Temple Tour: ಝರಣಿ ನರಸಿಂಹಸ್ವಾಮಿ ದೇಗುಲದ ದರ್ಶನ ಪಡೆಯಲು ಜಲವಾರ್ಗದಲ್ಲಿಯೇ ಬರಬೇಕು
ಗುಹೆಯಲ್ಲಿರುವ ನೀರಿನಲ್ಲಿ ಸಲ್ಫರ್ ಅಂಶ ಇರುವುದರಿಂದ ಚರ್ಮರೋಗಗಗಳು ವಾಸಿಯಾಗುತ್ತವೆ ಅನ್ನೋ ಪ್ರತೀತಿ ಇದೆ. ವರ್ಷದ ಎಲ್ಲಾ ಕಾಲದಲ್ಲಿ ಗುಹೆಯಲ್ಲಿನ ನೀರು ಕಡಿಮೆಯಾಗೋದೇ ಇಲ್ಲ. ಗುಹೆಯ ಒಳಗೆ ನೀರಿನಲ್ಲಿ ನಡೆದು ಹೋಗಲು ಸಾಧ್ಯವಿಲ್ಲದವರು ಹೊರಗೆ ಇರುವ ನರಸಿಂಹ ಸ್ವಾಮಿಯ ದರ್ಶನ ಪಡೆಯಬಹುದು.
ರಾಜ್ಯದ ನಾನಾ ಭಾಗಗಳಲ್ಲಿ ಇರುವಂತಾ ದೇಗುಲಗಳು ಸ್ಥಳೀಯವಾಗಿ ಮತ್ತು ರಾಜ್ಯವ್ಯಾಪಿಯಲ್ಲಿ ಸಾಕಷ್ಟು ಪ್ರಸಿದ್ದಿಯನ್ನು ಪಡೆದಿವೆ. ಅಂತಾ ದೇಗುಲಗಳ ವಿಶೇಷತೆಗಳ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲೋ ವಿಶೇಷ ಕಾರ್ಯಕ್ರಮವೇ ಈ ಟೆಂಪಲ್ ಟೂರ್. ಇಂದು ಬೀದರ್ನ ಐತಿಹಾಸಿಕ ಝರಣಿ ನರಸಿಂಹ ಸ್ವಾಮಿ ದೇಗುಲದ ವೈಶಿಷ್ಟ್ಯದ ಬಗ್ಗೆ ತಿಳಿಯೋಣ. ಕರ್ನಾಟಕದ ಅಪರೂಪದ ದೇಗುಲಗಳ ಸಾಲಿನಲ್ಲಿ ಇರುವಂತಾ ಧಾರ್ಮಿಕ ಕ್ಷೇತ್ರಗಳಲ್ಲಿ ಬೀದರ್ನ ಹೊರವಲಯದಲ್ಲಿರುವ ಝರಣಿ ನರಸಿಂಹಸ್ವಾಮಿ ಕ್ಷೇತ್ರವೂ ಒಂದು. ಕರ್ನಾಟಕ ಮಾತ್ರವಲ್ಲ. ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಿಂದಲೂ ಪ್ರಹ್ಲಾದ ವರದ ನರಸಿಂಹನ ಆಲಯಕ್ಕೆ ಭಕ್ತರ ದಂಡು ಹರಿದು ಬರುತ್ತದೆ. ನವ ವಧು ವರರು, ಮಕ್ಕಳಾಗದವರು, ಹೆರಿಗೆಗೆ ತವರಿಗೆ ಹೊರಡುವ ಮುನ್ನ ತುಂಬು ಗರ್ಭಿಣಿಯರು ಸ್ವಾಮಿಯ ದರ್ಶನ ಪಡೆದು ವರ ಬೇಡುವ ಪರಿಪಾಠ ಇಲ್ಲಿದೆ.
ಹಿರಣ್ಯಕಶಪುವಿನ ಸಂಹಾರದ ಬಳಿಕ ಇಲ್ಲಿಗೆ ಬರುವ ನರಸಿಂಹಸ್ವಾಮಿ ಜಲಾಸುರನನ್ನು ವಧಿಸುತ್ತಾನೆ. ಆದರೆ ಜಲಾಸುರ ಸಾವನ್ನಪ್ಪುವ ಸಂದರ್ಭದಲ್ಲಿ ನರಸಿಂಹ ಸ್ವಾಮಿ ಇಲ್ಲಿಯೇ ನೆಲೆಸಿ ಬರುವ ಭಕ್ತರನ್ನು ಹರಸುವ ವರ ಕೇಳುತ್ತಾನೆ. ಅಷ್ಟೇ ಅಲ್ಲ ನರಸಿಂಹನ ಪಾದದಿಂದ ಜಲಾಸುರ ಝರಿಯಾಗಿ ಹರಿಯುವ ಕೋರಿಕೆ ಇಡುತ್ತಾನೆ. ಆ ಪ್ರಕಾರ ಝರಣಿ ನರಸಿಂಹ ಸ್ವಾಮಿಯ ಪಾದದಿಂದ ನೀರು ಹರಿಯುತ್ತಿರುವ ಕಾರಣಕ್ಕೆ ಈ ಕ್ಷೇತ್ರಕ್ಕೆ ಝರಾ ನರಸಿಂಹ ಕ್ಷೇತ್ರ ಎನ್ನುವ ಹೆಸರು ಬಂದಿದೆ.
ಇಲ್ಲಿನ ಗುಹೆಯಲ್ಲಿರುವ ನೀರಿನಲ್ಲಿ ಸಲ್ಫರ್ ಅಂಶ ಇರುವುದರಿಂದ ಚರ್ಮರೋಗಗಗಳು ವಾಸಿಯಾಗುತ್ತವೆ ಅನ್ನೋ ಪ್ರತೀತಿ ಇದೆ. ವರ್ಷದ ಎಲ್ಲಾ ಕಾಲದಲ್ಲಿ ಗುಹೆಯಲ್ಲಿನ ನೀರು ಕಡಿಮೆಯಾಗೋದೇ ಇಲ್ಲ. ಗುಹೆಯ ಒಳಗೆ ನೀರಿನಲ್ಲಿ ನಡೆದು ಹೋಗಲು ಸಾಧ್ಯವಿಲ್ಲದವರು ಹೊರಗೆ ಇರುವ ನರಸಿಂಹ ಸ್ವಾಮಿಯ ದರ್ಶನ ಪಡೆಯಬಹುದು.
ನಾಲ್ಕೈದು ವರ್ಷದಿಂದ ಐತಿಹಾಸಿಕ ಉಗ್ರ ನರಸಿಂಹ ದೇವಸ್ಥಾನ ಪ್ರವೇಶ ನಿರ್ಭಂದಿಸಲಾಗಿದೆ. ಹೀಗಾಗಿ ನಿರಾಸೆಯಿಂದ ಭಕ್ತರು ಬಂದು ಹೊಗುತ್ತಿದ್ದಾರೆ. ಕರ್ನಾಟಕ ಸೇರಿದಂತೆ ಹೊರರಾಜ್ಯದಲ್ಲಿ ಅಪಾರ ಪ್ರಮಾಣದ ಭಕ್ತರಿದ್ದು, ದರ್ಶನಕ್ಕೆ ಅವಕಾಶ ಕೊಡಿ ಎಂದು ಭಕ್ತರು ಮನವಿ ಮಾಡುತ್ತಿದ್ದಾರೆ. ಅತಿ ಶೀಘ್ರದಲ್ಲೇ ಇದಕ್ಕೆ ಅನುಮತಿ ಸಿಗುವ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ:
Temple Tour: ಉದ್ಭವ ಮೂರ್ತಿಯಾಗಿ ವೀರಭದ್ರ ಸ್ವಾಮಿ ಎದ್ದು ನಿಂತ ದೇವಾಲಯದ ದರ್ಶನ ಪಡೆಯಿರಿ