ನವರಾತ್ರಿ 2021 ನಾಲ್ಕನೇ ದಿನ: ಕೂಷ್ಮಾಂಡ ದೇವಿಯ ಆರಾಧನೆ ಹೇಗೆ?

TV9 Digital Desk

| Edited By: Ayesha Banu

Updated on: Oct 10, 2021 | 3:17 PM

Navratri 2021: ನವರಾತ್ರಿಯ ನಾಲ್ಕನೇ ದಿನ ದೇವಿ ಕೂಷ್ಮಾಂಡ ರೂಪವನ್ನು ಆರಾಧಿಸೋದು ವಿಶೇಷ. ನವದುರ್ಗೆಯರಲ್ಲಿ ಕೂಷ್ಮಾಂಡ ದೇವಿ ನಾಲ್ಕನೇಯವಳು. ಈಕೆ ತನ್ನ ಮಧುರ ನಗುವಿನಿಂದ ಬ್ರಹ್ಮಾಂಡವನ್ನು ರಚಿಸಿದ ಕಾರಣ ಇವಳನ್ನು ಕೂಷ್ಮಾಂಡ ದೇವಿ ಎನ್ನಲಾಗುತ್ತೆ.

ನವರಾತ್ರಿ 2021 ನಾಲ್ಕನೇ ದಿನ: ಕೂಷ್ಮಾಂಡ ದೇವಿಯ ಆರಾಧನೆ ಹೇಗೆ?
ಕೂಷ್ಮಾಂಡ

ದೇಶಾದ್ಯಂತ ನವರಾತ್ರಿಯ ಸಂಭ್ರಮ ಕಳೆಕಟ್ಟಿದೆ. ಅನೇಕರು ಉಪವಾಸ ವ್ರತ ಕೈಗೊಂಡು ನವರಾತ್ರಿಯನ್ನು ಸಂಭ್ರಮದಿಂದ ಆಚರಿಸ್ತಿದ್ದಾರೆ. ಇನ್ನು ಕೆಲವರು, ಅವರದ್ದೇ ಆದ ಸಂಪ್ರದಾಯದ ಮೂಲಕ ನವರಾತ್ರಿ ವ್ರತವನ್ನು ಕೈಗೊಂಡಿದ್ದಾರೆ. ಜನಸಾಮಾನ್ಯರು, ಆಧ್ಯಾತ್ಮ ಸಾಧಕರು ಸೇರಿದಂತೆ ಎಲ್ಲರೂ ನವದುರ್ಗೆಯರನ್ನು ಆರಾಧಿಸುತ್ತಿದ್ದಾರೆ.

ನವರಾತ್ರಿಯ ನಾಲ್ಕನೇ ದಿನ ದೇವಿ ಕೂಷ್ಮಾಂಡ ರೂಪವನ್ನು ಆರಾಧಿಸೋದು ವಿಶೇಷ. ನವದುರ್ಗೆಯರಲ್ಲಿ ಕೂಷ್ಮಾಂಡ ದೇವಿ ನಾಲ್ಕನೇಯವಳು. ಈಕೆ ತನ್ನ ಮಧುರ ನಗುವಿನಿಂದ ಬ್ರಹ್ಮಾಂಡವನ್ನು ರಚಿಸಿದ ಕಾರಣ ಇವಳನ್ನು ಕೂಷ್ಮಾಂಡ ದೇವಿ ಎನ್ನಲಾಗುತ್ತೆ. ಇವಳು ಆದಿಶಕ್ತಿಯ ಪ್ರತಿರೂಪ. ಇವಳ ವಾಹನ ಸಿಂಹ. ತೇಜೋಮಯಿ ರೂಪ ಹೊಂದಿರುವ ಕೂಷ್ಮಾಂಡ ದೇವಿ ಅಷ್ಟಭುಜಗಳನ್ನು ಹೊಂದಿದ್ದಾಳೆ. ತನ್ನ ಅಷ್ಟಭುಜಗಳಲ್ಲಿ ಕಮಂಡಲ, ಧನಸ್ಸು, ಬಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ, ಗದೆಯನ್ನು ಹಿಡಿದಿದ್ದಾಳೆ. ಕೂಷ್ಮಾಂಡ ದೇವಿಯ ಪ್ರಭೆ ಸೂರ್ಯನಿಗೆ ಸಮಾನ ಎಂದು ಹೇಳಲಾಗುತ್ತೆ. ಅಲ್ಲದೇ ಕೂಷ್ಮಾಂಡ ದೇವಿ ಕಾಳಿದಾಸನಿಗೆ ಜ್ಞಾನ ನೀಡಿದ ದೇವಿ ಎಂತಲೂ ಪುರಾಣದಲ್ಲಿ ಉಲ್ಲೇಖವಿದೆ. ಈ ಕೂಷ್ಮಾಂಡ ದೇವಿಯ ತಾಂತ್ರಿಕ ಪೂಜೆ ಶ್ರೇಷ್ಠ. ಈ ದೇವಿ ಸ್ತುತಿಯಿಂದ ರಕ್ಷಣೆ ಸಿಗುತ್ತೆ ಅನ್ನೋ ನಂಬಿಕೆ ಇದೆ. ಕೂಷ್ಮಾಂಡ ದೇವಿಯ ಆರಾಧನೆಗೆ ವಿಶೇಷ ಮಂತ್ರವಿದೆ. ಆ ಮಂತ್ರವನ್ನು ಪಠಿಸಿ ಕೂಷ್ಮಾಂಡ ದೇವಿಯ ಆರಾಧನೆ ಮಾಡಿದ್ರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ತವೆ ಎನ್ನಲಾಗುತ್ತೆ.

ಕೂಷ್ಮಾಂಡದೇವಿ ಮಂತ್ರ ಸುರಾಸಂಪೂರ್ಣಕಲಶಂ ರುದಿರಾಪ್ಲು ತಮೇವ ಚ ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ ಸಂಸ್ಕೃತದಲ್ಲಿ ಕುಂಬಳಕಾಯಿಯನ್ನು ಕೂಷ್ಮಾಂಡ ಎನ್ನಲಾಗುತ್ತೆ. ಈ ದೇವಿಗೆ ಕುಂಬಳಕಾಯಿ ಬಲಿ ಅತ್ಯಂತ ಪ್ರಿಯ ಎಂಬ ನಂಬಿಕೆ ಇದೆ. ಹೀಗಾಗೇ ಯೋಗ ಸಾಧಕರು ಕೂಷ್ಮಾಂಡ ದೇವಿಗೆ ಕುಂಬಳಕಾಯಿ ಬಲಿ ನೀಡುವ ಸಂಪ್ರದಾಯವಿದೆ. ಈಕೆಯನ್ನು ಶ್ರದ್ಧಾ-ಭಕ್ತಿಯಿಂದ ಪೂಜಿಸಿದ್ರೆ ಕಷ್ಟಗಳನ್ನು ಪರಿಹರಿಸ್ತಾಳೆ, ಅಜ್ಞಾನವನ್ನು ದೂರ ಮಾಡ್ತಾಳೆ ಅನ್ನೋದು ಇವಳ ಭಕ್ತರ ನಂಬಿಕೆ.

ಕೂಷ್ಮಾಂಡದೇವಿ ಪೂಜೆ ವಿಧಾನ ದುರ್ಗಾ ಪೂಜೆಯ ಈ ದಿನ ಮೊದಲು ಕಲಶ ಪ್ರತಿಷ್ಠಾಪನೆ ಮಾಡಬೇಕು. ಮತ್ತು ಅದರಲ್ಲಿರುವ ದೇವತೆಗಳನ್ನು ಪೂಜಿಸಬೇಕು. ನಂತರ ದೇವಿಯ ವಿಗ್ರಹದ ಎರಡೂ ಬದಿಗಳಲ್ಲಿ ಕುಳಿತಿರುವ ದೇವತೆಗಳನ್ನು ಪೂಜಿಸಿ. ಅವರನ್ನು ಪೂಜಿಸಿದ ನಂತರ, ಕೂಷ್ಮಾಂಡ ದೇವಿಯನ್ನು ಪೂಜಿಸಬೇಕು. ಆದ್ರೆ ಕೈಯಲ್ಲಿ ಹೂವುಗಳನ್ನು ಹಿಡಿದು ದೇವಿಯನ್ನು ಪೂಜಿಸಿ ಮಂತ್ರ ಪಠನೆ ಮಾಡಬೇಕು.

ಕೂಷ್ಮಾಂಡ ದೇವಿ ಆರಾಧನೆಯ ಫಲಗಳು * ರೋಗ ಪರಿಹಾರ * ದುಃಖ ದೂರ * ಆಯಸ್ಸು, ಆರೋಗ್ಯ ವೃದ್ಧಿ * ಜೀವನದಲ್ಲಿ ಯಶಸ್ಸು ಪ್ರಾಪ್ತಿ ಆಯಸ್ಸು ವೃದ್ಧಿಗಾಗಿ ಸಾಧಕರು ನವರಾತ್ರಿಯ ನಾಲ್ಕನೇ ಕೂಷ್ಮಾಂಡ ದೇವಿಯನ್ನು ಸಾಧಕರು ವಿಶೇಷವಾಗಿ ಆರಾಧಿಸ್ತಾರೆ. ಹೀಗೆ ದೇವಿಯನ್ನು ಆರಾಧಿಸೋದ್ರಿಂದ ಸಾಧಕನ ಮನಸ್ಸು ಅನಾಹತ ಚಕ್ರದಲ್ಲಿ ನೆಲೆ ನಿಲ್ಲುತ್ತೆ. ಮನಸ್ಸು ಏಕಾಗ್ರತೆ ಸಾಧಿಸುತ್ತೆ ಅಂತಾ ಧರ್ಮಶಾಸ್ತ್ರ ಹೇಳುತ್ತೆ.

ಇದನ್ನೂ ಓದಿ: Navratri 2021: ನವರಾತ್ರಿ ರಾಶಿ ಫಲ- ನಿಮ್ಮ ರಾಶಿಯ ಮೇಲೆ ದುರ್ಗಾ ಮಾತೆಯ ಪ್ರಭಾವ ಹೇಗಿದೆ, ತಿಳಿದುಕೊಳ್ಳೀ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada