AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರ್ತ್​ಡೇ ದಿನ ಬುರ್ಜ್​ ಖಲೀಫಾ ಮೇಲೆ ಮೂಡಿತು ಶಾರುಖ್​ ಫೋಟೋ; ವೈರಲ್​ ಆಯ್ತು ವಿಡಿಯೋ

ಬುರ್ಜ್​ ಖಲೀಫಾ ಕಟ್ಟಡದ ಮೇಲೆ ಶಾರುಖ್​ ಫೋಟೋ ರಾರಾಜಿಸಿದ್ದು, ‘ವಿ ಲವ್​ ಯು’ ಎಂದು ಬರೆಯಲಾಗಿದೆ. ಈ ಫೋಟೋ ಈಗ ವೈರಲ್​ ಆಗಿದೆ.

ಬರ್ತ್​ಡೇ ದಿನ ಬುರ್ಜ್​ ಖಲೀಫಾ ಮೇಲೆ ಮೂಡಿತು ಶಾರುಖ್​ ಫೋಟೋ; ವೈರಲ್​ ಆಯ್ತು ವಿಡಿಯೋ
ಶಾರುಖ್​ ಖಾನ್
TV9 Web
| Edited By: |

Updated on: Nov 03, 2021 | 5:43 PM

Share

ಶಾರುಖ್​ ಖಾನ್ ನವೆಂಬರ್​ 2ರಂದು ಹುಟ್ಟುಹಬ್ಬದ ಆಚರಿಸಿಕೊಂಡಿದ್ದಾರೆ. ಡ್ರಗ್​ ಕೇಸ್​ನಲ್ಲಿ ಜೈಲಿಗೆ ತೆರಳಿದ್ದ ಮಗ ಆರ್ಯನ್​ ಖಾನ್​ ರಿಲೀಸ್​ ಆಗಿದ್ದಾರೆ. ಇದು ಶಾರುಖ್​ ಬರ್ತ್​ಡೇ ಸಂಭ್ರಮವನ್ನು ಹೆಚ್ಚಿಸಿತ್ತು. ಆದಾಗ್ಯೂ, ಸಿಂಪಲ್​ ಆಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು ಕಿಂಗ್​ ಖಾನ್​. ಶಾರುಖ್​ ಮನೆ ಮುಂದೆ ಸಾವಿರಾರು ಅಭಿಮಾನಿಗಳು ಬಂದಿದ್ದರು. ಈ ಮಧ್ಯೆ ಶಾರುಖ್​ ಖಾನ್​ ಫೋಟೋ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್​ ಖಲೀಫಾ ಮೇಲೆ ರಾರಾಜಿಸಿದೆ. ಬುರ್ಜ್​ ಖಲೀಫಾ ಕಟ್ಟಡದ ಮೇಲೆ ಶಾರುಖ್​ ಫೋಟೋ ರಾರಾಜಿಸಿದ್ದು, ‘ವಿ ಲವ್​ ಯು’ ಎಂದು ಬರೆಯಲಾಗಿದೆ. ಈ ಫೋಟೋ ಈಗ ವೈರಲ್​ ಆಗಿದೆ. ಈ ವಿಡಿಯೋಗಳನ್ನು ಅವರ ಅಭಿಮಾನಿಗಳು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

ಶಾರುಖ್​ ಖಾನ್​ ಅವರಿಗೆ ಈ ತಿಂಗಳು ಬಹಳ ವಿಶೇಷವಾದದ್ದು. ಏಕೆಂದರೆ, ಅವರು ಜನ್ಮದಿನ ಆಚರಿಸಿಕೊಂಡಿದ್ದಾರೆ. ಜತೆಗೆ ಕತ್ತಲಿಂದ ಬೆಳಕಿನೆಡೆಗೆ ಕರೆದುಕೊಂಡು ಹೋಗುವ ದೀಪಾವಳಿ ಹಬ್ಬ ಇದೆ. ನವೆಂಬರ್​ 13ರಂದು ಆರ್ಯನ್​ ಖಾನ್​ ಜನ್ಮದಿನ. ಈ ಎಲ್ಲಾ ಕಾರಣಕ್ಕೆ ಶಾರುಖ್​ ಎಗ್ಸೈಟ್​ ಆಗಿದ್ದಾರೆ. ಮತ್ತೆ ಕುಟುಂಬದಲ್ಲಿ ಸಂತಸ ಮೂಡಿದೆ. ಇಂದು ಕುಟುಂಬದವರ ಜತೆ ಸಿಂಪಲ್​ ಆಗಿ ಶಾರುಖ್​ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಪ್ರತಿ ಬಾರಿ ಶಾರುಖ್​ ಜನ್ಮದಿನದಂದು ಅವರ ಮನೆಯ ಎದುರು ಸಾವಿರಾರು ಅಭಿಮಾನಿಗಳು ಬಂದು ನಿಲ್ಲುತ್ತಾರೆ. ಈ ಬಾರಿಯೂ ಅದು ಮುಂದುವರಿದಿದೆ.

ಶಾರುಖ್​ ಪತ್ನಿ ಗೌರಿ ಖಾನ್​ ಹಿಂದು ಆಗಿದ್ದರು. ಈ ಕಾರಣಕ್ಕೆ ಶಾರುಖ್​ ತಮ್ಮ ಮನೆಯಲ್ಲಿ ಪ್ರತಿ ವರ್ಷ ದೀಪಾವಳಿ ಆಚರಿಸುತ್ತಾರೆ. ಈ ಬಾರಿಯೂ ಬೆಳಕಿನ ಹಬ್ಬವನ್ನು ಕುಟುಂಬ ಸಮೇತವಾಗಿ ಆಚರಿಸಲು ಯೋಚನೆ ಮಾಡಿದ್ದಾರೆ. ಆರ್ಯನ್​ ಖಾನ್​ ಬರ್ತ್​ಡೇ ಕೂಡ ಶಾರುಖ್​ ಮನೆಯಲ್ಲೇ ಸೆಲಬ್ರೇಟ್​ ಮಾಡಲಿದ್ದಾರೆ.

ಆರ್ಯನ್​ ಖಾನ್​ ಡ್ರಗ್​ ಪ್ರಕರಣದಿಂದ ಸಿನಿಮಾ ಕೆಲಸಗಳಿಗೆ ತೆರಳೋಕೆ ಶಾರುಖ್​ಗೆ ಸಾಧ್ಯವಾಗಿಲ್ಲ. ಮಗನ ಚಿಂತೆಯಲ್ಲಿ ಅವರು ಸರಿಯಾಗಿ ವರ್ಕೌಟ್​ ಕೂಡ ಮಾಡಿರಲಿಲ್ಲ. ಮಗನ ಬರ್ತ್​ಡೇ ನಂತರ ಅವರು ಮತ್ತೆ ಸಿನಿಮಾ ಕೆಲಸಗಳಿಗೆ ಮರಳಲಿದ್ದಾರೆ ಎನ್ನಲಾಗುತ್ತಿದೆ. ಇನ್ನು, ಶಾರುಖ್​ ಬರ್ತ್​ಡೇ ಅಂಗವಾಗಿ ಅನೇಕ ಸೆಲೆಬ್ರಟಿಗಳು, ಅಭಿಮಾನಿಗಳು ವಿಶ್​ ಮಾಡಿದ್ದಾರೆ. ಶಾರುಖ್​ ನಟಿಸುತ್ತಿರುವ ಸಿನಿಮಾ ತಂಡದಿಂದ ಏನಾದರೂ ಅಪ್​ಡೇಟ್​ ಸಿಗಲಿದೆಯೇ ಎನ್ನುವ ಕುತೂಹಲವೂ ಅಭಿಮಾನಿಗಳಲ್ಲಿತ್ತು. ಆದರೆ, ಅದು ಈಡೇರಲಿಲ್ಲ.

ಇದನ್ನೂ ಓದಿ: Aryan Khan Jail: ಜೈಲಿನಿಂದ ಹೊರಬಂದ ಆರ್ಯನ್​ ಖಾನ್​; ಶಾರುಖ್​ ನಿವಾಸ ಮನ್ನತ್​ ಎದುರು ಫ್ಯಾನ್ಸ್​ ಸಂಭ್ರಮ

ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ಸೋನಲ್-ತರುಣ್ ಗೃಹಪ್ರವೇಶ; ಇಲ್ಲಿದೆ ಸುಂದರ ವಿಡಿಯೋ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ವೇಗವಾಗಿ ಬಂದು ಟೋಲ್ ಬೂತ್​ಗೆ ಗುದ್ದಿದ ಬಸ್, ಭೀಕರ ದೃಶ್ಯ ಸಿಸಿಟಿವಿಲಿ ಸೆರೆ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಜನಾರ್ದನ ರೆಡ್ಡಿ ಮನೆ ಮುಂದಿನ ಸಂಘರ್ಷದ ಭೀಕರತೆ ಬಿಚ್ಚಿಟ್ಟ ವಿಡಿಯೋ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ
ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ