ನವರಾತ್ರಿ 2021 ಐದನೇ ದಿನ: ಯಾರು ಈ ಸ್ಕಂದಮಾತಾ? ಇಲ್ಲಿದೆ ಮಂತ್ರ

Navratri 2021: ಪಾತಾಳಲೋಕದಲ್ಲಿರುವ ತಾರಕಾಸುರ ಎಂಬ ರಾಕ್ಷಸನನ್ನು ವಧೆ ಮಾಡಲು, ದೇವಿ ಸ್ಕಂದನಿಗೆ ಜನ್ಮ ಕೊಡ್ತಾಳೆ. ಆದ್ದರಿಂದ ಈಕೆಯನ್ನು ಸ್ಕಂದಮಾತಾ ಅಂತಾ ಕರೆಯಲಾಗುತ್ತೆ. ಸ್ಕಂದಮಾತೆಯ ರೂಪ ಅತ್ಯಂತ ವಿಶಿಷ್ಟ. ಈ ದೇವಿ ಸಿಂಹದ ಮೇಲೆ ಕುಳಿತಿರುತ್ತಾಳೆ. ಶ್ವೇತವರ್ಣಳಾಗಿ ಸುಂದರವಾಗಿ ಕಾಣುತ್ತಾಳೆ.

ನವರಾತ್ರಿ 2021 ಐದನೇ ದಿನ: ಯಾರು ಈ ಸ್ಕಂದಮಾತಾ? ಇಲ್ಲಿದೆ ಮಂತ್ರ
ಸ್ಕಂದಮಾತಾ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Oct 11, 2021 | 6:39 AM

ನವರಾತ್ರಿಯ ಒಂಬತ್ತು ದಿನವೂ ದುರ್ಗೆಯ ಆರಾಧನೆಗೆ ಪ್ರಶಸ್ತ. ಈ ವೇಳೆ ನವದುರ್ಗೆಯರನ್ನು ಆರಾಧಿಸೋದು ವಿಶೇಷ. ನವರಾತ್ರಿಯ ಐದನೇ ದಿನ ಕರುಣೆ ತುಂಬಿದ ಸ್ಕಂದಮಾತಾ ದೇವಿಯ ಆರಾಧನೆಗೆ ಮೀಸಲು. ಧರ್ಮಗ್ರಂಥಗಳ ಪ್ರಕಾರ ಮೂರ್ಖನಅದರೂ ಈಕೆಯ ಕೃಪೆಯಿಂದ ಬುದ್ಧವಂತನಾಗುತ್ತಾನೆ. ನವದುರ್ಗೆಯರಲ್ಲಿ ಸ್ಕಂದಮಾತೆಯದ್ದು ಐದನೇ ರೂಪ. ಪುರಾಣದ ಪ್ರಕಾರ, ದುರ್ಗೆಗೆ ಸ್ಕಂದಮಾತಾ ಎಂದು ಹೆಸರು ಬರಲು ಒಂದು ಕಾರಣವಿದೆ.

ಅದೇನಂದ್ರೆ, ಪಾತಾಳಲೋಕದಲ್ಲಿರುವ ತಾರಕಾಸುರ ಎಂಬ ರಾಕ್ಷಸನನ್ನು ವಧೆ ಮಾಡಲು, ದೇವಿ ಸ್ಕಂದನಿಗೆ ಜನ್ಮ ಕೊಡ್ತಾಳೆ. ಆದ್ದರಿಂದ ಈಕೆಯನ್ನು ಸ್ಕಂದಮಾತಾ ಅಂತಾ ಕರೆಯಲಾಗುತ್ತೆ. ಸ್ಕಂದಮಾತೆಯ ರೂಪ ಅತ್ಯಂತ ವಿಶಿಷ್ಟ. ಈ ದೇವಿ ಸಿಂಹದ ಮೇಲೆ ಕುಳಿತಿರುತ್ತಾಳೆ. ಶ್ವೇತವರ್ಣಳಾಗಿ ಸುಂದರವಾಗಿ ಕಾಣುತ್ತಾಳೆ. ನಾಲ್ಕು ಭುಜಗಳನ್ನು ಹೊಂದಿದ್ದು, ಎರಡು ಕೈಗಳಲ್ಲಿ ಕಮಲಗಳನ್ನು ಹಿಡಿದಿರುತ್ತಾಳೆ. ಇನ್ನು ತಾಯಿಯ ಬಲ ತೊಡೆಯ ಮೇಲೆ ತಾನು ಜನ್ಮ ನೀಡಿದ ಸ್ಕಂದನನ್ನು ಕೂರಿಸಿಕೊಂಡಿರ್ತಾಳೆ. ಸ್ಕಂದಮಾತೆಯದ್ದು ಕರುಣೆ ತುಂಬಿದ ತಾಯಿಯ ರೂಪವಾಗಿದೆ. ಮಾತೃ ಹೃದಯಿ ಆಗಿರುವ ಸ್ಕಂದಮಾತೆಯನ್ನು ಆರಾಧಿಸಲು ವಿಶೇಷ ಮಂತ್ರವಿದೆ. ಈ ಮಂತ್ರವನ್ನು ಜಪಿಸಿದ್ರೆ ಶೀಘ್ರ ಫಲಗಳನ್ನು ಪಡೆಯಬಹುದು ಅನ್ನೋ ನಂಬಿಕೆ ಇದೆ.

ಸ್ಕಂದಮಾತಾ ಮಂತ್ರ ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ

ಸ್ಕಂದಮಾತಾ ಪೂಜಾ ವಿಧಾನ ಬೆಳಗ್ಗೆ ಸ್ನಾನ ಮಾಡಿದ ನಂತರ ಶುದ್ಧವಾದ ಬಟ್ಟೆಗಳನ್ನು ಧರಿಸಿ ಸ್ಕಂದಮಾತೆಯ ವಿಗ್ರಹವನ್ನು ಪೂಜೆಗೆ ಸ್ಥಾಪಿಸಿ ಪೂಜಿಸಬೇಕು. ಗಂಗಾಜಲದಿಂದ ತಾಯಿಯ ವಿಗ್ರಹವನ್ನು ಶುದ್ಧೀಕರಿಸಿ. ಬಳಿಕ ಹೂವುಗಳನ್ನು ಅರ್ಪಿಸಿ ಸಿಹಿತಿಂಡಿಗಳು ಮತ್ತು 5 ವಿಧದ ಹಣ್ಣುಗಳನ್ನು ಅರ್ಪಿಸಬೇಕು. ಕಲಶವನ್ನು ನೀರಿನಿಂದ ತುಂಬಿಸಿ ಮತ್ತು ಅದರಲ್ಲಿ ಕೆಲವು ನಾಣ್ಯಗಳನ್ನು ಹಾಕಿ ಇದರ ನಂತರ ಪೂಜೆಯಲ್ಲಿ ಪ್ರತಿಜ್ಞೆಯನ್ನು ತೆಗೆದುಕೊಂಡು ಅರಿಶಿನ ಕುಂಕುಮವನ್ನು ಸ್ಕಂದಮಾತೆಗೆ ಅನ್ವಯಿಸಿ ತಾಯಿಗೆ ಆರತಿ ಮಾಡಿ ಮಂತ್ರವನ್ನು ಪಠಿಸಬೇಕು. ನವರಾತ್ರಿಯ ಐದನೇ ದಿನ ಪುರಾಣದ ಪ್ರಕಾರ ಅತ್ಯಂತ ಮಹತ್ವದ್ದು ಎಂದು ಉಲ್ಲೇಖವಿದೆ. ಈ ದಿನ ವಿಶೇಷವಾಗಿ ಸ್ಕಂದಮಾತೆಯನ್ನು ಪೂಜಿಸಿದ್ರೆ ಆದಿಶಕ್ತಿಯ ಸಂಪೂರ್ಣ ಆಶೀರ್ವಾದ ಪ್ರಾಪ್ತಿಯಾಗುತ್ತೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಸ್ಕಂದಮಾತೆಯ ಆರಾಧನೆಯಿಂದ ಏನೆಲ್ಲ ಫಲಗಳು ಪ್ರಾಪ್ತಿಯಾಗುತ್ವೆ.

ಸ್ಕಂದಮಾತಾ ಪೂಜಾ ಫಲಗಳು -ಈಕೆ ತಪ್ಪಿತಸ್ಥರ ಪಾಲಿನ ಕ್ಷಮಯಾಧರಿತ್ರಿ. -ಸುಖ, ಪರಮಶಾಂತಿಯನ್ನು ನೀಡ್ತಾಳೆ. -ಸ್ಕಂದಮಾತಾ ಪೂಜೆಯಿಂದ ಮೋಕ್ಷ ಪ್ರಾಪ್ತಿ. -ಸ್ಕಂದಮಾತಾ ಆರಾಧನೆಯಿಂದ ಸಾತ್ವಿಕ ಕಳೆ ಬರುತ್ತೆ. -ಸ್ಕಂದಮಾತಾ ಸ್ಮರಣೆಯಿಂದ ಸ್ಕಂದನನ್ನು ಪೂಜಿಸಿದ ಪುಣ್ಯಪ್ರಾಪ್ತಿ.

ಇದನ್ನೂ ಓದಿ: ನವರಾತ್ರಿ 2021 ನಾಲ್ಕನೇ ದಿನ: ಕೂಷ್ಮಾಂಡ ದೇವಿಯ ಆರಾಧನೆ ಹೇಗೆ?

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್