Viral Video: ನವರಾತ್ರಿ ಪ್ರಯಕ್ತ ಶಂಕರ್ ಮಹದೇವನ್ ಹಾಡಿಗೆ ಡ್ಯಾನ್ಸ್​ ಮಾಡಿದ ಸಿಎಂ ಭೂಪೇಶ್ ಬಘೇಲ್; ವಿಡಿಯೋ ಇಲ್ಲಿದೆ

CM Bhupesh Baghel Dance: ನವರಾತ್ರಿ ಪ್ರಯುಕ್ತ ದೇವಸ್ಥಾನದಲ್ಲಿ ಶಂಕರ್ ಮಹದೇವನ್ ಅವರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಂಕರ್ ಮಹದೇವನ್ ಹಾಡುತ್ತಿದ್ದ ಹಾಡಿಗೆ ಸಿಎಂ ಭೂಪೇಶ್ ಬಘೇಲ್ ಕೂಡ ಹೆಜ್ಜೆ ಹಾಕಿದ್ದಾರೆ.

Viral Video: ನವರಾತ್ರಿ ಪ್ರಯಕ್ತ ಶಂಕರ್ ಮಹದೇವನ್ ಹಾಡಿಗೆ ಡ್ಯಾನ್ಸ್​ ಮಾಡಿದ ಸಿಎಂ ಭೂಪೇಶ್ ಬಘೇಲ್; ವಿಡಿಯೋ ಇಲ್ಲಿದೆ
ಸಿಎಂ ಭೂಪೇಶ್ ಬಘೇಲ್ ನೃತ್ಯ

ನವದೆಹಲಿ: ನವರಾತ್ರಿಯ 2ನೇ ದಿನವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೆಹಲಿಯ ಜಾಂಡೇವಾಲನ್ ದೇವಸ್ಥಾನದಲ್ಲಿ ಇಂದು ಮುಂಜಾನೆ ದಸರಾ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಗಿದೆ. ದೇಶದ ಜನರೆಲ್ಲರಿಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ನವರಾತ್ರಿಯ ಶುಭ ಕೋರಿದ್ದಾರೆ. ಇದರ ಜೊತೆಗೆ ಛತ್ತೀಸ್​ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ನಿನ್ನೆ ಮಾತಾ ಕೌಸಲ್ಯ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೃತ್ಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಬ್ರಹ್ಮಚಾರಿಣಿ ದೇವಿಯ ದಿನವಾದ ನವರಾತ್ರಿಯ ಎರಡನೇ ದಿನದಂದು ಪಾರ್ವತಿ ದೇವಿಯ ರೂಪವಾದ ಬ್ರಹ್ಮಚಾರಿಣಿಯನ್ನು ಪೂಜಿಸಲಾಗುತ್ತದೆ. ನಿನ್ನೆ ರಾತ್ರಿ ಚಾಂದ್​ಕುರಾಯ್​ನಲ್ಲಿರುವ ಮಾತಾ ಕೌಸಲ್ಯ ದೇವಸ್ಥಾನದಲ್ಲಿ ತಮ್ಮ ಪಕ್ಷದ ನಾಯಕರ ಜೊತೆ ಛತ್ತೀಸ್​ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ನವರಾತ್ರಿ ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಅಲ್ಲಿ ಹಾಕಲಾಗಿದ್ದ ಶಂಕರ್ ಮಹದೇವನ್ ಅವರ ಹಾಡಿಗೆ ಸಿಎಂ ಬಘೇಲ್ ಕೂಡ ಹೆಜ್ಜೆ ಹಾಕಿದ್ದಾರೆ. ಅವರ ಜೊತೆಗೆ ಪಕ್ಷದ ನಾಯಕರು ಕೂಡ ಡ್ಯಾನ್ಸ್ ಮಾಡಿದ್ದಾರೆ. ನವರಾತ್ರಿ ಪ್ರಯುಕ್ತ ದೇವಸ್ಥಾನದಲ್ಲಿ ಶಂಕರ್ ಮಹದೇವನ್ ಅವರ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಂಕರ್ ಮಹದೇವನ್ ಹಾಡುತ್ತಿದ್ದ ರಾಮನ ಭಜನೆಗೆ ಸಿಎಂ ಭೂಪೇಶ್ ಬಘೇಲ್ ಕೂಡ ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ: Viral Video: ಉಕ್ಕಿ ಹರಿಯುತ್ತಿದ್ದ ಕಾಲುವೆಗೆ ಧುಮುಕಿ ತಾಯಿ-ಮಗುವನ್ನು ಕಾಪಾಡಿದ ಪೊಲೀಸ್; ವಿಡಿಯೋ ವೈರಲ್

75th Independence Day ನಾಲ್ಕು ಹೊಸ ಜಿಲ್ಲೆ, 29 ತಾಲ್ಲೂಕು ಘೋಷಿಸಿದ ಛತ್ತೀಸ್​ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್

Read Full Article

Click on your DTH Provider to Add TV9 Kannada