Temple Tour: ತಿರುಪತಿ ತಿಮ್ಮಪ್ಪನಿಗೆ ಸಾಲ ಕೊಟ್ಟಿದ್ದ ಮೈಲಾರ ಮಲ್ಲಣ್ಣ

ಕೆಲವು ಮಂದಿರಗಳ ಪ್ರಾಮುಖ್ಯತೆ ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ. ಅಂತಾ ಮಂದಿರಗಳ ಪೈಕಿ ಬೀದರ್​ನ ಮೈಲಾ ಮಲ್ಲಣ್ಣ ಕ್ಷೇತ್ರವೂ ಒಂದು.

ನಾಡು ಸಾಕಷ್ಟು ಪುರಾಣ ಪ್ರಸಿದ್ಧವಾಗಿರುವ ಪುಣ್ಯಕ್ಷೇತ್ರಗಳನ್ನ ಹೊಂದಿದೆ. ಅದರಲ್ಲೂ ಶತಮಾನದಷ್ಟು ಹಳೆಯದಾದ ಆಲಯಗಳು ಎಲೆಮರೆಕಾಯಿಯಂತಿವೆ. ಅಂತಾ ಕ್ಷೇತ್ರಗಳಲ್ಲಿ ಬೀದರ್​ನ ಮೈಲಾರ ಮಲ್ಲಣ್ಣ ಕ್ಷೇತ್ರವೂ ಒಂದು. ನಾಡಿನ ಪ್ರಮುಖ ಯಾತ್ರಾ ಕ್ಷೇತ್ರದಲ್ಲಿ ಕಂಡು ಬರುವಂತಾ ಸಾಕಷ್ಟು ದೇವಾಲಯಗಳಲ್ಲಿ ಉತ್ತರ ಕರ್ನಾಟಕದ ಹಲವು ಮಂದಿರಗಳಿವೆ. ಕೆಲವು ಮಂದಿರಗಳ ಪ್ರಾಮುಖ್ಯತೆ ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ. ಅಂತಾ ಮಂದಿರಗಳ ಪೈಕಿ ಬೀದರ್​ನ ಮೈಲಾ ಮಲ್ಲಣ್ಣ ಕ್ಷೇತ್ರವೂ ಒಂದು. ರಾಜ್ಯದ ಶಿರ ಅಂತ ಹೆಸರುವಾಸಿಯಾದ ಬೀದರ್ ಜಿಲ್ಲೆಯಲ್ಲಿರುವ ಮೈಲಾರ ಮಲ್ಲಣ್ಣ ಮಂದಿರ ಸಾಕಷ್ಟು ಐತಿಹ್ಯಗಳನ್ನ ಒಳಗೊಂಡಿದೆ. ಬೀದರ್ ಮಹಾರಾಷ್ಟ್ರದ ಹೆದ್ದಾರಿಯಲ್ಲಿರುವ ಮೈಲಾರ ಮಲ್ಲಣ್ಣ ದಟ್ಟಾರಣ್ಯದ ನಡುವೆ ಇರುವಂತಾ ದೇಗುಲವಾಗಿದೆ. ಮಲ್ಲಣ್ಣನಾಗಿ ಅವತಾರ ಎತ್ತಿದ ಪರಮೇಶ್ವರ ಮಂಕಾಸುರನನ್ನು ಕೊಂದು ಮಲ್ಲಾಸುರನನ್ನ ಕ್ಷಮಿಸಿ ಇಲ್ಲಿ ನೆಲೆ ನಿಂತಿರುವ ಪ್ರತೀತಿ ಇದೆ.

Click on your DTH Provider to Add TV9 Kannada