Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಬ್ಬಬ್ಬಾ! ದೊಡ್ಡ ಗಾತ್ರದ ಹಾವಿನ ಬಾಲ ಹಿಡಿದು ಎಳೆದಾಡುವ ಎರಡು ವರ್ಷದ ಮಗುವಿನ ವಿಡಿಯೋ ನೋಡಿ

ಮ್ಯಾಟ್ ರೈಟ್ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಅಂಬೆಗಾಲಿಡುವ ಮಗ ಸ್ವಲ್ಪವೂ ಭಯವಿಲ್ಲದೆ ದೊಡ್ಡ ಗಾತ್ರದ ಹಾವಿನ ಬಾಲವನ್ನು ಹಿಡಿದು ಎಳೆದಾಡುತ್ತಾನೆ.

ಅಬ್ಬಬ್ಬಾ! ದೊಡ್ಡ ಗಾತ್ರದ ಹಾವಿನ ಬಾಲ ಹಿಡಿದು ಎಳೆದಾಡುವ ಎರಡು ವರ್ಷದ ಮಗುವಿನ ವಿಡಿಯೋ ನೋಡಿ
ಹಾವನ್ನು ಎಳೆಯುತ್ತಿರುವ ಮಗು
Follow us
TV9 Web
| Updated By: ಮದನ್​ ಕುಮಾರ್​

Updated on: Oct 09, 2021 | 10:57 AM

ಸುಮಾರು 20 ವರ್ಷಗಳಿಂದ ಮೊಸಳೆಯನ್ನು ಹಿಡಿದು ಬೇರೆ ಕಡೆ ಸ್ಥಳಾಂತರ ಮಾಡುತ್ತಿರುವ ಆಸ್ಟ್ರೇಲಿಯಾದ ಮ್ಯಾಟ್ ರೈಟ್, ತನ್ನ ಎರಡು ವರ್ಷದ ಮಗುವಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ತನ್ನ ಎರಡು ವರ್ಷದ ಮಗ ದೊಡ್ಡ ಗಾತ್ರದ ಹಾವನ್ನು ಸೆರೆ ಹಿಡಿಯಲು ಸಹಾಯ ಮಾಡುತ್ತಾನೆ. ಹಾವನ್ನು ಹಿಡಿಯಲು ಮಗ ಸಹಾಯ ಮಾಡಿದ ವಿಡಿಯೋವನ್ನು ಮ್ಯಾಟ್ ರೈಟ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಚರ್ಚೆಯನ್ನು ಹುಟ್ಟುಹಾಕಿದೆ.

ಮ್ಯಾಟ್ ರೈಟ್ ಇನ್ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಅಂಬೆಗಾಲಿಡುವ ಮಗ ಸ್ವಲ್ಪವೂ ಭಯವಿಲ್ಲದೆ ದೊಡ್ಡ ಗಾತ್ರದ ಹಾವಿನ ಬಾಲವನ್ನು ಹಿಡಿದು ಎಳೆದಾಡುತ್ತಾನೆ. ಕೈಗಳಿಂದ ಹಾವಿನ ಬಾಲವನ್ನು ಹಿಡಿದು ತೋಟದ ಹೊರಗೆ ಎಳೆಯುತ್ತಾನೆ. ತನ್ನ ಮಗನಿಗೆ ಮ್ಯಾಟ್ ಹಾವನ್ನು ಎಳೆದು ಹೊರಗೆ ಹಾಕಲು ಕೆಲ ಸೂಚನೆಗಳನ್ನು ನೀಡುತ್ತಾರೆ. ಇದು ಅವರು ಹಂಚಿಕೊಂಡ ವಿಡಿಯೋದಲ್ಲಿ ತಿಳಿದುಬಂದಿದೆ.

ಜಾಗೃತಿಯಿಂದ ಹಾವನ್ನು ಹೊರಗೆ ಎಳೆಯಬೇಕು. ಬಾಲವನ್ನು ಹಿಡಿದು ಎಳೆಯಬೇಕು. ಇಲ್ಲದಿದ್ದರೆ ಹಾವು ನಿನಗೆ ಕುಚ್ಚುತ್ತದೆ ಅಂತ ಮ್ಯಾಟ್ ಎರಡು ತನ್ನ ವರ್ಷದ ಮಗನಿಗೆ ತಿಳಿಸುತ್ತಾರೆ. ಸದ್ಯ ಈ ವಿಡಿಯೋ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗುತ್ತಿದೆ. ವಿಡಿಯೋವನ್ನು ವೀಕ್ಷಿಸಿದವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿದ್ದಾರೆ. ಕೆಲವರು ವಿಡಿಯೋವನ್ನು ನೋಡಿ ಬೆಂಬಲಿಸಿದ್ದಾರೆ. ಇನ್ನು ಕೆಲವರು ಪುಟ್ಟ ಹುಡುಗನನ್ನು ಈ ಕೃತ್ಯದಲ್ಲಿ ತೊಡಗಿಸಿದ್ದಕ್ಕಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ

Viral Video: ಕತ್ತೆಯನ್ನು ಅಪ್ಪಿಕೊಂಡು ಲಾಲಿ ಹಾಡಿ ಮಲಗಿಸಿದ ವ್ಯಕ್ತಿ; ಹೃದಯಸ್ಪರ್ಶಿ ಈ ವಿಡಿಯೋವನ್ನು ನೋಡಿದ್ದೀರಾ?

Viral Video: ನವರಾತ್ರಿ ಪ್ರಯಕ್ತ ಶಂಕರ್ ಮಹದೇವನ್ ಹಾಡಿಗೆ ಡ್ಯಾನ್ಸ್​ ಮಾಡಿದ ಸಿಎಂ ಭೂಪೇಶ್ ಬಘೇಲ್; ವಿಡಿಯೋ ಇಲ್ಲಿದೆ