ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ನೂತನ ಸಿಗಂದೂರು ಸೇತುವೆ ನಿನ್ನೆ ಲೋಕಾರ್ಪಣೆ ಆಗಿದೆ. ಇಂದಿನಿಂದ ಸೇತುವೆ ಮೇಲೆ ವಾಹನಗಳ ಸಂಚಾರ ಶುರುವಾಗಿದ್ದು, ವಾಹನ ಸವಾರರಿಗೆ ಎಲ್ಲಿಲ್ಲದ ಖುಷಿ ಸಂತೋಷ. ದೇವಿಯ ದರ್ಶನ ಪಡೆಯಲು ಭಕ್ತರು ಹೊರ ಜಿಲ್ಲೆಗಳಿಂದ ಎಂಟ್ರಿಕೊಟ್ಟಿದ್ದರು. ಮತ್ತೊಂದೆಡೆ ಇಂದಿನಿಂದ ಲಾಂಚ್ ಮತ್ತು ಜೀಪ್ ಗಳ ಸಂಚಾರ ಸ್ತಬ್ಧವಾಗಿದೆ.ಒಂದಡೆ ಖುಷಿ ಮತ್ತೊಂದೆಡೆ ಚಿಂತೆ.
ಶಿವಮೊಗ್ಗ, (ಜುಲೈ 16): ನಿನ್ನೆ ಅಷ್ಟೇ ಸಂಭ್ರಮ ಸಡಗರಿಂದ ಸಿಗಂದೂರು ನೂತನ ಸೇತುವೆ ಉದ್ಘಾಟನೆಯಾಗಿದೆ. 473 ಕೋಟಿ ರೂ. ವೆಚ್ಚದಲ್ಲಿ ಈ ನೂತನ ತೂಗು ಸೇತುವೆ ನಿರ್ಮಾಣವಾಗಿದ್ದು, ಅಂಬಾರಗೋಡ್ಲು-ಕಳಸವಳ್ಳಿ ಸೇತುವೆ ಮೇಲೆ ಇಂದಿನಿಂದ ವಾಹನಗಳ ಸಂಚಾರ ಶುರುವಾಗಿದೆ. ಮೊದಲ ದಿನವೇ ಪ್ರವಾಸಿಗರು ಸೇತುವೆ ಮೇಲೆ ಸಂಚಾರಕ್ಕೆ ಮುಗಿಬಿದ್ದಿದ್ದರು. ಎಲ್ಲರೂ ಸೇತುವೆ ನೋಡಿ ಎಂಜಾಯ್ ಮಾಡಿದ್ದು, ಜೊತೆ ಸೇತುವೇ ಮಧ್ಯ ನಿಂತುಕೊಂಡು ಫೋಟೋ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡಿದ್ದಾರೆ. ಶರಾವತಿ ನದಿ ನೀರಿನ ನಡುವೆ ಸೇತುವೆ ಮೇಲೆ ಸಂಚರಿಸುವುದು, ಸೇತುವೇ ಮೇಲಿಂದ ನದಿಯನ್ನು ನೋಡುವುದೇ ಏನೋ ಒಂಥರಾ ಉಲ್ಲಾಸ ಎಂದು ಪ್ರವಾಸಿಗರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಸೇತುವೆ ಮೇಲೆ ಸಂಚಾರದಿಂದ ಇನ್ನೂ ಎಲ್ಲ ವಾಹನಗಳು ನೇರವಾಗಿ ಸಿಗಂದೂರು ದೇವಿ ದರ್ಶನ ಪಡೆಯುತ್ತಿದ್ದಾರೆ. ಇದರಿಂದ ದಶಕಗಳಿಂದ ಕರೂರು ಮತ್ತು ಬಾರಂಗಿ ಹೋಬಳಿಯ 40ಕ್ಕೂ ಹೆಚ್ಚು ಹಳ್ಳಿಗಳ ಮತ್ತು ಪ್ರವಾಸಿಗರನ್ನು ದೇವಿಯ ದರ್ಶನಕ್ಕೆ ಸಂರ್ಪಕ ಕೊಂಡಿಯಾಗಿದ್ದ ಮೂರು ಲಾಂಚ್ ಗಳ ಸೇವೆ ಸ್ಥಗಿತಗೊಂಡಿವೆ. ಸದಾ ಜನರಿಂದ ತುಂಬಿ ತುಳುಕುತ್ತಿದ್ದ ಈ ಮೂರೂ ಲಾಂಚ್ ಗಳು ಅನಾಥವಾಗಿ ಅಂಬಾರಗೋಡ್ಲು ಹೊಳೆಬಾಗಿಲಿ ಶರಾವತಿಯ ಹಿನ್ನೀರಿನಲ್ಲಿ ನಿಂತುಕೊಂಡಿವೆ. ಇದರೊಂದಿಗೆ ಲಾಂಚ್ ಗಳು ಇನ್ನೂ ಇತಿಹಾಸ ಪುಟ ಸೇರುವುದು ಗ್ಯಾರಂಟಿಯಾಗಿದೆ.
ಮತ್ತೊಂದೆಡ ಕಳಸವಳ್ಳಿ ಹೊಳೆಬಾಗಿಲಿನಿಂದ ದಶಕಗಳಿಂದ ಸಿಗಂದೂರು ದೇವಿಯಸ ಸನ್ನಿಧಾನಕ್ಕೆ ಭಕ್ತರನ್ನು ಕರೆದುಕೊಂಡು ಹೋಗುತ್ತಿದ್ದ ಜೀಪ್ ಗಳ ಸೇವೆ ಇಂದಿನಿಂದ ಸ್ಥಿಗತವಾಗಿದೆ. ಲಾಂಚ್ ಗಳಿಗೆ ಪೂರಕವಾಗಿ ಈ ಭಾಗಿದಿಂದ 40ಕ್ಕೂ ಅಧಿಕ ಜೀಪ್ ಗಳು ಸಂಚರಿಸುತ್ತಿದ್ದವು. ದೇವಿ ದರ್ಶನಕ್ಕೆ ಮತ್ತು ಅಲ್ಲಿಂದ ವಾಪಸ್ ಕಳವಸಳ್ಳಿ ಲಾಂಚ್ ಗೆ ಭಕ್ತರ ಸಂಚಾರಕ್ಕೆ ಕೊಂಡಿಯಾಗಿದ್ದ ಈ ಜೀಪ್ ಗಳ ಸೇವೆ. ಇದರಿಂದ 40ಕ್ಕೂ ಅಧಿಕ ಚಾಲಕರು ನಿರುದ್ಯೋಗಿಗಳಾಗಿದ್ದಾರೆ. ಇನ್ನು ಈ ಚಾಲಕರನ್ನೇ ನಂಬಿದ 40 ಕುಟುಂಬಗಳು ಈಗ ಅತಂತ್ರವಾಗಿವೆ. ತಮ್ಮ ಮುಂದಿನ ಬದುಕಿಗೆ ಸರಕಾರ ಏನಾದ್ರೂ ಸಹಾಯ ಮಾಡಬೇಕು. ಪರ್ಯಾಯವಾಗಿ ಈ ಚಾಲಕರನ್ನು ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.