Temple Tour: ಭಕ್ತನ ಕನಸಲ್ಲಿ ಬಂದು ಪ್ರತಿಷ್ಠಾಪನೆಗೊಂಡ ತಾಯಿ ದುರ್ಗಾಂಬೆ

ದುಷ್ಟ ಶಿಕ್ಷಕಿಯಾದ ದುರ್ಗಾದೇವಿಯ ಮಂದಿರದಲ್ಲಿ ಯಾವುದೇ ಜಗಳ ಇತ್ಯರ್ಥವಾಗದೆ ಉಳಿದ ಇತಿಹಾಸವೇ ಇಲ್ಲ. ಬಹುತೇಕ ವ್ಯಾಜ್ಯಗಳನ್ನ ದೇವಿಯೇ ಪರಿಹರಿಸಿಕೊಡುವ ಪರಿಪಾಠ ಇಲ್ಲಿ ನಡೆದುಕೊಂಡು ಬಂದಿದೆ.

ನಾಡಿನ ಪ್ರತಿಯೊಂದು ಧಾರ್ಮಿಕ ಕ್ಷೇತ್ರಗಳ ಮಹತ್ವವೂ ಒಂದೊಂದು ದೇವರ ಮಹಿಮೆ ಹೇಳುತ್ತೆ. ಅಂತಾ ಒಂದು ವಿಶಿಷ್ಟವಾದ ದೇಗುಲ ಕರ್ನಾಟಕದ ವಾಣಿಜ್ಯ ನಗರಿಯಾಗಿರುವ ದಾವಣಗೆರೆಯಲ್ಲಿದೆ. ದಾವಣಗೆರೆಯ ದುರ್ಗಾಂಬ ದೇಗುಲದ ಐತಿಹ್ಯ ಎಲ್ಲರಲ್ಲೂ ಬೆರಗು ಮೂಡಿಸುತ್ತೆ. ದಾವಣಗೆರೆ ನಗರದ ಅಧಿದೇವತೆಯಾಗಿ ನಿಂತು ಬರುವ ಭಕ್ತರಿಗೆ ಅಭಯವನ್ನ ನೀಡುತ್ತಿರುವ ದುರ್ಗಾ ದೇಗುಲ ಶತಮಾನಗಳ ಇತಿಹಾಸ ಹೊಂದಿದೆ. ಭಕ್ತನೊಬ್ಬನ ಕನಸಲ್ಲಿ ಬಂದು ಪ್ರತಿಷ್ಠಾಪನೆಗೊಂಡ ತಾಯಿಯೇ ಈ ದುರ್ಗೆ. ದಾವಣಗೆರೆಯ ಈ ದೇವಿಯನ್ನ ದುಗ್ಗಮ್ಮ, ದುರ್ಗಾಂಬಿಕಾ ದೇವಿ ಹೆಸರಿನಿಂದಲೂ ಜನರು ಕರೀತಾರೆ. ದುರ್ಗಾ ದೇಗುಲ ದಾವಣಗೆರೆಯಲ್ಲಿ ಮಹಿಮಾ ಕ್ಷೇತ್ರವಾಗಿ ಗುರುತಿಸಿಕೊಂಡಿರೋದು ವ್ಯಾಜ್ಯ ಪಂಚಾಯ್ತಿ ಕ್ಷೇತ್ರವಾಗಿ. ದುಷ್ಟ ಶಿಕ್ಷಕಿಯಾದ ದುರ್ಗಾದೇವಿಯ ಮಂದಿರದಲ್ಲಿ ಯಾವುದೇ ಜಗಳ ಇತ್ಯರ್ಥವಾಗದೆ ಉಳಿದ ಇತಿಹಾಸವೇ ಇಲ್ಲ. ಬಹುತೇಕ ವ್ಯಾಜ್ಯಗಳನ್ನ ದೇವಿಯೇ ಪರಿಹರಿಸಿಕೊಡುವ ಪರಿಪಾಠ ಇಲ್ಲಿ ನಡೆದುಕೊಂಡು ಬಂದಿದೆ.

Click on your DTH Provider to Add TV9 Kannada