ಪುನೀತ್​ ನಿಧನ ವಾರ್ತೆ ಕೇಳಿ ರಜನಿಕಾಂತ್​ ಪ್ರತಿಕ್ರಿಯೆ ಹೇಗಿತ್ತು? ಶಿವರಾಜ್​ಕುಮಾರ್​ ವಿವರಿಸಿದ್ದು ಹೀಗೆ

ರಜನಿಕಾಂತ್​ ಹಾಗೂ ಡಾ. ರಾಜ್​ಕುಮಾರ್​ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ರಾಜ್​ ಕುಟಂಬವನ್ನು ತುಂಬಾ ಹತ್ತಿರದಿಂದ ನೋಡಿದವರು ಅವರು. ಪುನೀತ್ ಕಂಡರೆ ರಜನಿಕಾಂತ್​ಗೆ ಎಲ್ಲಿಲ್ಲದ ಪ್ರೀತಿ.

ಪುನೀತ್​ ನಿಧನ ವಾರ್ತೆ ಕೇಳಿ ರಜನಿಕಾಂತ್​ ಪ್ರತಿಕ್ರಿಯೆ ಹೇಗಿತ್ತು? ಶಿವರಾಜ್​ಕುಮಾರ್​ ವಿವರಿಸಿದ್ದು ಹೀಗೆ
ರಜನಿ-ಶಿವರಾಜ್​ಕುಮಾರ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Nov 03, 2021 | 4:02 PM

ಪುನೀತ್​ ರಾಜ್​ಕುಮಾರ್​ ನಿಧನ ಹೊಂದಿದ್ದಾರೆ ಎನ್ನುವ ವಿಚಾರವನ್ನು ಯಾರಿಂದಲೂ ನಂಬೋಕೆ ಸಾಧ್ಯವಾಗುತ್ತಿಲ್ಲ. ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಅವರು ತೊರೆದು ಹೋಗಿದ್ದಾರೆ. ಅನೇಕ ಸ್ಟಾರ್​​ಗಳು ಕೂಡ ಅವರ ಅಂತಿಮ ದರ್ಶನ ಪಡೆದು ಹೋಗಿದ್ದಾರೆ. ಇದು ಕನಸೋ ಅಥವಾ ನನಸೋ ಎನ್ನುವ ಪ್ರಶ್ನೆ ಅವರಲ್ಲೂ ಇದೆ. ಸೂಪರ್​ಸ್ಟಾರ್​ ರಜನಿಕಾಂತ್​ ಕೂಡ ಪುನೀತ್​ ಸಾವಿನ ಸುದ್ದಿ ಕೇಳಿ ಶಾಕ್​ಗೆ ಒಳಗಾಗಿದ್ದರು. ಈ ಬಗ್ಗೆ ಶಿವರಾಜ್​ಕುಮಾರ್​ ಮಾಹಿತಿ ನೀಡಿದ್ದಾರೆ.

ರಜನಿಕಾಂತ್​ ಹಾಗೂ ಡಾ. ರಾಜ್​ಕುಮಾರ್​ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ರಾಜ್​ ಕುಟುಂಬವನ್ನು ತುಂಬಾ ಹತ್ತಿರದಿಂದ ನೋಡಿದವರು ಅವರು. ಪುನೀತ್ ಕಂಡರೆ ರಜನಿಕಾಂತ್​ಗೆ ಎಲ್ಲಿಲ್ಲದ ಪ್ರೀತಿ. ಈ ಮೊದಲು ಪುನೀತ್​ ಅವರನ್ನು ರಜನಿ ಹಾಡಿಹೊಗಳಿದ್ದರು. ಈ ವಿಡಿಯೋ ಕೂಡ ವೈರಲ್​ ಆಗಿತ್ತು. ಪುನೀತ್​ ಸಾಯುವ ದಿನ ರಜನಿಕಾಂತ್​ ಆಸ್ಪತ್ರೆಯಲ್ಲಿ ಇದ್ದರು. ರಜನಿಕಾಂತ್​ ಅವರಿಗೆ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಪುನೀತ್​ ಅಂತಿಮ ದರ್ಶನ ಪಡೆಯೋಕೆ ಅವರಿಗೆ ಬರಲು ಸಾಧ್ಯವಾಗಿರಲಿಲ್ಲ. ರಜನಿಕಾಂತ್​ ರಿಯಾಕ್ಷನ್​ ಹೇಗಿತ್ತು ಎಂಬುದನ್ನು ಶಿವರಾಜ್​ಕುಮಾರ್​ ವಿವರಿಸಿದ್ದಾರೆ.

‘ರಜನಿಕಾಂತ್​ ಈಗಷ್ಟೇ ಆಸ್ಪತ್ರೆಯಿಂದ ಬಂದಿದ್ದಾರೆ. ಅವರ ಮಗಳು, ಪತ್ನಿ ಕರೆ ಮಾಡಿದ್ದರು. ಅವರಿಗೆ ನಂಬೋಕೆ ಆಗ್ತಿಲ್ಲ. ಅವರು ಚಿಕ್ಕ ವಯಸ್ಸಿಂದ ನನ್ನ ತಮ್ಮನನ್ನು ನೋಡಿಕೊಂಡು ಬಂದಿದ್ದಾರೆ. ರಜನಿಕಾಂತ್​ ಅವರ ಜತೆ ಮಾತನಾಡೋಕೆ ಆಗಿಲ್ಲ. ಈ ವಿಚಾರ ಕೇಳಿ ರಜನಿಕಾಂತ್​ ತುಂಬಾನೇ ನೊಂದುಕೊಂಡರಂತೆ. ಅಪ್ಪು ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇತ್ತು. ಪುನೀತ್​ ಮಗು ಇದ್ದಾಗಿನಿಂದಲೂ ಅವರು ನೋಡಿದ್ದರು. ಹೀಗಾಗಿ ನೋವು ಜಾಸ್ತಿ’ ಎಂದಿದ್ದಾರೆ ಶಿವಣ್ಣ.

‘ದಾದಾಸಾಹೇಬ್​ ಫಾಲ್ಕೆ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ರಜನಿಕಾಂತ್​ ಅವರು ತಮ್ಮ ಬೆಂಗಳೂರಿನ ಗೆಳಯ ರಾಜ್​ ಬಹದ್ದೂರ್​ ಅವರನ್ನು ನೆನಪು ಮಾಡಿಕೊಂಡಿದ್ದರು. ತಮ್ಮ ಗುರು ಕೆ. ಬಾಲಚಂದರ್​ ಹಾಗೂ ಅಭಿಮಾನಿಗಳಿಗೂ ಧನ್ಯವಾದ ಅರ್ಪಿಸಿದ್ದರು. ಪ್ರಸ್ತುತ ರಜನಿ ಅಭಿನಯದ ‘ಅಣ್ಣಾತೆ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ನ.4ರಂದು ಈ ಚಿತ್ರ ರಿಲೀಸ್​ ಆಗಲಿದೆ.

ಇದನ್ನೂ ಓದಿ: ಕೆನ್ನೆಗೆ ಬಾರಿಸಿ ಸುದ್ದಿಯಾದ ಪ್ರಕಾಶ್ ರೈ; ನಟನ ಬೆಂಬಲಕ್ಕೆ ನಿಂತ ದಕ್ಷಿಣ ಭಾರತದ ಮಂದಿ

Rajinikanth: ರಜನಿಕಾಂತ್​ಗೆ ಹೃದಯದ ಸಮಸ್ಯೆ; ಆಸ್ಪತ್ರೆಗೆ ದಾಖಲಾಗಿರುವ ತಲೈವಾ ಆರೋಗ್ಯ ಸ್ಥಿತಿ ಈಗ ಹೇಗಿದೆ?

Published On - 2:42 pm, Wed, 3 November 21

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ