ತಿರುಪತಿ ತಿಮ್ಮಪ್ಪ ದೇವಸ್ಥಾನದಲ್ಲಿ ಭಕ್ತರು ಅರ್ಪಿಸುವ ಬಂಗಾರ ಶೇಖರಣೆಯಾದರೆ ಕೆಜಿಎಫ್ನಲ್ಲಿರೋದೇ ಬಂಗಾರ ತಿಮ್ಮಪ್ಪ!
ದೇಶದ ವಿವಿಧ ಭಾಗಗಳಲ್ಲಿ ತಿಮ್ಮಪ್ಪನ 108 ದೇವಸ್ಥಾನಗಳಿದ್ದು ಅವುಗಳಲ್ಲಿ ಗುಡ್ಡಹಳ್ಳಿಯಲ್ಲಿರೋದು ಸಹ ಸೇರಿದೆ. ಜಿಲ್ಲಾ ಕೇಂದ್ರದಿಂದ 45 ಕಿಮೀ ದೂರದಲ್ಲಿರುವ ತಿಮ್ಮಪ್ಪನ ದೇವಾಸ್ಥಾನದ ಮುಂಭಾಗದಲ್ಲಿ ದ್ವಾರವಿಲ್ಲ. ಅಂದರೆ, ನೇರವಾಗಿ ದೇವರ ದರ್ಶನ ಸಾಧ್ಯವಾಗದು.
ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಕಾಣಿಕೆಯ ರೂಪದದಲ್ಲಿ ಹಣ ಮತ್ತು ಬಂಗಾರವನ್ನು ಸಮರ್ಪಿಸುತ್ತಾರೆ. ಪ್ರತಿವರ್ಷ ಅಲ್ಲಿ ಕೊಪ್ಪರಿಗೆಗಳಷ್ಟು ಬಂಗಾರದ ಶೇಖರಣೆಯಾಗುತ್ತದೆ. ಕರ್ನಾಟಕದಲ್ಲೂ ತಿಮ್ಮಪ್ಪನ ದೇವಸ್ಥಾನವಿದ್ದು ಅದನ್ನು ಬಂಗಾರ ತಿಮ್ಮಪ್ಪನ ದೇವಸ್ಥಾನ ಎಂದೇ ಕರೆಯುತ್ತಾರೆ. ನಾವಿಲ್ಲಿ ಉಲ್ಲೇಖಿಸುತ್ತಿರುವ ಮತ್ತು ನಿಮಗೆ ವಿಡಿಯೋನಲ್ಲಿ ಕಾಣಿಸುತ್ತಿರುವ ತಿಮ್ಮಪ್ಪನ ದೇವಸ್ಥಾನ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಗುಡ್ಡಹಳ್ಳಿಯಲ್ಲಿದೆ. ನಿಮಗೆ ಗೊತ್ತಿರುವ ಹಾಗೆ ಕೆಜಿಎಫ್ನಲ್ಲಿ ಚಿನ್ನದ ಗಣಿಗಾರಿಕೆ ನಡೆಯುತ್ತದೆ. ಹಾಗಾಗೇ, ಇಲ್ಲಿನ ತಿಮ್ಮಪ್ಪನಿಗೆ ಬಂಗಾರದ ತಿಮ್ಮಪ್ಪ ಅಂತ ಕರೆಯುತ್ತಾರೆ.
ಹಾಗೆ ನೋಡಿದರೆ, ದೇಶದ ವಿವಿಧ ಭಾಗಗಳಲ್ಲಿ ತಿಮ್ಮಪ್ಪನ 108 ದೇವಸ್ಥಾನಗಳಿದ್ದು ಅವುಗಳಲ್ಲಿ ಗುಡ್ಡಹಳ್ಳಿಯಲ್ಲಿರೋದು ಸಹ ಸೇರಿದೆ. ಜಿಲ್ಲಾ ಕೇಂದ್ರದಿಂದ 45 ಕಿಮೀ ದೂರದಲ್ಲಿರುವ ತಿಮ್ಮಪ್ಪನ ದೇವಾಸ್ಥಾನದ ಮುಂಭಾಗದಲ್ಲಿ ದ್ವಾರವಿಲ್ಲ. ಅಂದರೆ, ನೇರವಾಗಿ ದೇವರ ದರ್ಶನ ಸಾಧ್ಯವಾಗದು.
ಆದರೆ ದೇವಸ್ಥಾನಕ್ಕೆ 6 ಚಿಕ್ಕ ಗಾತ್ರದ ಕಿಂಡಿಗಳಿವೆ. ಈ ಕಿಂಡಿ ಅರಿಷಡ್ವರ್ಗದ ಅಂದರೆ ಮಾನವರಲ್ಲಿರಬೇಕಾದ 6 ಗುಣಗಳ ಪ್ರತೀಕವಾಗಿವೆ. ಶ್ರೀನಿವಾಸನ ದರ್ಶನಕ್ಕೆ ಬರುವವರಿಗೆ ಆ ಆರು ಗುಣಗಳನ್ನು ನೆನಪಿಸಲು ಹೀಗೆ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಈ ಕಿಂಡಿಗಳೊಳಗೆ ಕೇವಲ ಒಂದು ಕಣ್ಣಿಟ್ಟು ನೋಡಿ ಶ್ರೀನಿವಾಸನ ದರ್ಶನ ಮಾಡಿಕೊಳ್ಳಬೇಕು. ಹಾಗಾಗೇ ಈ ದೇವಸ್ಥಾನವನ್ನು ನೇತ್ರ ವೆಂಕಟೇಶ್ವರ ಸ್ವಾಮಿ ಅಂತಲೂ ಕರೆಯುತ್ತಾರೆ.
ತಿಮ್ಮಪ್ಪನ ದೇವಸ್ಥಾನದಲ್ಲಿ ವರ್ಷಕ್ಕೆ ಮೂರು ಬಾರಿ ಜಾತ್ರಾ ಮಹೋತ್ಸವ ಮತ್ತು ರಥೋತ್ಸವ ನಡಯುತ್ತವೆ. ಶ್ರಾವಣ ಮಾಸದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುವವರ ಸಂಖ್ಯೆ ಹತ್ತು ಪಟ್ಟು ಹೆಚ್ಚಾಗುತ್ತದೆ. ಪಕ್ಕದ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳಗಳಿಂದಲೂ ಭಕ್ತರು ರಾಶಿರಾಶಿಯಾಗಿ ಬರುತ್ತಾರೆ.
ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಭಕ್ತರು ಮುಡಿ ಸಮರ್ಪಿಸುವ ಹಾಗೆ ಇಲ್ಲೂ ಅದನ್ನು ಮಾಡಲಾಗುತ್ತದೆ.
ಇದನ್ನೂ ಓದಿ: Viral Video: ಮನುಷ್ಯರಂತೇ ಕುಳಿತು ಬಟ್ಟೆ ಒಗೆಯುವ ಈ ಚಿಂಪಾಜಿಯ ವಿಡಿಯೋವನ್ನೊಮ್ಮೆ ನೀವು ನೋಡಲೇಬೇಕು!