Navratri 2021: ನಿಮ್ಮ ದುಃಖ ದೂರವಾಗಿ, ಸುಖ ಸಮೃದ್ಧಿ ಮನೆ ಮಾಡಲು ನವರಾತ್ರಿ ದಿನಗಳಲ್ಲಿ ಹೀಗೆ ಮಾಡಿ

Mysuru Dasara 2021: ನವರಾತ್ರಿ ದಿನಗಳು ಹೆಚ್ಚು ಪವಿತ್ರವಾದ ಸಂದರ್ಭವಾಗಿದೆ. ದುರ್ಗಾ ಮಾತೆಯನ್ನು ನವ ರೂಪಗಳಲ್ಲಿ ಪೂಜೆ ಮಾಡಬಹುದು. ಸ್ವಚ್ಛ ಮನಸಿನಿಂದ ದುರ್ಗಾ ಮಾತೆಯ ಉಪಾಸನೆ ಮಾಡುವುದರಿಂದ ದೊಡ್ಡ ದೊಡ್ಡ ಗಂಡಾಂತರಗಳೇ ಸುಲಭವಾಗಿ ದೂರವಾಗಿಬಿಡುತ್ತದೆ ಎಂಬ ವಿಶ್ವಾಸವಿದೆ.

Navratri 2021: ನಿಮ್ಮ ದುಃಖ ದೂರವಾಗಿ, ಸುಖ ಸಮೃದ್ಧಿ ಮನೆ ಮಾಡಲು ನವರಾತ್ರಿ ದಿನಗಳಲ್ಲಿ ಹೀಗೆ ಮಾಡಿ
Navratri 2021: ನಿಮ್ಮ ದುಃಖ ದೂರವಾಗಿ, ಸುಖ ಸಮೃದ್ಧಿ ಮನೆ ಮಾಡಲು ನವರಾತ್ರಿ ದಿನಗಳಲ್ಲಿ ಹೀಗೆ ಮಾಡಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Oct 09, 2021 | 8:11 AM

ನವರಾತ್ರಿ ವೇಳೆ ಈ ಉಪ ಕ್ರಮಗಳನ್ನು ಅನುಸರಿಸುವುದರಿಂದ ನಿಮ್ಮ ಎಲ್ಲ ದುಃಖವನ್ನು ದೂರ ಮಾಡುತ್ತದೆ; ಸುಖ ಸಮೃದ್ಧಿ ಮನೆ ಮಾಡುತ್ತದೆ. ನವರಾತ್ರಿಯ ಮೂರನೆಯ ದಿನ ಇಂದು. ಈ ಸಂದರ್ಭದಲ್ಲಿ ಈ ಉಪಾಯಗಳನ್ನು ಪಾಲಿಸಿದರೆ ನಿಮ್ಮ ಎಲ್ಲ ದುಃಖ ದೂರವಾಗುತ್ತದೆ; ಸುಖ ಸಮೃದ್ಧಿ ನಿಮ್ಮಲ್ಲಿ ಮನೆ ಮಾಡುತ್ತದೆ. ವನರಾತ್ರಿಯ ವೇಳೆ ದುರ್ಗಾ ಮಾತೆ ಭೂಮಿಯ ಮೇಲೆ ಅವತರಿಸಿ, ತನ್ನ ಭಕ್ತರೊಂದಿಗೆ ಸಂಚರಿಸುತ್ತಾಳೆ. ಈ ವೇಳೆ ಕೆಲವು ವಿಶೇಷ ಕ್ರಮಗಳನ್ನು ಕೈಗೊಂಡು ದುರ್ಗಾ ಮಾತೆಯನ್ನು ಒಲಿಸಿಕೊಳ್ಳಬಹುದು.

ನವರಾತ್ರಿ ದಿನಗಳು ಹೆಚ್ಚು ಪವಿತ್ರವಾದ ಸಂದರ್ಭವಾಗಿದೆ. ದುರ್ಗಾ ಮಾತೆಯನ್ನು ನವ ರೂಪಗಳಲ್ಲಿ ಪೂಜೆ ಮಾಡಬಹುದು. ಸ್ವಚ್ಛ ಮನಸಿನಿಂದ ದುರ್ಗಾ ಮಾತೆಯ ಉಪಾಸನೆ ಮಾಡುವುದರಿಂದ ದೊಡ್ಡ ದೊಡ್ಡ ಗಂಡಾಂತರಗಳೇ ಸುಲಭವಾಗಿ ದೂರವಾಗಿಬಿಡುತ್ತದೆ ಎಂಬ ವಿಶ್ವಾಸವಿದೆ. ದೀರ್ಘ ಕಾಲದಿಂದ ನೀವು ಯಾವುದಾದರೂ ಸಮಸ್ಯೆಯನ್ನು ಎದುರಿಸುತ್ತಿದ್ದರೆ ನವರಾತ್ರಿ ವೇಳೆ ದುರ್ಗಾ ಮಾತೆಯನ್ನು ಆರಾಧಿಸುವುದರಿಂದ ಶೀಘ್ರವೇ ಅದಕ್ಕೆ ಪರಿಹಾರ ಸಿಗುತ್ತದೆ.

ಮನೋಕಾಮನೆಗಳನ್ನು ಪೂರ್ತಿಗೊಳಿಸಿಕೊಳ್ಳಬೇಕು ಅಂದರೆ

ದುರ್ಗಾ ಮಾತೆಯ ಎದುರು ಮಣ್ಣಿನಿಂದ ಮಾಡಿದ 9 ಅಖಂಡ ದೀಪಗಳನ್ನು ಹಚ್ಚಬೇಕು. ಕೈಯಲ್ಲಿ ನೀರು ಹಿಡಿದು ಪ್ರಾರ್ಥನೆ ಸಲ್ಲಿಸಬೇಕು. ಅದಾದ ಮೇಲೆ ಕೈಯಲ್ಲಿರುವ ನೀರನ್ನು ನೆಲದ ಮೇಲೆ ಬಿಡಬೇಕು. ಇನ್ನು ಅಖಂಡ ದೀಪಗಳನ್ನು 9 ದಿನ, 7 ದಿನ, 5 ದಿನ ಅಥವಾ 2 ದಿನಗಳ ಕಾಲ ಹಚ್ಚುವುದರಿಂದ ನಿಮ್ಮ ಮನೋಕಾಮನೆಗಳು ನೆರವೇರುತ್ತವೆ. ಆದರೆ ಈ ಮಧ್ಯೆ ದೀಪವನ್ನು ಆರಿಸಬಾರದು.

ನಿಂತು ಹೋಗಿರುವ ಯೋಜನೆ ಕೈಗೂಡಬೇಕು ಅಂದರೆ

ದೀರ್ಘ ಕಾಲದಿಂದ ಕೈಗೂಡದೆ ನಿಂತುಹೋಗಿರುವ ಕೆಲಸ ಪೂರ್ಣಗೊಳ್ಳಬೇಕು ಅಂದರೆ ದುರ್ಗಾ ಮಾತೆಗೆ ಕೆಂಪು ಚುನರಿ ಬಟ್ಟೆಯಲ್ಲಿ ಐದು ತರಹದ ಒಣ್ಣ ಹಣ್ಣುಗಳನ್ನು (Dry Fruits) ತೆಗೆದುಕೊಂಡು ಹೋಗಿ ದುರ್ಗಾ ಮಾತೆಗೆ ಅರ್ಪಿಸಬೇಕು. ಆ ವೇಳೆ ನಿಮ್ಮ ಇಚ್ಛೆಯನ್ನು ಪೂರ್ತಿಗೊಳಿಸುವಂತೆ ಮಾತೆಯಲ್ಲಿ ಪ್ರಾರ್ಥನೆ ಮಾಡಬೇಕು. ಬಳಿಕ ಅದನ್ನು ಪ್ರಸಾದವಾಗಿ ಸ್ವೀಕರಿಸಬೇಕು. ಇದರಿಂದ ನಿಮ್ಮ ಕೆಲಸದಲ್ಲಿ ಎದುರಾಗುತ್ತಿರುವ ವಿಘ್ನಗಳು ದೂರವಾಗುತ್ತವೆ. ನಿಂತುಹೋಗಿರುವ ನಿಮ್ಮ ಕೆಲಸ ಪೂರ್ಣಗೊಳ್ಳಲಿದೆ.

ಹಣದ ಸಂಕಟ ದೂರವಾಗಬೇಕು ಅಂದರೆ

ಒಂದು ವೇಳೆ ನಿಮ್ಮ ಪರಿವಾರದಲ್ಲಿ ಹಣದ ಸಂಕಷ್ಟ ಎದುರಾಗಿದೆ ಅಂದರೆ ಅದನ್ನು ನಿವಾರಿಸಿಕೊಳ್ಳಲು ನವರಾತ್ರಿಯ ವೇಳೆ ಬೆಳ್ಳಿಯಲ್ಲಿ ಮಾಡಿರುವ ಸ್ವಸ್ತಿಕ್, ಅನೆ, ದೀಪ, ಕಲಶ, ಶ್ರೀ ಯಂತ್ರ, ಮುಕುಟ ಇವುಗಳ ಪೈಕಿ ಒಂದನ್ನು ಖರೀದಿಸಬೇಕು. ಅದನ್ನು ದುರ್ಗಾ ಮಾತೆಯ ಪದ ತಲದಲ್ಲಿ ಇಡಬೇಕು. ನವರಾತ್ರಿಯ ಕೊನೆಯ ದಿನ ಗುಲಾಬಿ ಬಣ್ಣದ ಬಟ್ಟೆಯಲ್ಲಿ ಸುತ್ತಿಕೊಂಡು ಅದನ್ನು ಹಣ ಎತ್ತಿಡುವ ಜಾಗದಲ್ಲಿ ಎತ್ತಿಡಬೇಕು. ಇದರಿಂದ ಶೀಘ್ರವೇ ನಿಮ್ಮ ಆರ್ಥಿಕ ಸಮಸ್ಯೆಗಳೆಲ್ಲಾ ದೂರವಾಗಲಿವೆ. ಧನಾಗಮ ಶುರುವಾಗಲಿದೆ.

ಸಂಕಷ್ಟಗಳಿಂದ ದೂರವಾಗಲು

ನವರಾತ್ರಿಯ ದಿನಗಳಲ್ಲಿ ವೀಳ್ಯದ ಎಲೆಯಲ್ಲಿ ಲವಂಗ ಮತ್ತು ಬತಾಸು ಸಿಹಿ ತಿನಿಸನ್ನು ಆಂಜನೇಯನಿಗೆ ಅರ್ಪಿಸಬೇಕು. ಅದಾದ ಮೇಲೆ ಹನುಮಾನ್​ ಚಾಲೀಸ್​ ಪಠಣ ಮಾಡಬೇಕು. ಇದರಿಂದ ನಿಮ್ಮ ಕಷ್ಟಗಳು ದೂರವಾಗಲಿವೆ.

ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ