Navratri 2021: ನವರಾತ್ರಿ ರಾಶಿ ಫಲ- ನಿಮ್ಮ ರಾಶಿಯ ಮೇಲೆ ದುರ್ಗಾ ಮಾತೆಯ ಪ್ರಭಾವ ಹೇಗಿದೆ, ತಿಳಿದುಕೊಳ್ಳೀ

ನವರಾತ್ರಿ 2021: ಇದು ಶುಕ್ಲ ಪಕ್ಷದ ಅವಧಿ. ಹಾಗಾಗಿ ಪ್ರತಿ ರಾತ್ರಿಯೂ ತೇಜೋಮಯವಾಗಿ ಕಂಗೊಳಿಸುತ್ತಾನೆ. ಈ ಕಾಲವು ಹೆಚ್ಚು ಹೆಚ್ಚು ಅಭಿವರ್ಧನೆಗೆ ಸಹಕಾರಿಯಾಗುತ್ತದೆ. ಉಜ್ವಲ ಚಂದ್ರನ ಬೆಳದಿಂಗಳಲ್ಲಿ ಹಬ್ಬದ ಸೊಬಗು ಹೆಚ್ಚಾಗಿ ಆನಂದದ ವಾತಾವರಣ ನೆಲೆಸಲಿದೆ. ಇದರಿಂದ ಭಕ್ತರಿಗೆ ಪ್ರಸನ್ನತೆ ಲಭಿಸುತ್ತದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ನವರಾತ್ರಿ ಕಾಲದಲ್ಲಿ ನಿಮಗೆ ರಾಶಿ ಫಲ ಹೇಗಿರುತ್ತದೆ. ತಿಳಿಯಿರಿ.

Navratri 2021: ನವರಾತ್ರಿ ರಾಶಿ ಫಲ- ನಿಮ್ಮ ರಾಶಿಯ ಮೇಲೆ  ದುರ್ಗಾ ಮಾತೆಯ ಪ್ರಭಾವ ಹೇಗಿದೆ, ತಿಳಿದುಕೊಳ್ಳೀ
ನವರಾತ್ರಿ ರಾಶಿ ಫಲ- ನಿಮ್ಮ ರಾಶಿಯ ಮೇಲೆ ದುರ್ಗಾ ಮಾತೆಯ ಪ್ರಭಾವ ಹೇಗಿದೆ, ತಿಳಿದುಕೊಳ್ಳೀ

ಇದು ನವ ರಾತ್ರಿ ಸಂದರ್ಭ. ಪವಿತ್ರ ದಸರಾ ಹಬ್ಬ ನಿಮ್ಮ ಜೀವನದ ಮೇಲೆ ಹೇಗೆ ಪ್ರಭಾವ ಬೀರಲಿದೆ. ನಿಮ್ಮ ರಾಶಿಗೆ ಅನುಗುಣವಾಗಿ ನಿಮ್ಮ ಜೀವನದಲ್ಲಿ ಸುಖ ಶಾಂತಿ ಸಂಪತ್ತು ಹೇಗೆ ಒದಗಿಬರಲಿದೆ ಎಂಬುದನ್ನು ತಿಳಿದುಕೊಳ್ಳಿ. ಶ್ರೀ ಶಾರದಾ ದೇವಿಯ ಶರನ್ನವರಾತ್ರಿ ಅಕ್ಟೋಬರ್ 7 ರಿಂದ ಆರಂಭಗೊಂಡಿದ್ದು ಅಕ್ಟೋಬರ್ 15 ರ ವರೆಗೂ ನೆರವೇರಲಿದೆ.

ಇದು ಶುಕ್ಲ ಪಕ್ಷದ ಅವಧಿ. ಹಾಗಾಗಿ ಪ್ರತಿ ರಾತ್ರಿಯೂ ತೇಜೋಮಯವಾಗಿ ಕಂಗೊಳಿಸುತ್ತಾನೆ. ಈ ಕಾಲವು ಹೆಚ್ಚು ಹೆಚ್ಚು ಅಭಿವರ್ಧನೆಗೆ ಸಹಕಾರಿಯಾಗುತ್ತದೆ. ಉಜ್ವಲ ಚಂದ್ರನ ಬೆಳದಿಂಗಳಲ್ಲಿ ಹಬ್ಬದ ಸೊಬಗು ಹೆಚ್ಚಾಗಿ ಆನಂದದ ವಾತಾವರಣ ನೆಲೆಸಲಿದೆ. ಇದರಿಂದ ಭಕ್ತರಿಗೆ ಪ್ರಸನ್ನತೆ ಲಭಿಸುತ್ತದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ನವರಾತ್ರಿ (Navratri 2021) ಕಾಲದಲ್ಲಿ ನಿಮಗೆ ರಾಶಿ ಫಲ ಹೇಗಿರುತ್ತದೆ. ನಿಮ್ಮ ರಾಶಿಯ ಮೇಲೆ ದುರ್ಗಾ ಮಾತೆಯ ಪ್ರಭಾವ ಹೇಗಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ಮೇಷ ರಾಶಿ:
ಹಣ ಗಳಿಕೆಗೆ ಹೊಸ ಅವಕಾಶ ತೆರೆದುಕೊಳ್ಳಲಿವೆ. ಆದರೆ ಅಸಮಂಜಸ ಸ್ಥಿತಿಗಳು ಎದುರಾಗಲಿವೆ. ಶಾಂತವಾಗಿದ್ದು, ಕ್ರೋಧವನ್ನು ಗೆಲ್ಲಿ.

ವೃಷಭ ರಾಶಿ:
ಬಾಹ್ಯದಿಂದ ನೆರವು ಒದಗಿಬರಲಿದೆ. ಅನಿರೀಕ್ಷಿತ ಅವಕಾಶಗಳು ದೊರೆಯಲಿವೆ. ಕೆಳ ಹಂತದವರ ಜೊತೆ ದುರ್ವ್ಯವಹಾರ ಮಾಡಬೇಡಿ.

ಮಿಥುನ ರಾಶಿ:
ಮಿಥುನ ರಾಶಿಯವರಿಗೆ ಪ್ರಯಾಸದ ಫಲಗಳು ಸಿಗಲಿವೆ. ಉದ್ಯೋಗ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಕಡುಬರಲಿದೆ. ಅನವಶ್ಯಕ ಖರ್ಚುಗಳ ಮೇಲೆ ನಿಯಂತ್ರಣ ಇರಲಿ.

ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಶಂಸೆ ಲಭಿಸಲಿದೆ. ಪದೋನ್ನತಿ ಯೋಗವೂ ಲಭ್ಯವಾಗಲಿದೆ. ಹೊಸ ಮೂಲಗಳಿಂದ ಸಂಪತ್ತು ಹರಿದುಬರಲಿದೆ. ವಿಲಾಸಿ ಜೀವನದ ಮೇಲೆ ದುಡ್ಡು ಚೆಲ್ಲ ಬೇಡಿ.

ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಕೃಷಿಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ. ಧನ ಲಾಭ ಪ್ರಾಪ್ತಿಯಾಗಲಿದೆ. ನಿಮ್ಮ ಮೇಲಾಧಿಕಾರಗ: ಜೊತೆ ಉತ್ತಮ ಬಾಂಧವ್ಯ ಹೊಂದುವುದಕ್ಕೆ ಪ್ರಯತ್ನಿಸಿ.

ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಸಾಫಲ್ಯತೆ ಸಾಧಿಸಲು ಸಹಯೋಗ ಸಿಗಲಿದೆ. ಒಂದಕ್ಕಿಂತ ಹೆಚ್ಚು ಉದ್ಯೋಗಾವಕಾಶಗಳು ನಿಮ್ಮನ್ನು ಹುಡುಕಿಬರಲಿವೆ. ನೌಕರಿ ಬದಲಿಸುವ ಮುನ್ನ ಸರಿಯಾಗಿ ಯೋಚಿಸಿ, ಸಮಂಜಸ ನಿರ್ಧಾರ ತೆಗೆದುಕೊಳ್ಳಿ.

ತುಲಾ ರಾಶಿ:
ತುಲಾ ರಾಶಿಯವರು ಹೆಚ್ಚು ಪರಿಶ್ರಮ ಪಡಬೇಕು. ನೌಕರಿ ಸಮಸ್ಯೆಗೆ ಪರಿಹಾರ ಕಂಡುಬರಲಿದೆ. ಮನಸ್ಸು ಅಸ್ಥಿರವಾಗಲಿದೆ. ಸರ್ಕಾರದ ಯಾವುದೇ ಕಾನೂನಿನ ಬಗ್ಗೆ ಚರ್ಚೆ, ವಾದ ಮಾಡಬೇಡಿ. ಜಗಳ ಮಾಡಿಕೊಳ್ಳಬೇಡಿ.

ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯವರ ಆರ್ಥಿಕ ಪರಿಸಗ್ಥಿತಿ ಸುಧಾರಿಸಲಿದೆ. ವ್ಯಾಪಾರದಲ್ಲಿ ಹೊಸ ಅವಕಾಶಗಳು ಕೂಡಿಬರಲಿವೆ. ಮಹಿಳೆಯರನ್ನು ಗೌರವಿಸಿ.

ಧನು ರಾಶಿ:
ಧನು ರಾಶಿಯವರಿಗೆ ಅವರ ಮನಸ್ಸಿಗೆ ಇಷ್ಟವಾಗುವ ನೌಕರಿ ಸಿಗಲಿದೆ. ನಿರುದ್ಯೋಗ ಶೀಘ್ರವೇ ಕೊನೆಗಾಣಲಿದೆ. ಕಣ್ಣೆದುರಿಗೆ ಸಂಪತ್ತು ಪ್ರಾಪ್ತಿಯಾಗುವ ಯೋಗ ಕಾಣಬರಲಿದೆ. ತೀವ್ರ ವಾಗ್ವಾದಗಳಿಂದ ದೂರವಿರಿ.

ಮಕರ ರಾಶಿ:
ಮಕರ ರಾಶಿಯವರಿಗೆ ಪದೋನ್ನತಿ ಅವಕಾಶ ಒದಗಿಬರಲಿದೆ. ಆದರೆ ಉದ್ಯೋಗದಲ್ಲಿ ಸ್ವಲ್ಪ ಯಡವಟ್ಟು ಸಂಭವಿಸಲಿದೆ. ನೌಕರಿಯಲ್ಲಿ ಒಂದಷ್ಟು ಪ್ರಯೋಜನಗಳು ಸಿಗಲಿವೆ.

ಕುಂಭ ರಾಶಿ:
ಕುಂಭ ರಾಶಿಯವರಿಗೆ ವ್ಯಾಪಾರದಲ್ಲಿ ಲಾಭಗಳು ಹೆಚ್ಚಾಗಲಿವೆ. ಉದ್ಯೋಗದಲ್ಲಿ ಎದುರಾಗಿರುವ ತೊಡಕುಗಳು ನಿವಾರಣೆಯಾಗಲಿವೆ. ಗೊಂದಲಗಳು ನಿವಾರಣೆಯಾಗಲಿವೆ.

ಮೀನ ರಾಶಿ:
ಸ್ನೇಹಿತರ ನೆರವು ಕೂಡಿಬರಲಿದೆ. ನೌಕರಿಯಲ್ಲಿ ಸ್ಥಿರತೆ ಕಾಣಬರಲಿದೆ. ಸಂಪತ್ತಿನ ಲಾಭ ಎದುರಿಗೇ ಇದೆ. ಅಭಿವೃದ್ಧಿಯ ದಿನಗಳು ಕಾಣಬರಲಿವೆ. ಶಾಂತವಾಗಿರಿ. ಅನವಶ್ಯಕ ಚರ್ಚೆಗಳಿಗೆ ಎಡೆ ಮಾಡಕೊಡಬೇಡಿ.

Read Full Article

Click on your DTH Provider to Add TV9 Kannada