Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ಮುರಿದ ಸಾಮಾನು ಇದ್ದರೆ ಆ ಮನೆಯಲ್ಲಿ ಕುಟುಂಬದವರ ಮನಸುಗಳೂ ಮುರಿದುಬೀಳುತ್ತವೆ, ಎಚ್ಚರಾ

Garuda Purana: ಚಿಕ್ಕ ಚಿಕ್ಕ ವಿಷಯಗಳೇ ದೊಡ್ಡದಾಗಿ ಬಾಧಕವಾಗಿಬಿಡುತ್ತದೆ. ಹಾಗಾದರೆ ನಿಶ್ಚಿತವಾಗಿ ಕೆಲವು ಅಭ್ಯಾಸಗಳನ್ನು ಬದಲಿಸಿಕೊಳ್ಳುವುದು ಅತ್ಯಗತ್ಯ. ಗರುಡ ಪುರಾಣದಲ್ಲಿ ಇಂತಹುದೇ ವಿಷಯಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಅವುಗಳನ್ನು ಗೌರವಿಸಿ, ನಮ್ಮ ದುರ್ಗುಣಗಳನ್ನು ಸರಿಪಡಿಸಿಕೊಳ್ಳುವುದರಲ್ಲೇ ನಮ್ಮ ಸಂಸಾರದ ಹಿತ ಅಡಗಿದೆ ಎಂಬುದು ಸತ್ಯವಾದ ಮಾತು.

ಮನೆಯಲ್ಲಿ ಮುರಿದ ಸಾಮಾನು ಇದ್ದರೆ ಆ ಮನೆಯಲ್ಲಿ ಕುಟುಂಬದವರ ಮನಸುಗಳೂ ಮುರಿದುಬೀಳುತ್ತವೆ, ಎಚ್ಚರಾ
ಮನೆಯಲ್ಲಿ ಮುರಿದ ಸಾಮಾನು ಇದ್ದರೆ ಆ ಮನೆಯಲ್ಲಿ ಕುಟುಂಬದವರ ಮನಸುಗಳೂ ಮುರಿದುಬೀಳುತ್ತವೆ, ಎಚ್ಚರಾ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Oct 09, 2021 | 8:37 AM

ಗರುಡ ಪುರಾಣದಲ್ಲಿ ಹೇಳುವಂತೆ ಮೂರು ದುರ್ಗುಣಗಳು, ಕೆಟ್ಟ ಚಟಗಳು ಅಥವಾ ಕೆಟ್ಟ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದರಿಂದ ನಗುನಗುತಿರುವ ಸಂಸಾರದಲ್ಲಿ ಕ್ಲೇಷ ಮನೆ ಮಾಡಿಬಿಡುತ್ತದೆ. ಮನೆಯಲ್ಲಿ ನಕಾರಾತ್ಮಕತೆ ಸೃಷ್ಟಿಯಾಗುತ್ತದೆ. ಪರಸ್ಪರ ಜಗಳಗಳು ಕಾಣಿಸಿಕೊಳ್ಳುತ್ತವೆ. ಅಂತಹ ದುರ್ಗುಣಗಳನ್ನು ಶೀಘ್ರವಾಗಿ ಬಿಟ್ಟುಬಿಡಬೇಕು. ಇಲ್ಲವಾದಲ್ಲಿ ಸಮಸ್ಯೆಗಳು ಹೆಚ್ಚಾಗತೊಡಗುತ್ತವೆ. ಅಂತಹ ಕೆಟ್ಟ ಚಟಗಳು ಯಾವುವು ಎಂಬುದನ್ನು ಗರುಡ ಪುರಾಣದಲ್ಲಿ ಸೂಕ್ಷ್ಮವಾಗಿ ಹೇಳಲಾಗಿದೆ.

ಮನೆಯೆಂದ ಮೇಲೆ ಪರಿವಾರದ ಸದಸ್ಯರ ಮಧ್ಯೆ ಪರಸ್ಪರ ಮನಗಳಲ್ಲಿ ಸಹಮತ, ಅಸಮ್ಮತಿ ಕಾಣಿಸಿಕೊಳ್ಳುವುದು ಸಾಮಾನ್ಯ. ಪಿರಿಪಿರಿಗಳು ಆಗಾಗ ಕಾಣಿಸತೊಡಗುತ್ತವೆ. ಚಿಕ್ಕ ಚಿಕ್ಕ ವಿಷಯಗಳೇ ದೊಡ್ಡದಾಗಿ ಬಾಧಕವಾಗಿಬಿಡುತ್ತದೆ. ಮಾತು ಮಾತಿನಲ್ಲೇ ಜಗಳಗಳು ಶುರುವಾಗಿಬಿಡುತ್ತವೆ. ಹಾಗಾದರೆ ನಿಶ್ಚಿತವಾಗಿ ಕೆಲವು ಅಭ್ಯಾಸಗಳನ್ನು ಬದಲಿಸಿಕೊಳ್ಳುವುದು ಅತ್ಯಗತ್ಯವಾಗುತ್ತದೆ. ಹಿಂದೂ ಧರ್ಮದ ಮಹಾಪುರಾಣವಾದ ಗರುಡ ಪುರಾಣದಲ್ಲಿ ಇಂತಹುದೇ ವಿಷಯಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಅವುಗಳನ್ನು ಗೌರವಿಸಿ, ನಮ್ಮ ದುರ್ಗುಣಗಳನ್ನು ಸರಿಪಡಿಸಿಕೊಳ್ಳುವುದರಲ್ಲೇ ನಮ್ಮ ಸಂಸಾರದ ಹಿತ ಅಡಗಿದೆ ಎಂಬುದು ಸತ್ಯವಾದ ಮಾತು.

1. ರಾತ್ರಿ ವೇಳೆ ಅಡುಗೆ ಮನೆ ಪಾತ್ರೆ ತೊಳೆಯದಿರುವುದು ರಾತ್ರಿ ವೇಳೆ ಅಡುಗೆ ಪಾತ್ರೆ, ಊಟ ಮಾಡಿದ ತಟ್ಟೆ ಲೋಟಗಳನ್ನು ಅಡುಗೆ ಮನೆಯ ಸಿಂಕ್​ನಲ್ಲಿಯೇ ಬಿಟ್ಟುಬಿಡುವುದು ಈಗಿನ ಕಾಲದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಬಹುತೇಕ ಮನೆಗಳಲ್ಲಿ ಇಂತಹುದನ್ನು ಕಾಣಬಹುದು. ಆದರೆ ಗರುಡ ಪುರಾಣದ ಪ್ರಕಾರ ಈ ಅಭ್ಯಾಸಗಳು ಒಳ್ಳೆಯದಲ್ಲ. ಇದರಿಂದ ಮನೆಯವ ಮಧ್ಯೆ ಜಗಳಗಳು ಕಾಣಿಸುತ್ತವೆ. ಕ್ಲೇಷ ತುಂಬಿಕೊಳ್ಳುತ್ತದೆ. ಹಾಗಾಗಿ ಇದರಿಂದ ಹೊರಬರಲು ರಾತ್ರಿ ವೇಳೆಯೇ ಪಾತ್ರೆಗಳನ್ನು ತೊಳೆದು, ಶುಚಿಗೊಳಿಸುವುದು ಒಳ್ಳೆಯದು.

2. ಮನೆಯನ್ನು ಸ್ವಚ್ಛವಾಗಿಡಬೇಕು ಈಗಿನ ಕಾಲದಲ್ಲಿ ಜನರಿಗೆ ಹೆಚ್ಚು ಸಮಯವೇ ಸಿಗುತ್ತಿಲ್ಲ. ಸದಾ ಹರಿಬರಿನಲ್ಲಿರುತ್ತಾರೆ, ಏನೋ ಧಾವಂತದಲ್ಲಿರುತ್ತಾರೆ. ಹಾಗಾಗಿ ಮನೆಯನ್ನು ಸ್ವಚ್ಛಗೊಳಿಸಿ, ಒಪ್ಪ ಓರಣವಾಗಿಟ್ಟುಕೊಳ್ಳುವುದು ಸಾಧ್ಯವಾಗುವುದಿಲ್ಲ. ಆದರೆ ಗುರುಡ ಪುರಾಣದಲ್ಲಿ ಇಂತಹ ದುರ್ಗುಣಗಳನ್ನು ಬಿಟ್ಟುಬಿಡಬೇಕು ಎಂದು ತಿಳಿಯಹೇಳಲಾಗಿದೆ. ಹಾಗಾಗಿ, ನಿಯಮಿತ ರೂಪದಲ್ಲಿ ಮನೆಯನ್ನು ಸದಾ ಸ್ವಚ್ಛವಾಗಿಟ್ಟುಕೊಳ್ಳಬೇಕು. ಮನೆಯನ್ನು ಕ್ಲೀನಾಗಿ ಇಟ್ಟುಕೊಳ್ಳದಿದ್ದರೆ ಲಕ್ಷ್ಮಿ ಕೋಪಗೊಳ್ಳುತ್ತಾಳೆ.

ಅಂತಹ ಮನೆಗಳಲ್ಲಿ ರೋಗರುಜಿನಗಳು ಬರುತ್ತವೆ. ಹಣ ನೀರಿನಂತೆ ಖರ್ಚಾಗುತ್ತಾ ಇರುತ್ತದೆ. ಹಣ ಉಳಿತಾಯ ಮಾಡಲು ಆಗುವುದಿಲ್ಲ. ಹಣದ ಸಮಸ್ಯೆ ಹೆಚ್ಚಾಗಿ ಮನೆಯವರ ಮಧ್ಯೆ ಮನಸ್ತಾಪಗಳು ಉದ್ಭವಿಸುತ್ತವೆ. ಇಡೀ ಮನೆಯಲ್ಲಿ ಮಮಕಾರ ಕಾಣೆಯಾಗಿ, ನಕಾರಾತ್ಮಕತೆ ತಾಂಡವವಾಡುತ್ತದೆ. ಆದ್ದರಿಂದ ದಿನಾ ಬೆಳಗ್ಗೆಯೇ ಎದ್ದು ಮನೆಯನ್ನು ಸ್ವಚ್ಛಗೊಳಿಸಿ, ದೇವರ ಧ್ಯಾನ ಮಾಡಿ ಶಾಂತಿ ಕಾಪಾಡಬೇಕು.

3. ಮನೆಯಲ್ಲಿ ಮುರಿದ ಸಾಮಾನುಗಳು ಇಡಬಾರದು ಗರುಡ ಪುರಾಣದ ಪ್ರಕಾರ ಮನೆಯಲ್ಲಿ ಮುರಿದ ಸಾಮಾನುಗಳು ಇರಬಾರದು. ಇದರಿಂದ ಮನೆಯಲ್ಲಿರುವವ ಮನಸುಗಳೂ ಮುರಿದುಬೀಳುತ್ತದೆ. ನಕಾರಾತ್ಮಕತೆ ಹೆಚ್ಚುತ್ತದೆ. ಮನೆಯಲ್ಲಿ, ಮಹಡಿಯಲ್ಲಿ ಕಬ್ಬಿಣದ ಮುರಿದ ಸಾಮಾನುಗಳನ್ನು ಬಿಸಾಡಬಾರದು. ಮುರಿದ ಫರ್ನೀಚರ್​​ ಮನೆಯಲ್ಲಿ ಇರಬಾರದು. ಮುರಿದ ವಸ್ತುಗಳನ್ನು ತಕ್ಷಣ ಮನೆಯಿಂದ ಹೊರಗೆ ಬಿಸಾಡಿ, ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ.

ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
ಮೈಸೂರು: ಶತಮಾನದಷ್ಟು ಹಳೆಯದಾದ ಕಟ್ಟಡದ ಮೇಲೆ ವಕ್ಫ್​ ಕಣ್ಣು, ನೋಟೀಸ್
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
Horoscope: ಶುಕ್ರವಾರ, ಇಂದಿನ ದ್ವಾದಶ ರಾಶಿಗಳ ಫಲಾಫಲ ತಿಳಿಯಿರಿ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ