ಬಂಧನದ ಭೀತಿಯಲ್ಲಿ ಸಮೀರ್​ ವಾಂಖೆಡೆ; ಬಾಂಬೆ ಹೈಕೋರ್ಟ್​ ಮೆಟ್ಟಿಲೇರಿದ ಎನ್​ಸಿಬಿ ಅಧಿಕಾರಿಗೆ ಹಿನ್ನೆಡೆ

ತಮ್ಮ ವಿರುದ್ಧ ಮಹಾರಾಷ್ಟ್ರ ಸರ್ಕಾರ ಆದೇಶಿಸಿರುವ ತನಿಖೆಯನ್ನು ಪ್ರಶ್ನಿಸಿ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ಕೋರ್ಟ್​ ಮೆಟ್ಟಿಲು ಏರಿದ್ದಾರೆ. ‘ಮುಂಬೈ ಪೊಲೀಸರು ನನ್ನನ್ನು ಬಂಧಿಸಬಹುದು ಎಂಬ ಆತಂಕ ಎದುರಾಗಿದೆ’ ಎಂದು ಅವರು ಹೇಳಿದ್ದಾರೆ.

ಬಂಧನದ ಭೀತಿಯಲ್ಲಿ ಸಮೀರ್​ ವಾಂಖೆಡೆ; ಬಾಂಬೆ ಹೈಕೋರ್ಟ್​ ಮೆಟ್ಟಿಲೇರಿದ ಎನ್​ಸಿಬಿ ಅಧಿಕಾರಿಗೆ ಹಿನ್ನೆಡೆ
ಸಮೀರ್​ ವಾಂಖೆಡೆ, ಆರ್ಯನ್​ ಖಾನ್​
Follow us
| Updated By: ಮದನ್​ ಕುಮಾರ್​

Updated on:Oct 28, 2021 | 4:53 PM

ಶಾರುಖ್​ ಖಾನ್​ ಪುತ್ರ ಆರ್ಯನ್​ ಖಾನ್​ ಅವರನ್ನು ಬಂಧಿಸಿದ ಎನ್​ಸಿಬಿ ಅಧಿಕಾರಿ ಸಮೀರ್​ ವಾಂಖೆಡೆ ಮೇಲೆ ಅನೇಕ ಆರೋಪಗಳು ಕೇಳಿಬಂದಿವೆ. ಸ್ಟಾರ್​ ಪುತ್ರನ ಬಂಧನದ ಹಿಂದೆ ಸುಲಿಗೆ ಪ್ಲ್ಯಾನ್​ ಮಾಡಲಾಗಿತ್ತು ಎಂಬ ಆರೋಪ ಎದುರಾದ ಬೆನ್ನಲ್ಲೇ ಸಮೀರ್​ ವಾಂಖೆಡೆ ಅವರಿಗೆ ಬಂಧನ ಭೀತಿ ಶುರುವಾಗಿದೆ. ಆರೋಪಕ್ಕೆ ಸಂಬಂಧ ಪಟ್ಟಂತೆ ತನಿಖೆ ನಡೆಸಲು ಮಹಾರಾಷ್ಟ್ರ ಸರ್ಕಾರ ವಿಶೇಷ ತನಿಖಾ ತಂಡ ನೇಮಿಸಿದೆ. ಮುಂಬೈ ಪೊಲೀಸರು ಸಮೀರ್​ ವಾಂಖೆಡೆ ಅವರನ್ನು ವಿಚಾರಣೆಗೆ ಒಳಪಡಿಸಲು ಸಜ್ಜಾಗಿದ್ದಾರೆ. ಆದರೆ ಇದನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್​ನಲ್ಲಿ ವಾಂಖೆಡೆ ಅರ್ಜಿ ಸಲ್ಲಿಸಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಆದೇಶಿಸಿರುವ ತನಿಖೆಯನ್ನು ಪ್ರಶ್ನಿಸಿ ಸಮೀರ್​ ವಾಂಖೆಡೆ ಕೋರ್ಟ್​ ಮೆಟ್ಟಿಲು ಏರಿದ್ದಾರೆ. ‘ಮುಂಬೈ ಪೊಲೀಸರು ನನ್ನನ್ನು ಬಂಧಿಸಬಹುದು ಎಂಬ ಆತಂಕ ಎದುರಾಗಿದೆ. ನನ್ನನ್ನು ವೈಯಕ್ತಿಯವಾಗಿ ಟಾರ್ಗೆಟ್​ ಮಾಡಲಾಗಿದೆ. ಬಂಧನ ಆಗದಂತೆ ತಡೆ ನೀಡಬೇಕು’ ಎಂದು ಹೇಳಿರುವ ಸಮೀರ್​ ವಾಂಖೆಡೆ ಅವರು ಗುರುವಾರ (ಅ.28) ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ವಿರುದ್ಧ ಕೇಳಿಬಂದಿರುವ ಎಲ್ಲ ಆರೋಪಗಳಿಗೆ ಸಂಬಂಧಪಟ್ಟಂತೆ ಸಿಬಿಐ ತನಿಖೆಗೆ ಒಳಗಾಗಲು ತಾವು ಸಿದ್ಧ ಎಂದು ಅವರು ಹೇಳಿದ್ದಾರೆ.

ಸಮೀರ್​ ವಾಂಖೆಡೆ ಅವರ ಈ ಮನವಿಯನ್ನು ಕೋರ್ಟ್​ ತಿರಸ್ಕರಿಸಿದೆ. ತನಿಖೆಯನ್ನು ಕೈಬಿಡಲು ಸಾಧ್ಯವಿಲ್ಲ ಎಂದು ಆದೇಶ ನೀಡಿದೆ. ಒಂದು ವೇಳೆ ಭ್ರಷ್ಟಚಾರ ಆರೋಪದ ಮೇಲೆ ಕೇಸ್​ ದಾಖಲಿಸಿ ಸಮೀರ್​ ವಾಂಖೆಡೆ ಅವರನ್ನು ಬಂಧಿಸುವುದಾದರೆ ಮೂರು ದಿನ ಮುಂಚಿತವಾಗಿ ನೋಟಿಸ್​ ನೀಡಲಾಗುವುದು ಎಂದು ಮುಂಬೈ ಸರ್ಕಾರದ ಪರ ವಕೀಲರು ತಿಳಿಸಿದ್ದಾರೆ. ಒಟ್ಟಿನಲ್ಲಿ ಸಮೀರ್​ ವಾಂಖೆಡೆ ಅವರಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ.

ಆರ್ಯನ್​ ಖಾನ್​ ಭಾಗಿಯಾಗಿದ್ದರು ಎನ್ನಲಾದ ರೇವ್​ ಪಾರ್ಟಿ ಮೇಲೆ ದಾಳಿ ನಡೆದ ದಿನ ಎನ್​ಸಿಬಿ ಅಧಿಕಾರಿಗಳ ಜೊತೆ ಖಾಸಗಿ ಡಿಟೆಕ್ಟೀವ್​ ಕಿರಣ್​ ಗೋಸಾವಿ ಮತ್ತು ಅವರ ಬಾಡಿಗಾರ್ಡ್​ ಪ್ರಭಾಕರ್​ ಸೈಲ್​ ಕೂಡ ಹಾಜರಿದ್ದರು. ಇವರಿಬ್ಬರು ಪ್ರಮುಖ ಸಾಕ್ಷಿಗಳಾಗಿದ್ದಾರೆ. ಆದರೆ ದಾಳಿ ಬಳಿಕ ಕಿರಣ್​ ಗೋಸಾವಿ ನಾಪತ್ತೆ ಆಗಿದ್ದರು. ಈಗ ಅವರು ಪುಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಎನ್​ಸಿಬಿ ಅಧಿಕಾರಿಗಳು ಖಾಲಿ ಹಾಳೆಗೆ ಸಹಿ ಮಾಡಿಸಿಕೊಂಡರು ಮತ್ತು ಬಹುಕೋಟಿ ಡೀಲ್​ ಬಗ್ಗೆ ಮಾತುಗಳನ್ನು ಕೇಳಿಸಿಕೊಂಡಿದ್ದೇನೆ ಎಂದು ಪ್ರಭಾಕರ್​ ಸೈಲ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಅದರ ಜೊತೆ ನ್ಯಾಷನಲಿಸ್ಟ್​ ಕಾಂಗ್ರೆಸ್​ ಪಾರ್ಟಿ ಮುಖಂಡ ನವಾಬ್​ ಮಲಿಕ್​ ಕೂಡ ಸಮೀರ್​ ವಾಂಖೆಡೆ ವಿರುದ್ಧ ಅನೇಕ ಆರೋಪಗಳನ್ನು ಹೊರಿಸಿದ್ದಾರೆ. ಇವುಗಳ ಆಧಾರದ ಮೇಲೆ ಮಹಾರಾಷ್ಟ್ರ ಸರ್ಕಾರವು ತನಿಖೆ ನಡೆಸಲು ವಿಶೇಷ ತಂಡ ರಚಿಸಿದೆ.

ಇದನ್ನೂ ಓದಿ:

ಸಮೀರ್​ ವಾಂಖೆಡೆ ಸಹೋದರಿಯ ಖಾಸಗಿ ಫೋಟೋ ಲೀಕ್​ ಮಾಡುವುದಾಗಿ ಬೆದರಿಕೆ; ನವಾಬ್​ ಮಲಿಕ್​ ಮೇಲೆ ಆರೋಪ

‘ಖಾಲಿ ಹಾಳೆಗೆ ಸಮೀರ್​ ವಾಂಖೆಡೆ ಸಹಿ ಮಾಡಿಸಿಕೊಂಡ್ರು’: ಆರ್ಯನ್​ ಬಂಧಿಸಿದ ಅಧಿಕಾರಿ ಮೇಲೆ ಗಂಭೀರ ಆರೋಪ

Published On - 3:44 pm, Thu, 28 October 21

ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ
ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?