ಮೈಸೂರು: ಕಬಿನಿ ಹಿನ್ನೀರಿನಲ್ಲಿ ಹುಲಿಯ ಬಿಂದಾಸ್ ಓಡಾಟ; ವಿಡಿಯೋ ನೋಡಿ
ನೀರಿನ ಹೊಂಡದ ಬಳಿ ನಿಂತಿದ್ದ ಹುಲಿ, ಸಫಾರಿ ವಾಹನ ಬಂದಾಗ ಕಾಡಿನ ಕಡೆಗೆ ಹೊರಟಿದೆ. ಬಳಿಕ ಒಂದು ಮರದ ಬಳಿ ಹೋಗಿದ್ದು, ಮತ್ತೆ ರಸ್ತೆಗೆ ಬಂದು ನಿಂತಿದೆ. ಸಫಾರಿಗೆ ಹೋದ ಪ್ರವಾಸಿಗರು ಹುಲಿಯನ್ನು ಹತ್ತಿರದಿಂದ ಕಂಡು ಖುಷಿಪಟ್ಟಿದ್ದಾರೆ.
ಮೈಸೂರು: ಕಬಿನಿ ಹಿನ್ನೀರಿನಲ್ಲಿ ಎರಡು ಸಫಾರಿ ವಾಹನಗಳಿದ್ದರೂ ಅಂಜದೆ ಹುಲಿಯೊಂದು ಬಿಂದಾಸ್ ಆಗಿ ಓಡಾಡುತ್ತಿದ್ದ ದೃಶ್ಯ ಕ್ಯಾಮರಾದಲ್ಲಿ ಸೆರೆ ಸಿಕ್ಕಿದೆ. ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನ ದಮ್ಮನಕಟ್ಟೆ ಸಫಾರಿಗೆ ತೆರಳಿದ್ದವರಿಗೆ ಹುಲಿಯ ದರ್ಶನವಾಗಿದೆ. ನೀರಿನ ಹೊಂಡದ ಬಳಿ ನಿಂತಿದ್ದ ಹುಲಿ, ಸಫಾರಿ ವಾಹನ ಬಂದಾಗ ಕಾಡಿನ ಕಡೆಗೆ ಹೊರಟಿದೆ. ಬಳಿಕ ಒಂದು ಮರದ ಬಳಿ ಹೋಗಿದ್ದು, ಮತ್ತೆ ರಸ್ತೆಗೆ ಬಂದು ನಿಂತಿದೆ. ಸಫಾರಿಗೆ ಹೋದ ಪ್ರವಾಸಿಗರು ಹುಲಿಯನ್ನು ಹತ್ತಿರದಿಂದ ಕಂಡು ಫುಲ್ ಖುಷ್ ಆಗಿದ್ದಾರೆ.
ಇದನ್ನೂ ಓದಿ:
ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಏಕಕಾಲಕ್ಕೆ ತಾಯಿ-ಮಕ್ಕಳ ದರ್ಶನ, ಸಫಾರಿಗೆ ಬಂದವರು ಫುಲ್ ಖುಷ್
ಬೆಕ್ಕಿನ ರಕ್ಷಣೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಧಾರವಾಡದ ಪ್ರಾಣಿಪ್ರೇಮಿ ಸೋಮಶೇಖರ ಚೆನ್ನಶೆಟ್ಟಿ
Latest Videos