AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಳೆದ ವರ್ಷ ಲಾಕ್​ಡೌನ್ ತೆರವುಗೊಂಡ ಬಳಿಕ ಪುನೀತ್ ಸೈಕಲ್ ಮೇಲೆ ನಗರ ಪ್ರದಕ್ಷಿಣೆ ಹಾಕಿದ್ದರು!

ಕಳೆದ ವರ್ಷ ಲಾಕ್​ಡೌನ್ ತೆರವುಗೊಂಡ ಬಳಿಕ ಪುನೀತ್ ಸೈಕಲ್ ಮೇಲೆ ನಗರ ಪ್ರದಕ್ಷಿಣೆ ಹಾಕಿದ್ದರು!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Nov 03, 2021 | 5:45 PM

Share

ಪುನೀತ್ ಅವರು ತಾವು ಸೈಕಲ್ ತುಳಿಯುತ್ತಿದ್ದಂತೆ ಬೇರೆಯವರನ್ನೂ ಹಾಗೆ ಮಾಡುವಂತೆ ಪ್ರೇರೇಪಿಸುತ್ತಿದ್ದರು. ಕಳೆದ ವರ್ಷ ಅಂದರೆ 2020ರಲ್ಲಿ ಶಿವರಾಜಕುಮಾರ ಅವರ ಹುಟ್ಟಹಬ್ಬಕ್ಕೆ ಒಂದು ಸೈಕಲ್ ಗಿಫ್ಟ್ ಮಾಡಿದ್ದರು.

ಪುನೀತ್ ರಾಜಕುಮಾರ್ ಅವರಿಗೆ ಕಾರುಗಳ ಮೆಲಿದ್ದಷ್ಟೇ ವ್ಯಾಮೋಹ ಸೈಕಲ್ ಗಳ ಮೇಲೂ ಇತ್ತು. ಅವರ ಸ್ವಂತದ ಗಾರೇಜಿನಲ್ಲಿ 12 ಕಾರುಗಳ ಜೊತೆ 10 ಸೈಕಲ್ಗಳೂ ಇವೆ. ಅವರ ಸೈಕಲ್ ಕ್ರೇಜ್ ಅರ್ಥಮಾಡಿಕೊಳ್ಳಲು ಇಷ್ಟು ಸಾಕು ಅನಿಸುತ್ತದೆ. ಸಮಯ ಸಿಕ್ಕಾಗಲೆಲ್ಲ ಸೈಕಲ್ ಮೇಲೆ ಸುತ್ತಾಡುವುದು ಅವರ ನೆಚ್ಚಿನ ಹವ್ಯಾಸವಾಗಿತ್ತು. ಅಷ್ಟ್ಯಾಕೆ ತಮ್ಮ ಸ್ನೇಹಿತರೊಂದಿಗೆ ಅವರು ನಂದಿಬೆಟ್ಟಕ್ಕೂ ಸೈಕಲ್ ಮೇಲೆ ಹೋಗುತ್ತಿದ್ದರು. ಹಾಗೆ ನೋಡಿದರೆ, ಸೈಕ್ಲಿಂಗ್ ಅವರ ದಿನಚರಿಯ ಭಾಗವಾಗಿತ್ತು. ಮನೆ ಅವರಣದಲ್ಲೂ ಅವರು ಸುತ್ತು ಹಾಕುತ್ತಿದ್ದರು.

ಕಳೆದ ವರ್ಷ ಸುಮಾರು ಎರಡೂವರೆ ತಿಂಗಳುಗಳ ನಂತರ ಭಾರತದಲ್ಲಿ ಲಾಕ್ ಡೌನ್ ತೆರವುಗಗೊಳಿಸಿದ ಕೂಡಲೇ ಪುನೀತ್ ಮಾಡಿದ ಮೊದಲ ಕೆಲಸವೇನು ಗೊತ್ತಾ? ಸ್ನೇಹಿತರೊಂದಿಗೆ ತಮ್ಮ ಸದಾಶಿವನಗರದ ಮನೆಯಿಂದ ಸೈಕಲ್​​​ಗಳ ಮೇಲೆ ಹೊರಟು ಮೇಖ್ರಿ ಸರ್ಕಲ್, ವಸಂತನಗರ, ಚಾಳುಕ್ಯ ಸರ್ಕಲ್, ವಿಧಾನ ಸೌಧ, ಎಮ್ ಎಸ್ ಬಿಲ್ಡಿಂಗ್, ಚಿನ್ನಸ್ವಾಮಿ ಕ್ರೀಡಾಂಗಣ ಮತ್ತು ಎಮ್ ಜಿ ರಸ್ತೆಗಳನ್ನು ಸುತ್ತಿದ್ದು! ಆಗಲೇ ಹೇಳಿದ ಹಾಗೆ ಅವರ ಮನೆಯಿಂದ 60 ಕಿಮೀ ದೂರದಲ್ಲಿರುವ ನಂದಿಬೆಟ್ಟಕ್ಕೂ ಅವರು ಸೈಕಲ್ ಸವಾರಿ ಮಾಡುತ್ತಿದ್ದರು.

ಲಾಕ್ ಡೌನ್ ನಂತರ ಅವರು ಸೈಕಲ್ ನಲ್ಲಿ ಮಾಡಿದ ನಗರ ಪ್ರದಕ್ಷಿಣೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿತ್ತು.

ಪುನೀತ್ ಅವರು ತಾವು ಸೈಕಲ್ ತುಳಿಯುತ್ತಿದ್ದಂತೆ ಬೇರೆಯವರನ್ನೂ ಹಾಗೆ ಮಾಡುವಂತೆ ಪ್ರೇರೇಪಿಸುತ್ತಿದ್ದರು. ಕಳೆದ ವರ್ಷ ಅಂದರೆ 2020ರಲ್ಲಿ ಶಿವರಾಜಕುಮಾರ ಅವರ ಹುಟ್ಟಹಬ್ಬಕ್ಕೆ ಒಂದು ಸೈಕಲ್ ಗಿಫ್ಟ್ ಮಾಡಿದ್ದರು.

ಕಾರು, ಬೈಕು ಮತ್ತು ಸೈಕಲ್-ಎಲ್ಲವುಗಳ ಬಗ್ಗೆ ವಿಪರೀತ ವ್ಯಾಮೋಹವಿಟ್ಟಿಕೊಂಡಿದ್ದ ಅಪ್ಪು ಅವೆಲ್ಲವನ್ನು ಅನಾಥಗೊಳಿಸಿ ಬಾರದ ಲೋಕಕ್ಕೆ ತೆರಳಿ ಬಿಟ್ಟಿದ್ದಾರೆ.

ಇದನ್ನೂ ಓದಿ:    ಪಟಾಕಿ ಹಚ್ಚೋದು ಬೇಡ, ದೇಹದ ಕ್ಯಾಲೋರಿ ಬರ್ನ್ ಮಾಡೋಣ; ದೀಪಾವಳಿಗೆ ಮನವಿ ಮಾಡಿದ್ದ ಪುನೀತ್ ಹಳೆಯ ವಿಡಿಯೋ ವೈರಲ್​