Hubballi News: ಬಾಲಕಿ ಮೇಲೆ ಶ್ವಾನಗಳ ಡೆಡ್ಲಿ ಅಟ್ಯಾಕ್: ಎದೆ ಝಲ್ ಎನ್ನುವ ದೃಶ್ಯ ಸೆರೆ
ಹುಬ್ಬಳ್ಳಿಯಲ್ಲಿ ಜನರು ಇದೀಗ ಮನೆಯಿಂದ ಹೊರಹೋಗಲು ಭಯ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಜನರ ಭಯಕ್ಕೆ ಕಾರಣ, ರೌಡಿಗಳು, ಕಳ್ಳರ ಕಾಟದ ಭಯವಲ್ಲಾ, ಬದಲಾಗಿ ಬೀದಿ ನಾಯಿಗಳ ಕಾಟ. ಹೌದು ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಿಕ್ಕಸಿಕ್ಕವರ ಮೇಲೆ ಅಟ್ಯಾಕ್ ಮಾಡ್ತಿವೆ. ಬಾಲಕಿಯೋರ್ವಳ ಮೇಲೆ ಅಟ್ಯಾಕ್ ಮಾಡಿರುವ ಬೀದಿ ನಾಯಿಗಳ ದೃಶ್ಯ ಇದೀಗ ಪುಲ್ ವೈರಲ್ ಆಗಿದೆ.
ಹುಬ್ಬಳ್ಳಿ, ಜುಲೈ 17: ತನ್ನ ಪಾಡಿಗೆ ತಾನೂ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಮೇಲೆ ಎರಡು ಬೀದಿನಾಯಿಗಳು ಹೇಗೆ ಮುಗಿ ಬೀಳುತ್ತವೆ ನೋಡಿ. ಏಕಾಏಕಿ ಬಾಲಕಿ ಮೇಲೆ ಎರಗಿದ ನಾಳಿಗಳು ಬಟ್ಟೆಯನ್ನ ಕಚ್ಚಿ ಎಳೆದೊಯ್ದಿದೆ. ಕೈ, ಕಾಲು ಅಂತಾ ದೇಹದ ನಾಲ್ಕೈದು ಕಡೆ ಕಚ್ಚಿ ಗಾಯಗೊಳಿಸಿವೆ. ಹುಬ್ಬಳ್ಳಿಯ (Hubballi) ಸಿಮ್ಲಾ ನಗರದಲ್ಲಿ ಘಟನೆ ನಡೆದಿದೆ. ನಾಯಿಗಳು ಡೆಡ್ಲಿ ಅಟ್ಯಾಕ್ ಹೇಗಿದೆ ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Jul 17, 2025 07:49 AM
Latest Videos
