AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aryan Khan Jail: ಜೈಲಿನಿಂದ ಹೊರಬಂದ ಆರ್ಯನ್​ ಖಾನ್​; ಶಾರುಖ್​ ನಿವಾಸ ಮನ್ನತ್​ ಎದುರು ಫ್ಯಾನ್ಸ್​ ಸಂಭ್ರಮ

Aryan Khan Drugs Case: 25 ದಿನಗಳಿಗೂ ಹೆಚ್ಚು ದಿನಗಳ ಕಾಲ ಆರ್ಯನ್​ ಖಾನ್​ ಅವರು ಆರ್ಥರ್​ ರೋಡ್​ ಜೈಲಿನಲ್ಲಿ ಇರುವುದು ಅನಿವಾರ್ಯ ಆಗಿತ್ತು. ಅಂತೂ ಅವರೀಗ ಜಾಮೀನನ ಮೇಲೆ ಹೊರಗೆ ಬಂದಿದ್ದಾರೆ.

Aryan Khan Jail: ಜೈಲಿನಿಂದ ಹೊರಬಂದ ಆರ್ಯನ್​ ಖಾನ್​; ಶಾರುಖ್​ ನಿವಾಸ ಮನ್ನತ್​ ಎದುರು ಫ್ಯಾನ್ಸ್​ ಸಂಭ್ರಮ
ಜೈಲಿನಿಂದ ಹೊರಬಂದ ಆರ್ಯನ್​ ಖಾನ್​ (ಸಂಗ್ರಹ ಚಿತ್ರ)
TV9 Web
| Edited By: |

Updated on: Oct 30, 2021 | 11:48 AM

Share

ಡ್ರಗ್ಸ್​ ಕೇಸ್​ನಲ್ಲಿ ಎನ್​ಸಿಬಿ ಅಧಿಕಾರಿಗಳ ಬಲೆಗೆ ಬಿದ್ದು ಜೈಲು ಸೇರಿದ್ದ ಆರ್ಯನ್​ ಖಾನ್​ ಈಗ ಜಾಮೀನು ಪಡೆದು ಹೊರಬಂದಿದ್ದಾರೆ. ಬಾಂಬೆ ಹೈಕೋರ್ಟ್​ ಗುರುವಾರವೇ (ಅ.28) ಶಾರುಖ್​ ಖಾನ್​ ಪುತ್ರನಿಗೆ ಜಾಮೀನು ನೀಡಿತ್ತು. ಅದಕ್ಕೆ ಸಂಬಂಧಿಸಿದಂತೆ ಜೈಲಿನ ಕೆಲವು ಪ್ರಕ್ರಿಯೆಗಳು ಇಂದು (ಅ.30) ಮುಗಿದಿದ್ದು, ಆರ್ಯನ್​ ಖಾನ್​ ಹೊರಗೆ ಬಂದಿದ್ದಾರೆ. ಅವರನ್ನು ಸ್ವಾಗತ ಮಾಡಲು ಶಾರುಖ್​ ನಿವಾಸ ಮನ್ನತ್​ ಎದುರಿನಲ್ಲಿ ಫ್ಯಾನ್ಸ್​ ಜಮಾಯಿಸಿದ್ದಾರೆ. ಪುತ್ರನ ಆಗಮನದಿಂದಾಗಿ ಶಾರುಖ್​ ಖಾನ್​ ಮತ್ತು ಗೌರಿ ಖಾನ್​ ನಿಟ್ಟುಸಿರು ಬಿಟ್ಟಿದ್ದಾರೆ. ಜಾಮೀನು ಕೊಡಿಸಲು ಅವರು ಹರಸಾಹಸ ಮಾಡಿದ್ದರು.

ಅ.2ರಂದು ಮಂಬೈನ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್​ ಪಾರ್ಟಿ ನಡೆಯುತ್ತಿದೆ ಎಂಬ ಮಾಹಿತಿ ಆಧರಿಸಿ ಎನ್​ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ಪಾರ್ಟಿಯಲ್ಲಿ ಆರ್ಯನ್​ ಖಾನ್​ ಕೂಡ ಭಾಗವಹಿಸಿದ್ದರಿಂದ ಅವರನ್ನು ವಶಕ್ಕೆ ಪಡೆಯಲಾಗಿತು. ಬಳಿಕ ಅವರನ್ನು ಕೋರ್ಟ್​ ನ್ಯಾಯ್ಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಸುಮಾರು 25 ದಿನಗಳಿಗೂ ಹೆಚ್ಚು ದಿನಗಳ ಕಾಲ ಆರ್ಯನ್​ ಅವರು ಆರ್ಥರ್​ ರೋಡ್​ ಜೈಲಿನಲ್ಲಿ ಇರುವುದು ಅನಿವಾರ್ಯ ಆಗಿತ್ತು. ಅಂತೂ ಅವರೀಗ ಜಾಮೀನನ ಮೇಲೆ ಹೊರಗೆ ಬಂದಿದ್ದಾರೆ.

ಆರ್ಯನ್​ ಖಾನ್​ಗೆ ಜಾಮೀನು ಸಿಕ್ಕ ಕೂಡಲೇ ಅನೇಕ ಸೆಲೆಬ್ರಿಟಿಗಳು ಸೋಶಿಯಲ್​ ಮೀಡಿಯಾ ಮೂಲಕ ಪ್ರತಿಕ್ರಿಯಿಸಿದ್ದರು. ಸೋನು ಸೂದ್​, ಸ್ವರಾ ಭಾಸ್ಕರ್​, ಆರ್. ಮಾಧವನ್​, ಸೋನಮ್​ ಕಪೂರ್​, ಮಿಕಾ ಸಿಂಗ್​, ಹನ್ಸಲ್​ ಮೆಹ್ತಾ, ಸಂಜಯ್​ ಗುಪ್ತಾ, ಮಲೈಕಾ ಅರೋರಾ, ಕರಣ್​ ಜೋಹರ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸಂತಸ ಹಂಚಿಕೊಂಡಿದ್ದರು.

ಆರ್ಯನ್​ ಖಾನ್​ ತಂಗಿ ಸುಹಾನಾ ಖಾನ್​ ಅವರು ತಮ್ಮಿಬ್ಬರ ಬಾಲ್ಯದ ಫೋಟೋಗಳನ್ನು ಹಂಚಿಕೊಂಡು, ‘ಐ ಲವ್​ ಯೂ’ ಎಂದು ಕ್ಯಾಪ್ಷನ್​ ನೀಡಿದ್ದರು. ‘ಕಾಲವೇ ತೀರ್ಪು ನೀಡಿದಾಗ ಸಾಕ್ಷಿಗಳ ಅವಶ್ಯಕತೆ ಇರುವುದಿಲ್ಲ’ ಎಂದು ಸೋನು ಸೂದ್​ ಟ್ವೀಟ್​ ಮಾಡಿದ್ದರು. ‘ಧನ್ಯವಾದಗಳು ದೇವರೇ.. ಒಬ್ಬ ತಂದೆಯಾಗಿ ನನಗೆ ಈಗ ಸಮಾಧಾನ ಎನಿಸುತ್ತಿದೆ. ಒಳ್ಳೆಯ ಸಂಗತಿಗಳೇ ನಡೆಯಲಿ’ ಎಂದು ಆರ್​. ಮಾಧವನ್​ ಟ್ವೀಟ್​ ಮಾಡಿದ್ದರು.

ಆರ್ಯನ್ ಖಾನ್​​ ಬಂಧನದ ಬಗ್ಗೆ ರಮ್ಯಾ ಅವರು ಮೊದಲಿನಿಂದಲೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತ ಬಂದಿದ್ದರು. ತನಿಖೆಯ ರೀತಿ-ನೀತಿ ಬಗ್ಗೆ ಅವರು ತಕರಾರು ಎತ್ತಿದ್ದರು. ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ಅನಿಸಿಕೆ ಹಂಚಿಕೊಳ್ಳುತ್ತಿದ್ದರು. ಆರ್ಯನ್​ ಖಾನ್​ಗೆ ಜಾಮೀನು ಮಂಜೂರು ಆದ ತಕ್ಷಣ ‘ಕಡೆಗೂ ಜಾಮೀನು ಸಿಕ್ತು’ ಎಂದು ನಿಟ್ಟುಸಿರು ಬಿಡುವ ರೀತಿಯಲ್ಲಿ ಅವರು ಸ್ಟೋರಿ ಪೋಸ್ಟ್​ ಮಾಡಿದ್ದರು.

ಇದನ್ನೂ ಓದಿ:

‘ಇನ್ಮೇಲೆ ಒಳ್ಳೇ ಮನುಷ್ಯ ಆಗ್ತೀನಿ’; ಎನ್​ಸಿಬಿ ಅಧಿಕಾರಿಗಳಿಗೆ ಭರವಸೆ ನೀಡಿದ ಶಾರುಖ್​ ಪುತ್ರ ಆರ್ಯನ್​ ಖಾನ್​

ಬಂಧನದ ಭೀತಿಯಲ್ಲಿ ಸಮೀರ್​ ವಾಂಖೆಡೆ; ಬಾಂಬೆ ಹೈಕೋರ್ಟ್​ ಮೆಟ್ಟಿಲೇರಿದ ಎನ್​ಸಿಬಿ ಅಧಿಕಾರಿಗೆ ಹಿನ್ನೆಡೆ

Follow Us
TV9 Web
TV9 Web

TV9 Kannada

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್