ಬೆಂಗಳೂರಿನ ಎಸ್​ಆರ್​ವಿ ಥಿಯೇಟರ್​ನಲ್ಲಿ ಕೊನೆಯದಾಗಿ ಅಟೆಂಡ್​ ಮಾಡಿದ್ದ ಪುನೀತ್​; ಇಲ್ಲಿದೆ ಸಿಸಿಟಿವಿ ವಿಡಿಯೋ

ಪುನೀತ್​ ರಾಜ್​ಕುಮಾರ್​ ಅವರ ಕೊನೆಯ ವಿಡಿಯೋಗಳು ಸಾಕಷ್ಟು ವೈರಲ್​ ಆಗಿದೆ. ಇದರಲ್ಲಿ ಸಿದ್ಧಾರೂಢ ಪ್ರೆಸ್‌ಮಿಟ್‌ಗೆ ಬೆಂಗಳೂರಿನ ಎಸ್‌ಆರ್‌ವಿ ಥಿಯೇಟರ್‌ಗೆ ಬಂದಿದ್ದರು.

TV9kannada Web Team

| Edited By: Rajesh Duggumane

Nov 03, 2021 | 7:13 PM

ಶಿವರಾಜ್​ಕುಮಾರ್​, ರಾಘವೇಂದ್ರ ರಾಜ್​ಕುಮಾರ್​ ಹಾಗೂ ಪುನೀತ್​ ರಾಜ್​ಕುಮಾರ್​ ಪೈಕಿ ಕಿರಿಯವರು ಪುನೀತ್​. ಅವರಿಗೆ 46 ವರ್ಷ ವಯಸ್ಸಾಗಿತ್ತು. ಆದರೆ, ದೇವರು ಮೊದಲು ಕರೆದುಕೊಂಡಿದ್ದು ಪುನೀತ್​ ಅವರನ್ನು. ಮನೆಯ ಕಿರಿಯ ಮಗ ಮೊದಲು ಹೋದನಲ್ಲ ಎನ್ನುವ ಕೊರಗು ಹಾಗೂ ದುಃಖ ರಾಜ್​ಕುಮಾರ್​ ಕುಟುಂಬವನ್ನು ಬಿಟ್ಟೂಬಿಡದೆ ಕಾಡುತ್ತಿದೆ. ಇನ್ನೂ ಸಾಧನೆ ಮಾಡುತ್ತಿರುವ ವಯಸ್ಸಿನಲ್ಲೇ ಅವರು ನಿಧನ ಹೊಂದಿದ್ದು ನಿಜಕ್ಕೂ ಬೇಸರದ ಸಂಗತಿ. ಆದರೆ, ಈ ನೋವಿನ ಜತೆ ಕುಟುಂಬ ಜೀವನ ನಡೆಸಿಕೊಂಡು ಹೋಗಬೇಕಿದೆ.

ಪುನೀತ್​ ರಾಜ್​ಕುಮಾರ್​ ಅವರ ಕೊನೆಯ ವಿಡಿಯೋಗಳು ಸಾಕಷ್ಟು ವೈರಲ್​ ಆಗಿದೆ. ಇದರಲ್ಲಿ ಸಿದ್ಧಾರೂಢ ಪ್ರೆಸ್‌ಮಿಟ್‌ಗೆ ಬೆಂಗಳೂರಿನ ಎಸ್‌ಆರ್‌ವಿ ಥಿಯೇಟರ್‌ಗೆ ಬಂದಿದ್ದರು. ಇದು ಅವರು ಅಟೆಂಡ್​ ಮಾಡಿದ ಕೊನೆಯ ಸಿನಿಮಾ ಪ್ರೆಸ್​ಮೀಟ್​. ಇದರ ಸಿಸಿಟಿವಿ ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಇದನ್ನೂ ಓದಿ: ‘ಆ ದಿನ ಪುನೀತ್ ಡಲ್ ಆಗಿದ್ದರು’; ಅಪ್ಪು ಸಾವಿನ ನಂತರ ಅಚ್ಚರಿಯ ವಿಚಾರ ಬಿಚ್ಚಿಟ್ಟ ಶಿವರಾಜ್​ಕುಮಾರ್​

ಸಾಯುವುದಕ್ಕೂ ಒಂದು ವಾರ ಮೊದಲು ಫಿಸಿಯೋ ಥೆರಪಿ ಮಾಡಿಸಿಕೊಂಡಿದ್ದ ಪುನೀತ್​ ರಾಜ್​ಕುಮಾರ್​

Follow us on

Click on your DTH Provider to Add TV9 Kannada