AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೇ 95 ರಷ್ಟು ಮಕ್ಕಳು ದೈಹಿಕ ಚಟುವಟಿಕೆ ತರಗತಿಗೆ ಗೈರು!: ಖಾಸಗಿ ಶಾಲಾ ಒಕ್ಕೂಟ

ಬೆಂಗಳೂರಿನ ಖಾಸಗಿ ಶಾಲೆಗಳ ಸಮೀಕ್ಷೆಯ ಪ್ರಕಾರ, ಶೇಕಡಾ 95 ರಷ್ಟು ಮಕ್ಕಳು ದೈಹಿಕ ಚಟುವಟಿಕೆಗಳಲ್ಲಿ ನಿರಾಸಕ್ತಿ ತೋರುತ್ತಿದ್ದಾರೆ. ಅತಿಯಾದ ಡಿಜಿಟಲ್ ಬಳಕೆ, ಅಸಮತೋಲಿತ ಆಹಾರ ಪದ್ಧತಿ ಇದಕ್ಕೆ ಕಾರಣ. ಪೋಷಕರು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಬೇಕು ಮತ್ತು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದು ಶಾಲೆಗಳು ಮನವಿ ಮಾಡಿವೆ.

ಶೇ 95 ರಷ್ಟು ಮಕ್ಕಳು ದೈಹಿಕ ಚಟುವಟಿಕೆ ತರಗತಿಗೆ ಗೈರು!: ಖಾಸಗಿ ಶಾಲಾ ಒಕ್ಕೂಟ
ಸಾಂದರ್ಭಿಕ ಚಿತ್ರ
ವಿವೇಕ ಬಿರಾದಾರ
|

Updated on:Jul 13, 2025 | 7:52 PM

Share

ಬೆಂಗಳೂರು, ಜುಲೈ 13: ಶಾಲಾ ಮಕ್ಕಳಲ್ಲಿ (School Children) ದೈಹಿಕ ಚಟುವಟಿಕೆಗಳ ಬಗೆಗಿನ ಆಸಕ್ತಿ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿರುವ ಬಗ್ಗೆ ಖಾಸಗಿ ಶಾಲೆಗಳ ಒಕ್ಕೂಟ (Private Schools Association) ಆತಂಕ ವ್ಯಕ್ತಪಡಿಸಿದೆ. ಖಾಸಗಿ ಶಾಲಾ ಒಕ್ಕೂಟಗಳ ಅಧೀನದ ಶಾಲೆಗಳಲ್ಲಿ ನಡೆಸಿದ ಸರ್ವೆಯಲ್ಲಿ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದ್ದು, ಪೋಷಕರು ಈ ಬಗ್ಗೆ ಜಾಗರೂಕತೆ ವಹಿಸುವಂತೆ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಆಗ್ರಹ ಮಾಡಿವೆ.

ಯುವ ಜನಾಂಗಕ್ಕೆ ಹೃದಯಾಘಾತ, ಮಧುಮೇಹ, ರಕ್ತದೊತ್ತಡ ಸಂಬಂಧಿತ ಕಾಯಿಲೆಗಳು ಅಕಾಲಿಕ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತಿರುವುದು ಆಘಾತ ಮೂಡಿಸುತ್ತಿದೆ. ಇದರ ಮಧ್ಯೆ ರಾಜ್ಯದ ಖಾಸಗಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಸಂಯೋಜಿತ ಆಡಳಿತ ಮಂಡಳಿಗಳು ಸಮೀಕ್ಷೆಯೊಂದನ್ನು ನಡೆಸಿದ್ದು, ಕಳವಳಕಾರಿ ಅಂಶ ಕಂಡುಬಂದಿದೆ. ಸಮೀಕ್ಷೆಯ ಪ್ರಕಾರ ಶೇ 95 ರಷ್ಟು ಮಕ್ಕಳು ದೈಹಿಕ ಚಟುವಟಿಕೆಗಳ ಸಂಬಂಧಿತ ತರಗತಿಗಳಿಗೆ ನಿರಾಸಕ್ತಿ ತೋರಿ ಗೈರು ಹಾಜರಾಗುತ್ತಿದ್ದು, ಮನೆಯಲ್ಲೂ ಕೂಡ ದೈಹಿಕ ಚಟುವಟಿಕೆಗಳಲ್ಲಿ ಹಿಂದೆ ಉಳಿದಿದ್ದಾರೆ ಎಂದು ಸಮೀಕ್ಷಾ ವರದಿಯಲ್ಲಿದೆ.

ಸಮೀಕ್ಷೆಯ ಸಾರಾಂಶ

  • ಪೌಷ್ಟಿಕಾಂಶದ ಕೊರತೆಯಿರುವ ಆಹಾರ ಪದ್ಧತಿ, ಹೆಚ್ಚಿನ ಪ್ರಮಾಣದಲ್ಲಿ ಸಂಸ್ಕರಿಸಿದ ಮತ್ತು ಜಂಕ್ ಆಹಾರಗಳ ಸೇವನೆ
  • ಅನಿಯಂತ್ರಿತ ಡಿಜಿಟಲ್ ಬಳಕೆ
  • ಶಾಲೆ ಹಾಗೂ ಮನೆಗಳಲ್ಲಿ ಕೂಡ ದೈಹಿಕ ಚಟುವಟಿಕೆಗಳಿಗೆ ಗಮನ ಕೊಡದಿರುವುದು

ಶಾಲೆಗಳ ಮನವಿ ಏನು?

  • ಪೋಷಕರು ಜವಾಬ್ದಾರಿಯೊಂದಿಗೆ ಮಕ್ಕಳ ಚಟುವಟಿಕೆ ಮೇಲೆ ನಿಗಾ ಇಡುವುದು
  • ಜವಾಬ್ದಾರಿಯುತ ಪೋಷಕರಾಗಿ ಡಿಜಿಟಲ್ ಮತ್ತು ಆಹಾರ ಪದ್ಧತಿಗಳನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಬೇಕು
  • ಅನಾರೋಗ್ಯ ಕಾರಣ ಹೊರತುಪಡಿಸಿ, ದೈಹಿಕ ಚಟುವಟಿಕೆಗಳ ಸಂಬಂಧಿತ ತರಗತಿಗಳಿಗೆ ತಪ್ಪಿಸಬಾರದು.

ಇದನ್ನೂ ಓದಿ: ವಿದ್ಯಾರ್ಥಿ, ಪೋಷಕರು ಗಮನಕ್ಕೆ: SSLC ಪರೀಕ್ಷಾ ನಿಯಮದಲ್ಲಿ ಮಹತ್ವದ ಬದಲಾವಣೆ

ಇದನ್ನೂ ಓದಿ
Image
2026 ರಿಂದ CBSE 10 ನೇ ತರಗತಿ ಪರೀಕ್ಷೆಗಳು ವರ್ಷಕ್ಕೆ ಎರಡು ಬಾರಿ ನಡೆಯಲಿವೆ
Image
ಕರ್ನಾಟಕದ ಪರೀಕ್ಷಾ ಮಾದರಿ ಅನುಸರಿಸಲು ನಿರ್ಧರಿಸಿದ ಸಿಬಿಎಸ್​ಇ!
Image
ಇನ್ಮುಂದೆ ಶಾಲೆಗಳಲ್ಲಿ ಹೊಸ ರೂಲ್ಸ್: ವಿದ್ಯಾರ್ಥಿಗಳೇ ಇದನ್ನ ತಿಳಿದುಕಳ್ಳಿ!
Image
SSLC ಫಲಿತಾಂಶ ಕಡಿಮೆ ಬಂದರೆ ಶಿಕ್ಷಕರ ವಾರ್ಷಿಕ ವೇತನ ಬಡ್ತಿಗೆ ತಡೆ!

ಒಟ್ಟಾರೆಯಾಗಿ ಕೊರೊನಾ ನಂತರದಲ್ಲಿ ಶಾಲಾ ಮಕ್ಕಳು ಜೀವನ ಶೈಲಿ ಬದಲಾವಣೆ ಆಗಿರುವುದನ್ನು ಖಾಸಗಿ ಶಾಲಾ ಆಡಳಿತ ಮಂಡಳಿಗಳು ದೃಢಪಡಿಸಿವೆ. ಈ ನಿಟ್ಟಿನಲ್ಲಿ ಸುಧಾರಣೆ ತರುವ ಉದ್ದೇಶದಿಂದ ಪೋಷಕರು ಜಾಗರೂಕತೆ ವಹಿಸುವಂತೆ ಮನವಿ ಮಾಡಿವೆ.

ವರದಿ: ಲಕ್ಷ್ಮೀ ನರಸಿಂಹ್ ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 7:51 pm, Sun, 13 July 25