ಸಾಯುವುದಕ್ಕೂ ಒಂದು ವಾರ ಮೊದಲು ಫಿಸಿಯೋ ಥೆರಪಿ ಮಾಡಿಸಿಕೊಂಡಿದ್ದ ಪುನೀತ್​ ರಾಜ್​ಕುಮಾರ್​

ಸೋಂಟದ ಭಾಗದಲ್ಲಿ ಪುನೀತ್​ಗೆ ನೋವು ಕಾಣಿಸಿಕೊಂಡಿತ್ತು. ಈ ಕಾರಣಕ್ಕೆ ಅವರು ಬೆಂಗಳೂರಿನ ಮಲ್ಲೇಶ್ವರಂಗೆ ಅವರು ತೆರಳಿದ್ದರು. ಅಲ್ಲದೆ, ಡಾ.ಪಳನಿವೇಲುರಿಂದ ಫಿಸಿಯೋ ಥೆರಪಿ ಚಿಕಿತ್ಸೆ ಪಡೆದಿದ್ದರು.

ಸಾಯುವುದಕ್ಕೂ ಒಂದು ವಾರ ಮೊದಲು ಫಿಸಿಯೋ ಥೆರಪಿ ಮಾಡಿಸಿಕೊಂಡಿದ್ದ ಪುನೀತ್​ ರಾಜ್​ಕುಮಾರ್​
ಪುನೀತ್​ ರಾಜ್​ಕುಮಾರ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Nov 03, 2021 | 4:04 PM

ಪುನೀತ್​ ರಾಜ್​ಕುಮಾರ್​ ಅವರು ನಿಧನ ಹೊಂದಿದ ನಂತರ ಸಾಕಷ್ಟು ವಿಚಾರಗಳು ಬೆಳಕಿಗೆ ಬರುತ್ತಿವೆ. ಪುನೀತ್ ಬಗ್ಗೆ ಅನೇಕರು ನಾನಾ ರೀತಿಯ ವಿಚಾರಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಪುನೀತ್​ ಅವರಿಗೆ ಹೃದಯಾಘಾತವಾಗುತ್ತದೆ ಎನ್ನುವ ಯಾವುದೇ ಸೂಚನೆ ಇರಲಿಲ್ಲ. ಪುನೀತ್​ ನಿಧನ ಹೊಂದುವುದಕ್ಕೂ ಮೊದಲು ಫಿಸಿಯೋ ಥೆರಪಿಗೆ ಒಳಗಾಗಿದ್ದರು. ಈ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.

ಸೊಂಟದ ಭಾಗದಲ್ಲಿ ಪುನೀತ್​ಗೆ ನೋವು ಕಾಣಿಸಿಕೊಂಡಿತ್ತು. ಈ ಕಾರಣಕ್ಕೆ ಅವರು ಬೆಂಗಳೂರಿನ ಮಲ್ಲೇಶ್ವರಂಗೆ ತೆರಳಿದ್ದರು. ಅಲ್ಲದೆ, ಡಾ.ಪಳನಿವೇಲುರಿಂದ ಫಿಸಿಯೋ ಥೆರಪಿ ಚಿಕಿತ್ಸೆ ಪಡೆದಿದ್ದರು. ಪುನೀತ್​ ಅದ್ಭುತವಾಗಿ ಡಾನ್ಸ್​ ಮಾಡುತ್ತಾರೆ. ಅವರ ಸಿನಿಮಾಗಳಲ್ಲಿ ಫೈಟ್​ ದೃಶ್ಯ ಕೂಡ ಇರುತ್ತದೆ. ಇದನ್ನು ಹೆಚ್ಚು ಮಾಡಿದಾಗ ಸೊಂಟದ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ನೋವು ಕಾಣಿಸಿಕೊಂಡಾಗ ಇಲ್ಲಿ ಬಂದು ಪುನೀತ್​ ಚಿಕಿತ್ಸೆ ಪಡೆದಿದ್ದರು. ಆದರೆ, ಅವರ ಆರೋಗ್ಯದಲ್ಲಿ ಯಾವುದೇ ತೊಂದರೆ ಇರಲಿಲ್ಲ ಎಂದು ಡಾ.ಪಳನಿವೇಲು ಟಿವಿ9 ಕನ್ನಡಕ್ಕೆ ಮಾಹಿತಿ ನೀಡಿದ್ದಾರೆ.

‘ಸೊಂಟದ ನೋವು ಎಂದು ಬಂದಿದ್ದರು. ನಾವು ಚಿಕಿತ್ಸೆ ನೀಡಿದ್ದೆವು. ಚಿಕಿತ್ಸೆ ನಂತರ ಅವರು ಕಾಲ್‌ ಮಾಡಿ  ಚೆನ್ನಾಗಿದ್ದೇನೆ ಎಂದಿದ್ದರು. ಫಿಸಿಯೋ ಥೆರಪಿ ಬಳಿಕ ಅವರು ಆರೋಗ್ಯವಾಗಿದ್ದರು. ಹೃದಯಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆ ಇರಲಿಲ್ಲ’ ಎಂದು ಮಾಹಿತಿ ನೀಡಿದ್ದಾರೆ ಡಾ.ಪಳನಿವೇಲು.

ರಜನಿಕಾಂತ್​ ಅವರು ಪುನೀತ್ ಸಾವಿನ ಸುದ್ದಿ ಕೇಳಿ ತುಂಬಾನೇ ಬೇಸರಗೊಂಡಿದ್ದರಂತೆ. ಈ ಬಗ್ಗೆ ಶಿವರಾಜ್​ಕುಮಾರ್​ ಮಾತನಾಡಿದ್ದಾರೆ. ‘ರಜನಿಕಾಂತ್​ ಈಗಷ್ಟೇ ಆಸ್ಪತ್ರೆಯಿಂದ ಬಂದಿದ್ದಾರೆ. ಅವರ ಮಗಳು, ಪತ್ನಿ ಕರೆ ಮಾಡಿದ್ದರು. ಅವರಿಗೆ ನಂಬೋಕೆ ಆಗ್ತಿಲ್ಲ. ಅವರು ಚಿಕ್ಕ ವಯಸ್ಸಿಂದ ನನ್ನ ತಮ್ಮನನ್ನು ನೋಡಿಕೊಂಡು ಬಂದಿದ್ದಾರೆ. ರಜನಿಕಾಂತ್​ ಅವರ ಜತೆ ಮಾತನಾಡೋಕೆ ಆಗಿಲ್ಲ. ಈ ವಿಚಾರ ಕೇಳಿ ರಜನಿಕಾಂತ್​ ತುಂಬಾನೇ ನೊಂದುಕೊಂಡರಂತೆ. ಅಪ್ಪು ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇತ್ತು. ಪುನೀತ್​ ಮಗು ಇದ್ದಾಗಿನಿಂದಲೂ ಅವರು ನೋಡಿದ್ದರು. ಹೀಗಾಗಿ ನೋವು ಜಾಸ್ತಿ’ ಎಂದಿದ್ದಾರೆ ಶಿವಣ್ಣ.

ಇದನ್ನೂ ಓದಿ: ಪುನೀತ್​ ನಿಧನ ವಾರ್ತೆ ಕೇಳಿ ರಜನಿಕಾಂತ್​ ಪ್ರತಿಕ್ರಿಯೆ ಹೇಗಿತ್ತು? ಶಿವರಾಜ್​ಕುಮಾರ್​ ವಿವರಿಸಿದ್ದು ಹೀಗೆ

‘ಆ ದಿನ ಪುನೀತ್ ಡಲ್ ಆಗಿದ್ದರು’; ಅಪ್ಪು ಸಾವಿನ ನಂತರ ಅಚ್ಚರಿಯ ವಿಚಾರ ಬಿಚ್ಚಿಟ್ಟ ಶಿವರಾಜ್​ಕುಮಾರ್​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ