AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ ಮದುವೆಗೆ ದಿನಾಂಕ, ಸ್ಥಳ ಫಿಕ್ಸ್​? ರಾಯಲ್​ ವೆಡ್ಡಿಂಗ್​ ಬಗ್ಗೆ ಇಲ್ಲಿದೆ ವಿವರ

Katrina Kaif | Vicky Kaushal: ರಾಜಸ್ಥಾನದ ಒಂದು ಐಷಾರಾಮಿ ರೆಸಾರ್ಟ್​ನಲ್ಲಿ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್ ಮದುವೆ ನಡೆಯಲಿದೆ. ಈ ರಾಯಲ್​ ವಿವಾಹ ಸಮಾರಂಭದಲ್ಲಿ ಸಭ್ಯಸಾಚಿ ವಿನ್ಯಾಸಗೊಳಿಸಿದ ಉಡುಗೆಯನ್ನು ಅವರು​ ಧರಿಸಲಿದ್ದಾರೆ ಎಂದು ವರದಿ ಆಗಿದೆ.

ಕತ್ರಿನಾ ಕೈಫ್​-ವಿಕ್ಕಿ ಕೌಶಲ್​ ಮದುವೆಗೆ ದಿನಾಂಕ, ಸ್ಥಳ ಫಿಕ್ಸ್​? ರಾಯಲ್​ ವೆಡ್ಡಿಂಗ್​ ಬಗ್ಗೆ ಇಲ್ಲಿದೆ ವಿವರ
ವಿಕ್ಕಿ ಕೌಶಲ್, ಕತ್ರಿನಾ ಕೈಫ್
TV9 Web
| Updated By: ಮದನ್​ ಕುಮಾರ್​|

Updated on: Oct 28, 2021 | 11:58 AM

Share

ಬಾಲಿವುಡ್​ ಸೆಲೆಬ್ರಿಟಿಗಳಾದ ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ನಡುವೆ ಪ್ರೀತಿ ಚಿಗುರಿದೆ ಎಂಬ ಸುದ್ದಿ ಬಹಳ ದಿನಗಳಿಂದ ಕೇಳಿಬರುತ್ತಲೇ ಇದೆ. ಆ ಪ್ರೀತಿ ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಮಂಟಪದವರೆಗೂ ಬರಲಿದೆ ಎನ್ನಲಾಗುತ್ತಿದೆ. ಈಗ ಈ ಜೋಡಿಯ ಬಗ್ಗೆ ಹೊಸದೊಂದು ಗುಸುಗುಸು ಕೇಳಿಬಂದಿದೆ. ಕತ್ರಿನಾ ಮತ್ತು ವಿಕ್ಕಿ ಕೌಶಲ್​ ಈಗಾಗಲೇ ತಮ್ಮ ಮದುವೆಯ ದಿನಾಂಕ ಮತ್ತು ಸ್ಥಳವನ್ನೂ ನಿಗದಿ ಮಾಡಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಇದೇ ವರ್ಷ ಡಿಸೆಂಬರ್​ನಲ್ಲಿ ಈ ರಾಯಲ್​ ವೆಡ್ಡಿಂಗ್​ ನಡೆಯಲಿದೆ ಎಂದು ಹೇಳಲಾಗುತ್ತಿದೆ.

2019ರಿಂದಲೂ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ನಡುವೆ ಆಪ್ತತೆ ಹೆಚ್ಚಿದೆ. ಅನೇಕ ಸಂದರ್ಭಗಳಲ್ಲಿ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಅವರು ಮದುವೆ ಆಗುವುದು ಖಚಿತ ಎಂಬುದು ಹಲವರ ಅಭಿಪ್ರಾಯ. ಆದರೆ ತಮ್ಮಿಬ್ಬರ ಸಂಬಂಧವನ್ನು ಈ ಜೋಡಿ ಎಂದಿಗೂ ಒಪ್ಪಿಕೊಂಡಿಲ್ಲ. ಹಾಗಿದ್ದರೂ ಕೂಡ ಗಾಸಿಪ್​ ಮಂದಿಗೆ ಈಗ ಫ್ರೆಶ್​ ಮಾಹಿತಿ ಸಿಕ್ಕಿದೆ. ರಾಜಸ್ಥಾನದಲ್ಲಿ ಇವರಿಬ್ಬರು ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

ರಾಜಸ್ಥಾನದ ಒಂದು ಐಷಾರಾಮಿ ರೆಸಾರ್ಟ್​ನಲ್ಲಿ ಇವರ ಮದುವೆ ನಡೆಯಲಿದೆ. ಈ ರಾಯಲ್​ ವಿವಾಹ ಸಮಾರಂಭದಲ್ಲಿ ಸಭ್ಯಸಾಚಿ ವಿನ್ಯಾಸಗೊಳಿಸಿದ ಉಡುಗೆಯನ್ನು ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಧರಿಸಲಿದ್ದಾರೆ ಎಂದು ವರದಿ ಆಗಿದೆ. ಮದುವೆ ಕುರಿತು ಈ ವಿವರಗಳು ಹೊರಬೀಳುತ್ತಿದ್ದಂತೆಯೇ ಅವರ ಕುಟುಂಬದವರಿಗೆ ಕರೆ ಮಾಡಿ ಆಪ್ತರು ಅಭಿನಂದನೆ ತಿಳಿಸಲು ಶುರುಮಾಡಿದ್ದಾರೆ. ಹಾಗಿದ್ದರೂ ಕೂಡ ಕುಟುಂಬದ ಸದಸ್ಯರು ಸಾರ್ವಜನಿಕವಾಗಿ ಮಾತನಾಡುತ್ತಿಲ್ಲ.

ಇತ್ತೀಚೆಗಿನ ಸಂದರ್ಶನದಲ್ಲಿ ಈ ಬಗ್ಗೆ ಕತ್ರಿನಾ ಕೈಫ್​ ಅವರಿಗೆ ಪ್ರಶ್ನೆ ಎದುರಾಗಿತ್ತು. ನಿಮ್ಮ ಮದುವೆ ವಿಚಾರ ಯಾಕೆ ಪದೇಪದೇ ಪ್ರಸ್ತಾಪ ಆಗುತ್ತದೆ ಎಂದು ಕೇಳಿದ್ದಕ್ಕೆ, ‘ಈ ಪ್ರಶ್ನೆ ನನಗೆ ಕಳೆದ 15 ವರ್ಷದಿಂದಲೂ ಕಾಡುತ್ತಿದೆ’ ಎಂದು ಉತ್ತರಿಸಿದ್ದಾರೆ. ನೇರವಾಗಿ ಅವರು ವಿಕ್ಕಿ ಜೊತೆಗಿನ ಸಂಬಂಧವನ್ನು ಒಪ್ಪಿಕೊಂಡಿಲ್ಲ. ಎಲ್ಲದಕ್ಕೂ ಕಾಲವೇ ಉತ್ತರಿಸಬೇಕಿದೆ.

ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಬಳಿ ರೇಂಜ್​ ರೋವರ್ ಕಾರು ಇದೆ. ಇಬ್ಬರ ಕಾರುಗಳ ನಂಬರ್​ ಪ್ಲೇಟ್​ ಗಮನ ಸೆಳೆಯುತ್ತಿದೆ. ವಿಕ್ಕಿ ಅವರ ಕಪ್ಪು ಬಣ್ಣದ ರೇಂಜ್ ರೋವರ್ ಸಂಖ್ಯೆ 7722 ಆಗಿದೆ. ಕತ್ರಿನಾ ಅವರ ಬೂದು ಬಣ್ಣದ ರೇಂಜ್ ರೋವರ್ ಸಂಖ್ಯೆ 8822. ಇಬ್ಬರ ಕಾರಿನ ಕೊನೆ ಸಂಖ್ಯೆ 22 ಅನ್ನೋದು ವಿಶೇಷ. ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ ಎಂಬ ಮಾತಿಗೆ ಈ ನಂಬರ್​ ಪ್ಲೇಟ್​ ಕೂಡ ಪುಷ್ಠಿ ನೀಡುವಂತಿದೆ.

ಇದನ್ನೂ ಓದಿ:

‘ಕತ್ರಿನಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಕ್ಕೆ ಸ್ವೀಟ್​ ಕೊಡಪ್ಪ’; ಮಗನ ಕಾಲೆಳೆದ ವಿಕ್ಕಿ ತಂದೆ-ತಾಯಿ

ವಿಕ್ಕಿ ಕೌಶಲ್​- ಕತ್ರಿನಾ ಸಂಬಂಧದ ಬಗ್ಗೆ ಬಾಯ್ಬಿಟ್ಟ ಕಪೂರ್​ ಕುಟುಂಬದ ಕುಡಿ; ಶೀಘ್ರವೇ ಮದುವೆ?