ಅರುಣಾಚಲ ಪ್ರದೇಶದ ಗಡಿಭಾಗದಲ್ಲಿ ಅತಿಕ್ರಮಿಸಿದ್ದ ಚೀನೀ ಸೈನಿಕರನ್ನು ಹಿಮ್ಮೆಟ್ಟಿಸಿದ ಭಾರತೀಯರು!

ಅರುಣಾಚಲ ಪ್ರದೇಶದ ಗಡಿಭಾಗದಲ್ಲಿ ಅತಿಕ್ರಮಿಸಿದ್ದ ಚೀನೀ ಸೈನಿಕರನ್ನು ಹಿಮ್ಮೆಟ್ಟಿಸಿದ ಭಾರತೀಯರು!

TV9 Web
| Updated By: shruti hegde

Updated on: Oct 10, 2021 | 11:24 AM

ನಾವು ಗಮನಿಸಬೇಕಾದ ಮತ್ತು ಗರ್ವಪಡಬೇಕಾದ ಅಂಶವೇನೆಂದರೆ, ಪ್ರತಿಬಾರಿ ಚೀನೀ ಸೈನಿಕರು ಅತಿಕ್ರಮಣ ನಡೆಸಿದಾಗ ನಮ್ಮ ಯೋಧರು ‘ಮೂ ತೋಡ್ ಜವಾಬ್’ ನೀಡಿ ಅವರನ್ನು ಹಿಮ್ಮೆಟ್ಟಿಸಿದ್ದಾರೆ.

ಭಾರತ ಮತ್ತು ಚೀನಾ ನಡುವಿನ ಗಡಿ ಪ್ರದೇಶದಲ್ಲಿ ತಂಟೆಕೋರ ಚೀನಾ ಮತ್ತೇ ತಗಾದೆ ಆರಂಭಿಸಿದೆ. ಕಳೆದ ವಾರ ಚೀನಾದ ಸೈನಿಕರು ಅರುಣಾಚಲ ಪ್ರದೇಶದಲ್ಲಿನ ಗಡಿಭಾಗವನ್ನು (ಲೈನ್ ಆಫ್ ಆಕ್ಚುಯಲ್ ಕಂಟ್ರೋಲ್) ಅತಿಕ್ರಮಿಸಿ ಭಾರತದೊಳಗೆ ಬಂದುಬಿಟ್ಟಿದ್ದರು. ಪೂರ್ವ ಲಡಾಕ್ ಪ್ರಾಂತ್ಯದಲ್ಲಿ ಚೀನಾದ ಸೈನಿಕರು ಭಾರತದೊಳಗೆ ಬಂದ ನಂತರ ವಿಷಯಕ್ಕೆ ಸಂಬಂಧಿಸಿದಂತೆ ಎರಡು ರಾಷ್ಟ್ರಗಳ ನಡುವೆ ಮಾತುಕತೆ ನಡೆಯುತ್ತಿರುವಾಗಲೇ ಅರುಣಾಚಲದಲ್ಲಿ ಡ್ರ್ಯಾಗನ್ ದೇಶದ ಸೈನಿಕರು ಅತಿರೇಕತನವನ್ನು ಪ್ರದರ್ಶಿಸಿದ್ದಾರೆ. ಈ ವಿಷಯ ನಿಮಗೆ ಗೊತ್ತಿರಬಹುದು. ಅರುಣಾಚಲ ಪ್ರದೇಶವನ್ನು ಚೀನಾ ಟಿಬೆಟ್ ನ ದಕ್ಷಿಣ ಭಾಗವೆಂದು ಪರಿಗಣಿಸುತ್ತದೆ.

ಚೀನಿ ಸೈನಿಕರ ಅತಿಕ್ರಮಣವನ್ನು ಭಾರತದ ಸೈನಿಕರು ಬಲವಾಗಿ ಪ್ರತಿರೋಧಿಸಿದ್ದಾರೆ. ಗಡಿಭಾಗದಲ್ಲಿ ವಾಸವಾಗಿರುವ ಜನರು ನೀಡಿರುವ ಮಾಹಿತಿ ಪ್ರಕಾರ ಎರಡೂ ಪಕ್ಷಗಳ ಸ್ಥಳೀಯ ಮಿಲಿಟರಿ ಕಮಾಂಡರ್ಗಳ ನಡುವೆ ಮಾತುಕತೆ ನಡೆದ ಬಳಿಕ ವಿಷಯ ಇತ್ಯರ್ಥಗೊಂಡಿದೆ. ಭಾರತೀಯ ಸೈನಿಕರು ಚೀನೀ ಸೈನಿಕರನ್ನು ಕೂಡಿ ಹಾಕಿದ್ದರೆಂಬ ವದಂತಿಯನ್ನು ಗಡಿಭಾಗದ ಜನ ಅಲ್ಲಗಳೆದಿದ್ದಾರೆ.

ಅರುಣಾಚಲದಲ್ಲಿರುವ ಇಂಡೋ-ಚೀನಾ ಗಡಿಭಾಗವನ್ನು ಅಧಿಕೃತವಾಗಿ ಮಾರ್ಕ್ ಮಾಡದ ಕಾರಣ ಚೀನಾದಿಂದ ಪದೇಪದೆ ಗಡಿ ಉಲ್ಲಂಘನೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.

ಆದರೆ ಇಲ್ಲಿ ನಾವು ಗಮನಿಸಬೇಕಾದ ಮತ್ತು ಗರ್ವಪಡಬೇಕಾದ ಅಂಶವೇನೆಂದರೆ, ಪ್ರತಿಬಾರಿ ಚೀನೀ ಸೈನಿಕರು ಅತಿಕ್ರಮಣ ನಡೆಸಿದಾಗ ನಮ್ಮ ಯೋಧರು ‘ಮೂ ತೋಡ್ ಜವಾಬ್’ ನೀಡಿ ಅವರನ್ನು ಹಿಮ್ಮೆಟ್ಟಿಸಿದ್ದಾರೆ. 2020 ಮೇ 5, 10 ಮತ್ತು 11 ರಂದು ಚೀನೀಗಳು ಲಡಾಖ್ನ ಪ್ಯಾಂಗಾಂಗ ಸರೋವರದವರೆಗೆ ನುಸುಳಿದ್ದರು. ಭಾರತ ಅಲ್ಲಿ ತನ್ನ ಸೈನಿಕರ ಬಲ ಹೆಚ್ಚಿಸಿ, ಚೀನಾದ ಮೇಲೆ ರಾಜಕಿಯ ಒತ್ತಡ ಹೇರಿ ಅವರನ್ನು ಹಿಮ್ಮೆಟ್ಟಿಸಿತ್ತು.

ಅದೇ ವರ್ಷ ಮತ್ತು ಅದೇ ತಿಂಗಳ 10 ರಂದು ಸಿಕ್ಕಿಂನ ನಕುಲಾ ಬಳಿ ಉಭಯ ರಾಷ್ಟ್ರಗಳ ಸೈನಿಕರ ನಡುವೆ ಸಂಘರ್ಷ ನಡೆದು ಕಲ್ಲು ತೂರಾಟದಲ್ಲಿ ಎರಡೂ ಪಕ್ಷಗಳ ಸೈನಿಕರು ಗಾಯಗೊಂಡಿದ್ದರು. ಮೇ 21, 2020 ರಲ್ಲಿ ಗಲ್ವಾನ್ ಕಣಿವೆಯಲ್ಲಿ ಹೊಡೆದಾಟ ಬಡಿದಾಟ ನಡೆದಾಗ ಭಾರತದ 20 ಸೈನಿಕರು ಹುತಾತ್ಮರಾದರೆ, ಚೀನಾದ 43 ಸೈನಿಕರು ಮರಣವನ್ನಪ್ಪಿದ್ದರು.

ಇದೇ ವರ್ಷ ಆಗಸ್ಟ್ 29 ಮತ್ತು 30 ರಂದು ಚಸುಲಾ ಸೆಕ್ಟರ್ನಲ್ಲಿ ಚೀನೀ ಸೈನಿಕರ ಓಡಾಟವನ್ನು ಭಾರತ ಸೆರೆಹಿಡಿದು ಬೀಜಿಂಗ್ಗೆ ಕಳುಸಿತ್ತು.

ಇದನ್ನೂ ಓದಿ: ಅಬ್ಬಬ್ಬಾ! ದೊಡ್ಡ ಗಾತ್ರದ ಹಾವಿನ ಬಾಲ ಹಿಡಿದು ಎಳೆದಾಡುವ ಎರಡು ವರ್ಷದ ಮಗುವಿನ ವಿಡಿಯೋ ನೋಡಿ