್ ಫಂಡ್ ಮತ್ತು ಈಕ್ವಿಟಿಗಳಲ್ಲಿನ ಹೂಡಿಕೆಯ ಸಂಯೋಜನೆಯನ್ನು ಹೈಬ್ರಿಡ್ ಫಂಡ್ ಅನ್ನುತ್ತಾರೆ ಎಂದು ಡಾ ರಾವ್ ಹೇಳುತ್ತಾರೆ.

ಹೂಡಿಕೆ ತಜ್ಞ ಡಾ ಬಾಲಾಜಿ ರಾವ್ ಡಿಜಿ ಅವರು ಈ ಸಂಚಿಕೆಯಲ್ಲಿ ಹೈಬ್ರಿಡ್ ಫಂಡ್ ಬಗ್ಗೆ ಹೇಳುತ್ತಾ ಮ್ಯುಚುವಲ್ ಫಂಡ್ ನಲ್ಲಿ ನಾವು ಹೂಡುವ ಹಣವನ್ನು ಈ ಸಂಸ್ಥೆಗಳು ಹೇಗೆ ಬೇರೆ ಬೇರೆ ರೀತಿಯಲ್ಲಿ ಹೂಡಿಕೆ ಮಾಡುತ್ತವೆ ಅನ್ನುವುದನ್ನು ವಿವರಿಸಿದ್ದಾರೆ. ಮ್ಯುಚುವಲ್ ಫಂಡ್ ನಲ್ಲಿ ಹಣ ಹೂಡುವಾಗ ರಿಸ್ಕ್ ಇದ್ದೇ ಇರುತ್ತದೆ ಅದನ್ನು ಯಾವ ಕಾರಣಕ್ಕೂ ಮರೆಯಬಾರದು ಅಂತ ಅವರು ಹೇಳುತ್ತಾರೆ. ಸಂಚಿಕೆಯನ್ನು ಆರಂಭಿಸುವಾಗಲೇ ಡಾ ರಾವ್, ಹೈಬ್ರಿಡ್ ಫಂಡ್ ಅನ್ನು ಉಲ್ಲೇಖಿಸುತ್ತಾರೆ. ಅದರ ಅರ್ಥವನ್ನು ಸರಳ ಭಾಷೆಯಲ್ಲಿ ಅವರು ವಿವರಿಸಿದ್ದಾರೆ. ಯಾವುದೇ ಮ್ಯುಚುವಲ್ ಫಂಡ್ ಕಂಪನಿಯಲ್ಲಿ ನಾವು ಹಣ ಹೂಡಿದರೂ ಅದೆಲ್ಲವನ್ನು ಈಕ್ವಿಟಿಗಳಲ್ಲಿ ಅಂದರೆ ಶೇರುಗಳಲ್ಲಿ ಹೂಡಿಕೆ ಮಾಡದೆ ಶೇಕಡಾ 65-70 ರಷ್ಟು ಹಣವನ್ನು ಈಕ್ವಿಟಿಗಳಲ್ಲಿ ಹೂಡಿದರೆ ಉಳಿದ ಶೇಕಡಾ 30-35 ರಷ್ಟನ್ನು ಡೆಟ್ ಫಂಡ್ನಲ್ಲಿ ತೊಡಗಿಸುತ್ತಾರೆ ಅಂತ ಅವರು ಹೇಳುತ್ತಾರೆ.

ಡೆಟ್ ಫಂಡ್ ಅಂರೇನು ಅಂತ ತಿಳಿದುಕೊಳ್ಳುವುದು ಸಹ ಅತ್ಯಂತ ಅವಶ್ಯಕವಾಗಿದೆ. ಡೆಟ್ ಫಂಡ್ ಅಂದರೆ, ಮ್ಯುಚುವಲ್ ಫಂಡ್ ಸಂಸ್ಥೆಯು ರಿಲಯನ್ಸ್ ಆಗಲಿ, ಅಥವಾ ಮತ್ತಿನ್ಯಾವುದೋ ಕಂಪನಿಗೆ ಸಾಲದ ರೂಪದಲ್ಲಿ ನೀಡುತ್ತದೆ. ಬ್ಯಾಂಕ್ ಗಳಲ್ಲಿ ನಾವು ನಿಶ್ಚಿತ ಠೇವಣಿಯಾಗಿ (ಎಫ್ ಡಿ) ಹಣ ಹೂಡಿದರೆ, ಬ್ಯಾಂಕ್ ಆ ಹಣವನ್ನು ಬೇರೆಯವರಿಗೆ ಸಾಲ ನೀಡುವ ಹಾಗೆಯೇ, ಮ್ಯುಚುವಲ್ ಫಂಡ್ ನಲ್ಲಿ ನಾವು ಹೂಡುವ ಹಣಕ್ಕೆ ರಿಸ್ಕ್ ಎದುರಾಗದಿರಲು ಅದರ ಸ್ವಲ್ಪ ಭಾಗವನ್ನು ಡೆಟ್ ಫಂಡ್ ನಲ್ಲಿ ತೊಡಗಿಸಲಾಗುತ್ತದೆ ಎಂದು ಡಾ ರಾವ್ ಹೇಳುತ್ತಾರೆ.

ಡೆಟ್ ಫಂಡ್ ನಲ್ಲಿ ಹೂಡುವ ಹಣಕ್ಕೆ ರಿಸ್ಕ್ ಇರುವುದಿಲ್ಲ. ಹೀಗೆ ಈ ಡೆಟ್ ಫಂಡ್ ಮತ್ತು ಈಕ್ವಿಟಿಗಳಲ್ಲಿನ ಹೂಡಿಕೆಯ ಸಂಯೋಜನೆಯನ್ನು ಹೈಬ್ರಿಡ್ ಫಂಡ್ ಅನ್ನುತ್ತಾರೆ ಎಂದು ಡಾ ರಾವ್ ಹೇಳುತ್ತಾರೆ.

ಸಾಮಾನ್ಯವಾಗಿ ಎಲ್ಲ ಮ್ಯುಚುವಲ್ ಫಂಡ್ ಕಂಪನಿಗಳು ಇದೇ ನಿಯಮವನ್ನು ಪಾಲಿಸುತ್ತವೆ. ಅಂದರೆ ನಾವು ರೂ. 100 ಮ್ಯುಚುವಲ್ ಫಂಡ್ ನಲ್ಲಿ ಹೂಡಿದರೆ 65 ರೂ. ಈಕ್ವಿಟಿಗಳಲ್ಲಿ ಮತ್ತು ಉಳಿದ ರೂ. 35 ಅನ್ನು ಡೆಟ್ ಫಂಡ್ ತೊಡಗಿಸಲಾಗುತ್ತದೆ.

ಮ್ಯುಚುವಲ್ ಫಂಡ್ ಹಣ ಹೂಡುವುದು ರಿಸ್ಕ್ ಹೊರತಾಗಿಲ್ಲವಾದ್ದರಿಂದ ಜಾಹೀರಾತಿನಿನಲ್ಲಿ Mutual Fund investments are subject to market risks, read all scheme related documents carefully ಅಂತ ಹೇಳುತ್ತಾರೆ ಎಂದು ಡಾ ರಾವ್ ಹೇಳುತ್ತಾರೆ.

ಇದನ್ನೂ ಓದಿ:   SBI Pensioners Facility: ಪೆನ್ಷನ್​ದಾರರಿಗೆ ಎಸ್​ಬಿಐನಿಂದ ವಿಶೇಷ ವ್ಯವಸ್ಥೆ; ಈಗ ಸಲ್ಲಿಸಬಹುದು ವಿಡಿಯೋ ಜೀವಿತ ಪ್ರಮಾಣಪತ್ರ