- Kannada News Photo gallery Ram Charan visits Puneeth house and Shiva Rajkumar house and offered condolences
Puneeth Rajkumar: ಶಿವರಾಜ್ ಕುಮಾರ್ ಭೇಟಿಯಾಗಿ ಸಾಂತ್ವನ ಹೇಳಿದ ರಾಮ್ ಚರಣ್
Ram Charan | Shiva Rajkumar: ಟಾಲಿವುಡ್ ನಟ ರಾಮ್ ಚರಣ್ ಇಂದು ಪುನೀತ್ ನಿವಾಸಕ್ಕೆ ತೆರಳಿ ಸಾಂತ್ವನ ಹೇಳಿದ್ದಾರೆ. ನಂತರ ಅವರು ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿ, ಸಾಂತ್ವನ ಹೇಳಿದ್ದಾರೆ. ಶಿವರಾಜ್ ಕುಮಾರ್- ರಾಮ್ ಚರಣ್ ಭೇಟಿಯ ಚಿತ್ರಗಳು ಇಲ್ಲಿವೆ.
Updated on: Nov 03, 2021 | 2:59 PM

ಟಾಲಿವುಡ್ ನಟ ರಾಮ್ ಚರಣ್ ಸದಾಶಿವನಗರದ ಪುನೀತ್ ರಾಜಕುಮಾರ್ ನಿವಾಸಕ್ಕೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ರಾಮ್ ಚರಣ್ ನಂತರ ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ಶಿವರಾಜ್ ಕುಮಾರ್ ನಿವಾಸಕ್ಕೆ ತೆರಳಿ, ಸಾಂತ್ವನ ಹೇಳಿದ್ದಾರೆ. ಈ ವೇಳೆ ಅವರು ಪುನೀತ್ ಭಾವಚಿತ್ರಕ್ಕೆ ಕೈಮುಗಿದು ನಮನ ಸಲ್ಲಿಸಿದ್ದಾರೆ.

ನಂತರ ಶಿವರಾಜ್ ಕುಮಾರ್ ಜೊತೆಗೆ ರಾಮ್ ಚರಣ್, ಅಪ್ಪು ಕೊನೆಯ ದಿನಗಳ ಕುರಿತಂತೆ ಮಾತನಾಡಿದ್ದಾರೆ.

ಈ ಭೇಟಿಯ ನಂತರ ಮಾತನಾಡಿದ ರಾಮ್ ಚರಣ್, ಪುನೀತ್ ನಿಧನ ನಮ್ಮ ಮನೆಯ ಸದಸ್ಯನೊಬ್ಬನನ್ನು ಕಳೆದುಕೊಂಡಂತಾಗಿದೆ ಎಂದು ಶೋಕ ವ್ಯಕ್ತಪಡಿಸಿದ್ದಾರೆ.

ಪುನೀತ್ ಜೊತೆಗಿನ ನೆನಪುಗಳನ್ನು ಸ್ಮರಿಸಿಕೊಂಡ ರಾಮ್ ಚರಣ್, ಅವರು ನಮ್ಮ ಮನೆಗೆ ಬಂದಾಗ, ನಾವು ಅವರಿಗೆ ಗೆಸ್ಟ್ ಎನ್ನುವಷ್ಟು ಆತ್ಮೀಯವಾಗಿ ಇರುತ್ತಿದ್ದರು ಎಂದು ನೆನಪಿಸಿಕೊಂಡಿದ್ದಾರೆ.

ಪುನೀತ್ ಅವರಿಂದ ಮಾನವೀಯ ಗುಣಗಳನ್ನು ನಾವೆಲ್ಲರೂ ಕಲಿಯಬೇಕು ಎಂದು ರಾಮಚರಣ್ ನುಡಿದಿದ್ದಾರೆ.

ನಾವೆಲ್ಲರೂ ಪುನೀತ್ ಅವರನ್ನು ಇಷ್ಟಪಡುತ್ತಿದ್ದೆವು. ‘ವಿ ಲವ್ ಪುನೀತ್’ ಎಂದು ರಾಮ್ ಚರಣ್ ನುಡಿದಿದ್ದಾರೆ.



















