ಜಾನ್ವಿ ಕಪೂರ್ ದಕ್ಷಿಣ ಭಾರತಕ್ಕೆ ಕಾಲಿಡದೇ ಇರಲು ಕಾರಣವೇನು? ಅವರಿಂದಲೇ ಸಿಕ್ತು ಉತ್ತರ
ಶ್ರೀದೇವಿ ಬಾಲಿವುಡ್ ಮಾತ್ರವಲ್ಲ ದಕ್ಷಿಣ ಭಾರತದ ಸಿನಿಮಾಗಳಲ್ಲೂ ನಟಿಸಿದ್ದಾರೆ. ಇಲ್ಲಿಯೂ ಅವರು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಈ ಕಾರಣಕ್ಕೆ ದಕ್ಷಿಣ ಸಿನಿ ರಂಗದಲ್ಲೂ ಅವರ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ.
ಖ್ಯಾತ ನಟಿ ಶ್ರೀದೇವಿ ಮಗಳು ಜಾನ್ವಿ ಕಪೂರ್ ಬಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಜಾನ್ವಿಗೆ ಹೇಳಿಕೊಳ್ಳುವಂಥ ದೊಡ್ಡ ಯಶಸ್ಸು ಸಿಗದೇ ಇದ್ದರೂ ಸ್ಟಾರ್ ಕಿಡ್ ಎನ್ನುವ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಬೇಡಿಕೆ ಇದೆ. ಆದರೆ, ಅವರು ಯಾವುದೇ ದಕ್ಷಿಣ ಭಾರತದ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಇದೇಕೆ ಎನ್ನುವ ಪ್ರಶ್ನೆಗೆ ಜಾನ್ವಿ ಕಡೆಯಿಂದಲೇ ಉತ್ತರ ಸಿಕ್ಕಿದೆ.
ಶ್ರೀದೇವಿ ಬಾಲಿವುಡ್ ಮಾತ್ರವಲ್ಲ ದಕ್ಷಿಣ ಭಾರತದ ಸಿನಿಮಾಗಳಲ್ಲೂ ನಟಿಸಿದ್ದಾರೆ. ಇಲ್ಲಿಯೂ ಅವರು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಈ ಕಾರಣಕ್ಕೆ ದಕ್ಷಿಣ ಸಿನಿ ರಂಗದಲ್ಲೂ ಅವರ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ಅದೇ ರೀತಿ ಅವರ ಮಗಳು ಜಾನ್ವಿ ಕೂಡ ದಕ್ಷಿಣಕ್ಕೆ ಕಾಲಿಡಲಿ ಎಂಬುದು ಅನೇಕರ ಬಯಕೆ. ಆದರೆ, ಅದು ಸಾಧ್ಯವಾಗಿಲ್ಲ. ಈಗ ಈ ಕುರಿತು ಜಾನ್ವಿ ಮಾತನಾಡಿದ್ದಾರೆ. ‘ದಕ್ಷಿಣ ಭಾರತದ ಸಾಕಷ್ಟು ಸಿನಿಮಾಗಳ ಕಥೆಗಳನ್ನು ಕೇಳಿದ್ದೇನೆ. ಆದರೆ, ಯಾವ ಕಥೆಯೂ ಇಷ್ಟವಾಗಿಲ್ಲ. ಈ ಸಿನಿಮಾ ನಾನು ಮಾಡಲೇಬೇಕು ಎನಿಸಿದರೆ ಅಂಥ ಸಿನಿಮಾವನ್ನು ಕೈಗೆತ್ತಿಕೊಳ್ಳುತ್ತೇನೆ’ ಎಂದಿದ್ದಾರೆ ಅವರು.
ಮಲಯಾಳಂನ ಖ್ಯಾತ ನಟ ಫಹಾದ್ ಫಾಸಿಲ್ಗೆ ದೊಡ್ಡ ಅಭಿಮಾನಿ ಬಳಗ ಇದೆ. ಈ ಬಳಗದಲ್ಲಿ ಜಾನ್ವಿ ಕೂಡ ಒಬ್ಬರು. ಜಾನ್ವಿಗೆ ಫಹಾದ್ ನಟನೆಯನ್ನು ಕಂಡರೆ ಬಹಳ ಇಷ್ಟವಂತೆ. ಫಹಾದ್ ನಟನೆಯ ‘ಟ್ರಾನ್ಸ್’ ಸಿನಿಮಾವನ್ನು ಜಾನ್ವಿ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆಯೂ ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಜಾನ್ವಿ ಕಪೂರ್ಗೆ ಯಾಕೋ ಪದೇಪದೇ ಅದೃಷ್ಟ ಕೈ ಕೊಡುತ್ತಿದೆ. ನಟಿಸಿದ ಯಾವ ಸಿನಿಮಾಗಳೂ ಕೈ ಹಿಡಿಯುತ್ತಿಲ್ಲ. ಮೊದಲ ಸಿನಿಮಾ ‘ಧಡಕ್’ ಬಳಿಕ ಅವರಿಗೆ ಮತ್ತೆ ದೊಡ್ಡ ಗೆಲುವು ಸಿಗಲೇ ಇಲ್ಲ. ‘ಗುಂಜನ್ ಸಕ್ಸೇನಾ’ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇತ್ತಾದರೂ ಸಿನಿಪ್ರಿಯರು ಅದಕ್ಕೆ ಮೆಚ್ಚುಗೆ ಸೂಚಿಸಿಲ್ಲ. ಅವರ ನಟನೆಯ ‘ರೂಹಿ’ ಸಿನಿಮಾ ಕೂಡ ನೆಲಕಚ್ಚಿತು. ಸದ್ಯ, ‘ದೋಸ್ತಾನಾ 2’ ‘ಗುಡ್ ಲಕ್ ಜೆರ್ರಿ’ ಮತ್ತು ‘ಮಿಲಿ’ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ.
ಇದನ್ನೂ ಓದಿ: ನಾಗ ಚೈತನ್ಯ ನೆನಪನ್ನು ಸಂಪೂರ್ಣವಾಗಿ ಡಿಲೀಟ್ ಮಾಡಿದ ಸಮಂತಾ; ಇಲ್ಲಿದೆ ಸಾಕ್ಷ್ಯ
ತಿರುಪತಿಯಲ್ಲಿ ಮದುವೆ ಆಗಲಿದ್ದಾರೆ ಶ್ರೀದೇವಿ ಪುತ್ರಿ; ಮನದಾಳದ ಮಾತು ಹಂಚಿಕೊಂಡ ಜಾನ್ವಿ ಕಪೂರ್