AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದಿನಾಯಿಗಳಿಗೆ ಚಿಕನ್ ರೈಸ್ ಭಾಗ್ಯ: ಭಾರೀ ಟೀಕೆ ವ್ಯಕ್ತವಾಗುತ್ತಿದ್ದಂತೆಯೇ ಬಿಬಿಎಂಪಿ ಸ್ಪಷ್ಟನೆ

ಬಿಬಿಎಂಪಿಯಿಂದ ಬೀದಿ ನಾಯಿಗಳಿಗೆ ಚಿಕನ್ ರೈಸ್ ನೀಡುವ ಯೋಜನೆ ಜಾರಿಗೊಳಿಸಲಾಗುತ್ತಿದೆ. ಇದರ ಬಗ್ಗೆ ಈಗ ಪರ- ವಿರೋಧ ಚರ್ಚೆ ನಡೆಯುತ್ತಿದೆ. ಪ್ರಾಣಿ ಪ್ರಿಯರು ಬೀದಿನಾಯಿಗಳಿಗೆ ಚಿಕನ್ ರೈಸ್ ನೀಡುವುದಕ್ಕೆ ಬೆಂಬಲ ಸೂಚಿಸಿದರೇ, ಮತ್ತೆ ಕೆಲವರು ತೀವ್ರವಾಗಿ ವಿರೋಧಿಸಿದ್ದಾರೆ. ಇನ್ನು ಬೀದಿ ನಾಯಿಗಳಿಗೆ ಪಾಲಿಕೆಯಿಂದ ಚಿಕನ್‌ ರೈಸ್‌ ಭಾಗ್ಯ ವಿಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆಗಳು ವ್ಯಕ್ತವಾಗುತ್ತಿದ್ದಂತೆಯೇ ಬಿಬಿಎಂಪಿ ಇದೀಗ ಸ್ಪಷ್ಟನೆ ನೀಡಿದೆ.

ಬೀದಿನಾಯಿಗಳಿಗೆ ಚಿಕನ್ ರೈಸ್ ಭಾಗ್ಯ: ಭಾರೀ ಟೀಕೆ ವ್ಯಕ್ತವಾಗುತ್ತಿದ್ದಂತೆಯೇ ಬಿಬಿಎಂಪಿ ಸ್ಪಷ್ಟನೆ
Stray Dogs
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on: Jul 13, 2025 | 5:23 PM

Share

ಬೆಂಗಳೂರು, (ಜುಲೈ 13): ಬೀದಿ ನಾಯಿಗಳಿಗೆ (Stray Dogs) ವಿಶೇಷವಾಗಿ ತಯಾರಿಸಿದ ಭಕ್ಷ್ಯನೀಡುತ್ತಿಲ್ಲ, ಮಾನವ ಗುಣಮಟ್ಟದ ಆಹಾರವನ್ನು ಬೀದಿ ನಾಯಿಗಳಿಗೆ ನೀಡುವುದಿಲ್ಲ, ನಾಯಿ ದರ್ಜೆಯ ಆಹಾರ ನೀಡಲಾಗುವುದು, ಟೆಂಡರ್‌ನಲ್ಲಿ ಊಟದ ಪದಾರ್ಥಗಳ ನಮೂದಿಸಿದ್ದು, ಬಿಟ್ಟರೆ ವಿತರಿಸುವ ಆಹಾರಕ್ಕೆ ಹೆಸರಿಟ್ಟಿಲ್ಲ ಎಂದು ಬಿಬಿಎಂಪಿ (BBMP) ಅಧಿಕೃತವಾಗಿ ಸ್ಪಷ್ಟಿಕರಣ ನೀಡಿದೆ.

ಬೀದಿನಾಯಿಗಳಿಗೆ ಚಿಕನ್ ರೈಸ್ (Chicken Rice) ಭಾಗ್ಯದ ಕುರಿತು ಅನಿಮಲ್ ಹಸ್ಬೆಂಡ್ರಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಬಿಬಿಎಂಪಿ ಪ್ರಕಟಣೆ ಹೊರಡಿಸಿದೆ. ಈ ಊಟಕ್ಕೆ ಹೆಸರಿಲ್ಲ. ಮಾನವ ಗುಣಮಟ್ಟದ ಆಹಾರವನ್ನು ಬೀದಿ ನಾಯಿಗಳಿಗೆ ನೀಡುವುದಿಲ್ಲ. ನಾಯಿ ದರ್ಜೆಯ ಆಹಾರ ನೀಡಲಾಗುವುದು. ಟೆಂಡರ್‌ನಲ್ಲಿ ಊಟದ ಪದಾರ್ಥಗಳನ್ನು ನಮೂದಿಸಿದ್ದು ಬಿಟ್ಟರೇ ವಿತರಿಸುವ ಆಹಾರಕ್ಕೆ ಹೆಸರಿಟ್ಟಿಲ್ಲ ಎಂದು ಬಿಬಿಎಂಪಿ ತಿಳಿಸಿದೆ.

ಇದನ್ನೂ ಓದಿ: ಬೀದಿ ನಾಯಿಗಳಿಗೆ ಬಿಬಿಎಂಪಿ ಬಾಡೂಟ: ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ

ಬೀದಿ ನಾಯಿಗಳಿಗೆ ಪಾಲಿಕೆಯಿಂದ ಚಿಕನ್‌ ರೈಸ್‌ ಭಾಗ್ಯ’ ಕುರಿತು ಮೊದಲ ಬಾರಿಗೆ ಬಿಬಿಎಂಪಿಯ ಪಶುಪಾಲನೆ ವಿಭಾಗದ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ಕೋಳಿ ಮಾಂಸದ ತ್ಯಾಜ್ಯವನ್ನು ಬಳಸಿ ಆಹಾರ ಸಿದ್ಧಪಡಿಸಿ ಬೀದಿ ನಾಯಿಗಳಿಗೆ ನೀಡಲಾಗುವುದು. ಅದಕ್ಕಾಗಿ ಕೋಳಿಯನ್ನು ಕೊಂದು ಹಾಕುವುದಿಲ್ಲ.

ಟೆಂಡರ್‌ನಲ್ಲಿ ಬೀದಿ ನಾಯಿಗಳಿಗೆ ತಯಾರಿಸುವ ಆಹಾರದ ಪದಾರ್ಥವನ್ನು ಮಾತ್ರ ನಮೂದಿಸಲಾಗಿತ್ತು. ಚಿಕನ್‌ ರೈಸ್‌, ಚಿಕನ್‌ ಬಿರಿಯಾನಿ ಎಂದು ನಮೂದಿಸಿಲ್ಲ. ಸಸ್ಯಾಹಾರವನ್ನು ಬೀದಿ ನಾಯಿಗಳು ತಿನ್ನುವುದಿಲ್ಲ. ಹಾಗಾಗಿ, ಮಾಂಸಾಹಾರ ನೀಡಲಾಗುತ್ತಿದೆ.

ಇದನ್ನೂ ಓದಿ: ಜನರಿಗೆ ಇಂದಿರಾ ಕ್ಯಾಂಟೀನ್, ಬೀದಿ ನಾಯಿಗಳಿಗೆ ಬಾಡೂಟ! ಬಿಬಿಎಂಪಿ ಹೊಸ ಯೋಜನೆ

ಗರದ ಕೆಲವು ಕಡೆ ಬೀದಿ ನಾಯಿಗಳ ಹಿಡಿದು ಸಂತಾನಹರಣ ಶಸ್ತ್ರ ಚಿಕಿತ್ಸೆ (ಎಬಿಸಿ) ಹಾಗೂ ಆ್ಯಂಟಿರೇಬಿಸ್ ಲಸಿಕೆ(ಎಆರ್‌ವಿ) ಹಾಕುವುದು ಕಷ್ಟವಾಗಿದೆ. ಆಹಾರ ವಿತರಣೆಯಿಂದ ಆ ನಾಯಿಗಳ ಹಿಡಿದು ಎಬಿಸಿ ಹಾಗೂ ಎಆರ್‌ವಿಗೆ ಸಹಕಾರಿಯಾಗಲಿದೆ. ಬೀದಿ ನಾಯಿಗಳ ಆಹಾರ ದೊರೆಯುವುದರಿಂದ ನಾಯಿಗಳ ಆಕ್ರಮಣಶೀಲತೆ ಕಡಿಮೆಯಾಗಲಿದೆ. ಸಾರ್ವಜನಿಕರಿಗೆ ಹತ್ತಿರವಾಗಲಿವೆ. ಬೀದಿ ನಾಯಿ ನಿಯಂತ್ರಣ ಕಾರ್ಯಕ್ರಮಕ್ಕೆ ಸಹಕಾರಿಯಾಗಲಿದೆ. ಅಗತ್ಯವಿರುವ ಕಡೆ ಮಾತ್ರ ಆಹಾರ ವಿತರಣೆ ಮಾಡಲಾಗುವುದು.

ಪ್ರತಿ ಒಂದು ನಾಯಿಗೆ ದಿನದ ಆಹಾರಕ್ಕೆ 11 ರು. ವೆಚ್ಚ ಮಾಡಲಾಗುತ್ತಿದೆ. ಆಹಾರ ಸಾಗಾಣಿಕೆ ವೆಚ್ಚ, ಸ್ವಚ್ಛತೆ, ಜಿಎಸ್‌ಟಿ ಸೇರಿದಂತೆ ಒಟ್ಟು ವೆಚ್ಚ 22.42 ರು. ಆಗಲಿದೆ. ಭಾರತ ಪ್ರಾಣಿ ಕಲ್ಯಾಣ ಮಂಡಳಿಯ ಕೈಪಿಡಿ, ಸಂಶೋಧನೆಯ ಶಿಫಾರಸ್ಸು ಆಧಾರಿಸಿ ಆಹಾರ ವಿತರಣೆ ಯೋಜನೆ ರೂಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ