ಪುನೀತ್ ರಾಜ್ಕುಮಾರ್ ಸಾವಿನಲ್ಲೂ ಲಾಭ ಪಡೆದ ರಣಹದ್ದುಗಳು; ಆಕ್ರೋಶ ಹೊರ ಹಾಕಿದ ಅಭಿಮಾನಿಗಳು
ಪುನೀತ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಘಟನೆ ನಂತರದಲ್ಲಿ ಯುವ ಜನತೆ ತಮ್ಮ ಹೃದಯದ ಆರೋಗ್ಯದ ಬಗ್ಗೆ ಹೆಚ್ಚು ಗಮನ ವಹಿಸಬೇಕು ಎನ್ನುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ.
ಪುನೀತ್ ರಾಜ್ಕುಮಾರ್ ಅವರು ಮೃತಪಟ್ಟು ಇಂದಿಗೆ (ನವೆಂಬರ್ 2) ಐದು ದಿನ ಕಳೆದಿದೆ. ಅವರು ಇಲ್ಲ ಎನ್ನುವ ನೋವನ್ನು ಯಾರಿಂದಲೂ ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಆದಾಗ್ಯೂ, ಇದನ್ನು ಒಪ್ಪಿಕೊಳ್ಳಲೇಬೇಕು. ಇದು ಸೃಷ್ಟಿಯ ನಿಯಮ. ಪುನೀತ್ ಸಾವು ಅವರ ಅಭಿಮಾನಿಗಳಿಗೆ ತೀವ್ರ ನೋವು ತಂದಿದೆ. ಆದರೆ, ಕೆಲ ಕಿಡಿಗೇಡಿಗಳು ಪುನೀತ್ ಸಾವಿನಿಂದ ಲಾಭ ಪಡೆಯೋಕೆ ಮುಂದಾಗಿದ್ದಾರೆ. ಇವರ ವಿರುದ್ಧ ಅನೇಕರು ಕಿಡಿಕಾರುತ್ತಿದ್ದಾರೆ. ಈ ರೀತಿಯ ದುಷ್ಟ ಆಲೋಚನೆಗಳು ನಿಲ್ಲಬೇಕು ಎಂದು ಕೆಲವರು ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.
ದೇಶದಲ್ಲಿ ಮೊದಲ ಬಾರಿಗೆ ಕೊವಿಡ್ ಕಾಣಿಸಿಕೊಂಡಾಗ ಸಾಕಷ್ಟು ಆತಂಕ ಮೂಡಿತ್ತು. ಈ ವೇಳೆ ವೈದ್ಯರು ಸಾಬೂನು ಹಚ್ಚಿ ಕೈ ತೊಳೆದುಕೊಳ್ಳುವಂತೆ ಸೂಚಿಸಿದ್ದರು. ಇದರ ಲಾಭ ಪಡೆಯೋಕೆ ಮುಂದಾದ ಸಾಬೂನು ಕಂಪೆನಿಗಳು, ನಮ್ಮ ಸೋಪ್ನಿಂದ ವೈರಸ್ ನಾಶವಾಗುತ್ತದೆ ಎನ್ನುವ ಜಾಹೀರಾತು ನೀಡೋಕೆ ಆರಂಭಿಸಿದ್ದರು. ಈ ಮೂಲಕ ತಮ್ಮ ಬ್ರ್ಯಾಂಡ್ಗೆ ಪ್ರಚಾರ ನೀಡಿದ್ದರು. ಖಂಡಿತವಾಗಿಯೂ ಇದು ತಪ್ಪಲ್ಲ. ಆದರೆ, ಪುನೀತ್ ಸಾವಿನ ವಿಚಾರದಲ್ಲೂ ಇದೇ ರೀತಿ ಮಾಡಿರುವುದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಪುನೀತ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ಘಟನೆ ನಂತರದಲ್ಲಿ ಯುವ ಜನತೆ ತಮ್ಮ ಹೃದಯದ ಆರೋಗ್ಯದ ಬಗ್ಗೆ ಹೆಚ್ಚು ಗಮನ ವಹಿಸಬೇಕು ಎನ್ನುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ಈ ಮಧ್ಯೆ ಕೆಲ ಡೈಗ್ನಾಸ್ಟಿಕ್ಸ್ ಕೇಂದ್ರಗಳು ಪುನೀತ್ ನಿಧನ ಸುದ್ದಿಯಿಂದ ಪ್ರಚಾರ ಪಡೆಯಲು ಮುಂದಾಗಿವೆ. ಮೇಲ್ಭಾಗದಲ್ಲಿ ಪುನೀತ್ಗೆ ಶ್ರದ್ಧಾಂಜಲಿ ಅರ್ಪಿಸಿ, ಕೆಳಭಾಗದಲ್ಲಿ ತಮ್ಮ ಡೈಗ್ನಾಸ್ಟಿಕ್ಸ್ ಕೇಂದ್ರದಲ್ಲಿ ಇಸಿಜಿ ಸೇರಿ ಹಲವು ಸೌಲಭ್ಯಗಳು ಇವೆ. ಇದಕ್ಕೆ ಆಫರ್ ಕೂಡ ಇದೆ ಎಂದು ಬರೆಯಲಾಗಿದೆ. ಪುನೀತ್ ಸಾವನ್ನು ಜಾಹೀರಾತಿಗೆ ಬಳಕೆ ಮಾಡಿಕೊಳ್ಳಲಾಗಿದೆ ಎಂಬುದಕ್ಕೆ ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ.
ಎಲ್ಲದರಲ್ಲೂ ಲಾಭ ಹುಡುಕುವ ರಣಹದ್ದುಗಳು!! pic.twitter.com/g6JwxwTwMX
— ಮಂಜುನಾಥ್ ಜವರನಹಳ್ಳಿ (@manjujb1) November 2, 2021
‘ಅವರು ಉಚಿತವಾಗಿ ಚೆಕಪ್ ಮಾಡುತ್ತೀನಿ ಎಂದರೆ ಬೇಸರವಾಗುತ್ತಿರಲಿಲ್ಲ. ಪುನೀತ್ ಸಾವಿನ ಸುದ್ದಿಯನ್ನು ಈ ರೀತಿ ಜಾಹೀರಾತಿಗೆ ಬಳಕೆ ಮಾಡಿಕೊಂಡು, ದುಡ್ಡು ಪಡೆಯುತ್ತಿದ್ದಾರಲ್ಲ ಅದು ಬೇಸರದ ಸಂಗತಿ’ ಎಂದು ಕೆಲವರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ‘ಪುನೀತ್ ರಾಜ್ಕುಮಾರ್ ಇನ್ನೂ ಇಲ್ಲೇ ಇದ್ದಾರೆ ಅನಿಸುತ್ತಿದೆ’; ಅಕ್ಕಿನೇನಿ ನಾಗಾರ್ಜುನ ಬೇಸರ
Published On - 9:36 pm, Tue, 2 November 21