Temple Tour: ಉದ್ಭವ ಮೂರ್ತಿಯಾಗಿ ವೀರಭದ್ರ ಸ್ವಾಮಿ ಎದ್ದು ನಿಂತ ದೇವಾಲಯದ ದರ್ಶನ ಪಡೆಯಿರಿ

ಪೌರಾಣಿಕ ಹಿನ್ನಲೆಯನ್ನು ಒಳಗೊಂಡಿರುವ ಬನದೇಶ್ವರ ದೇವಾಲಯದಲ್ಲಿ ಉದ್ಭವ ಮೂರ್ತಿಯಾಗಿ ಪೂಜೆ ಪಡೆಯುತ್ತಿರುವ ದೇವರು ವೀರಭದ್ರ. ವೀರಭದ್ರನನ್ನು ಇಲ್ಲಿನ ಜನರು ಬನದೇಶ್ವರ ಎಂದು ಭಕ್ತಿಯಿಂದ ಸ್ಮರಿಸುವುದಕ್ಕೆ ಒಂದು ಐತಿಹಾಸಿಕ ಮತ್ತು ಹಿನ್ನಲೆ ಇದೆ.

ಯಾದಗಿರಿ: ನಾಡಿನ ಗಡಿ ಜಿಲ್ಲೆಯಾಗಷ್ಟೇ ಯಾದಗಿರಿ ಗುರುತಿಸಿಕೊಂಡಿಲ್ಲ. ನಾಡಿನ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಿರುವಂತಾ ಕ್ಷೇತ್ರವಾಗಿಯೂ ಗುರುತಿಸಿಕೊಂಡಿದೆ. ಅದಕ್ಕೆ ಸಾಕ್ಷಿ ಯಾದಗಿರಿ ಜಿಲ್ಲೆಯ ಬನದೇಶ್ವರ ದೇಗುಲದ ವೈಶಿಷ್ಟ್ಯ. ಇದು ಕಲ್ಯಾಣ ಕರ್ನಾಟಕದ ಗಡಿ ಜಿಲ್ಲೆಯಲ್ಲಿರುವ ದೇಗುಲ. ಪ್ರತಿ ನಿತ್ಯ ಈ ದೇವಾಲಯಕ್ಕೆ ಸಾವಿರಾರು ಮಂದಿ ಭಕ್ತರು ಬಂದು ಹೋಗುತ್ತಾರೆ. ನಿತ್ಯ ಅನ್ನ ದಾಸೋಹ ಇಲ್ಲಿ ನಡೆಯುತ್ತದೆ. ಹೌದು ಯಾದಗಿರಿ ಜಿಲ್ಲೆಯ ಕಾಳಬೆಳಗುಂದಿ ಗ್ರಾಮದಲ್ಲಿದೆ ಬನದೇಶ್ವರ ದೇವಾಲಯ. ಬಸವೇಶ್ವರ ದೇಗುಲ ನಾಡಿನ ಸಾಕಷ್ಟು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪೌರಾಣಿಕ ಹಿನ್ನಲೆಯನ್ನು ಒಳಗೊಂಡಿರುವ ಬನದೇಶ್ವರ ದೇವಾಲಯದಲ್ಲಿ ಉದ್ಭವ ಮೂರ್ತಿಯಾಗಿ ಪೂಜೆ ಪಡೆಯುತ್ತಿರುವ ದೇವರು ವೀರಭದ್ರ. ವೀರಭದ್ರನನ್ನು ಇಲ್ಲಿನ ಜನರು ಬನದೇಶ್ವರ ಎಂದು ಭಕ್ತಿಯಿಂದ ಸ್ಮರಿಸುವುದಕ್ಕೆ ಒಂದು ಐತಿಹಾಸಿಕ ಮತ್ತು ಹಿನ್ನಲೆ ಇದೆ.

ಬನದೇಶ್ವರ ದೇವಾಲಯದ ಇತಿಹಾಸ
ಸಂಗಮಾರ್ಯರ ಜೋಳಿಗೆಯಲ್ಲಿ ಹೂವಾಗಿ ಕುಳಿತ ವೀರಭದ್ರಸ್ವಾಮಿ, ಆನಂತರ ಹಾವಾಗಿ ಬದಲಾದ ಹಿನ್ನೆಲೆ ಬನದೇಶ್ವರ ದೇಗುಲಕ್ಕಿದೆ. ಸಂಗಮಾರ್ಯರು ಜೋಳಿಗೆ ಇಟ್ಟ ಸ್ಥಳ ಕಾಡಿನ ಹಾಗೆ ಇತ್ತಂತೆ. ಈಗ ದೇವಾಲಯ ಇರುವಂತ ಸ್ಥಳವೇ ಅಂದು ಸಂಗಮಾರ್ಯರು ಜೋಳಿಗೆ ಇಟ್ಟ ಸ್ಥಳ ಎಂದು ಹೇಳಲಾಗುತ್ತದೆ. ಜೋಳಿಗೆಯಲ್ಲಿದ್ದ ಹಾವು, ಹುತ್ತ ಸೇರಿದಾಗ ಹಸುವೊಂದು ಪ್ರತಿ ನಿತ್ಯ ಬಂದು ಹಾಲೆರೆಯುತ್ತಿತ್ತಂತೆ. ಹುತ್ತಕ್ಕೆ ಹಾಲೆರುತ್ತಿದ್ದ ಹಸುವನ್ನು ಮಾಲೀಕ ಶಿಕ್ಷಿಸಿದ ಸಂದರ್ಭದಲ್ಲಿ ಹುತ್ತದಿಂದ ಉದ್ಭವ ಮೂರ್ತಿಯಾಗಿ ವೀರಭದ್ರ ಸ್ವಾಮಿ ಎದ್ದು ನಿಂತ ಎನ್ನುವುದು ಬನದೇಶ್ವರ ದೇಗುಲಕ್ಕಿರುವ ಪೌರಾಣಿಕ ಹಿನ್ನಲೆ. ಆದ ಕಾರಣ ಈ ಕ್ಷೇತ್ರಕ್ಕೆ ಬನದೇಶ್ವರ ಎನ್ನುವ ಹೆಸರು ಬಂದಿದೆ. ಪ್ರತಿ ವರ್ಷ ಸಂಕ್ರಮಣದ ಸಂದರ್ಭದಲ್ಲಿ ಬನದೇಶ್ವರ ಮತ್ತು ಭದ್ರಕಾಳಿಯ ಉತ್ಸವ ನಡೆಯುವುದು ಈ ಕ್ಷೇತ್ರದ ವಿಶೇಷತೆಗಳಲ್ಲಿ ಒಂದಾಗಿದೆ.

ಇದನ್ನೂ ಓದಿ:

Temple Tour: ಭಕ್ತನ ಕನಸಲ್ಲಿ ಬಂದು ಪ್ರತಿಷ್ಠಾಪನೆಗೊಂಡ ತಾಯಿ ದುರ್ಗಾಂಬೆ

Temple Tour: ಕುಕ್ಕೇ ಸುಬ್ರಹ್ಮಣ್ಯ ದೇಗುಲದಷ್ಟೇ ಪ್ರಸಿದ್ಧಿ ಪಡೆದಿದೆ ಹಾಸನದ ಪ್ರಸನ್ನ ಸುಬ್ರಹ್ಮಣ್ಯ ದೇವಾಲಯ

Click on your DTH Provider to Add TV9 Kannada