Bhajarangi 2 Movie Review: ಫ್ಯಾಂಟಸಿ ಲೋಕದ ‘ಭಜರಂಗಿ 2’ ಕಥೆಯಲ್ಲಿ ಶಿವಣ್ಣನ ಎನರ್ಜಿಯೇ ಹೈಲೈಟ್

ಭಜರಂಗಿ 2 ಸಿನಿಮಾ ವಿಮರ್ಶೆ: ‘ಭಜರಂಗಿ’, ‘ವಜ್ರಕಾಯ’ ನಂತರದಲ್ಲಿ ನಟ ಶಿವರಾಜ್​ಕುಮಾರ್​ ಹಾಗೂ ನಿರ್ದೇಶಕ ಎ. ಹರ್ಷ ‘ಭಜರಂಗಿ 2’ಗಾಗಿ ಮತ್ತೆ ಒಂದಾಗಿದ್ದಾರೆ. ಈ ಸಿನಿಮಾ ಮೂಲಕ ಹರ್ಷ ಪ್ರೇಕ್ಷಕರ ಎದುರು ಮತ್ತೊಂದು ಫ್ಯಾಂಟಸಿ ಜಗತ್ತನ್ನು ತೆರೆದಿಟ್ಟಿದ್ದಾರೆ.

Bhajarangi 2 Movie Review: ಫ್ಯಾಂಟಸಿ ಲೋಕದ ‘ಭಜರಂಗಿ 2’ ಕಥೆಯಲ್ಲಿ ಶಿವಣ್ಣನ ಎನರ್ಜಿಯೇ ಹೈಲೈಟ್
ಶಿವರಾಜ್​ಕುಮಾರ್​
Follow us
ರಾಜೇಶ್ ದುಗ್ಗುಮನೆ
|

Updated on:Oct 29, 2021 | 10:32 AM

ಸಿನಿಮಾ: ಭಜರಂಗಿ 2 ಪಾತ್ರವರ್ಗ: ಶಿವರಾಜ್​ಕುಮಾರ್​, ಭಾವನಾ ಮೆನನ್​, ಶ್ರುತಿ, ಭಜರಂಗಿ ಲೋಕಿ, ಶಿವರಾಜ್​ ಕೆ.ಆರ್​. ಪೇಟೆ, ಚೆಲುವ ರಾಜು ಮೊದಲಾದವರು. ನಿರ್ದೇಶನ: ಎ. ಹರ್ಷ​ ನಿರ್ಮಾಣ: ಜಯಣ್ಣ-ಭೋಗೆಂದ್ರ ಸ್ಟಾರ್​:  3/5

‘ಭಜರಂಗಿ’, ‘ವಜ್ರಕಾಯ’ ನಂತರದಲ್ಲಿ ನಟ ಶಿವರಾಜ್​ಕುಮಾರ್​ ಹಾಗೂ ನಿರ್ದೇಶಕ ಎ. ಹರ್ಷ ‘ಭಜರಂಗಿ 2’ಗಾಗಿ ಮತ್ತೆ ಒಂದಾಗಿದ್ದಾರೆ. ಈ ಸಿನಿಮಾ ಮೂಲಕ ಹರ್ಷ ಪ್ರೇಕ್ಷಕರ ಎದುರು ಮತ್ತೊಂದು ಫ್ಯಾಂಟಸಿ ಜಗತ್ತನ್ನು ತೆರೆದಿಟ್ಟಿದ್ದಾರೆ. ಮಂತ್ರ-ತಂತ್ರ, ಧನ್ವಂತರಿ, ಪುನರ್ಜನ್ಮ ಹೀಗೆ ನಾನಾ ವಿಚಾರಗಳನ್ನು ಹೇಳುವುದರ ಜತೆಗೆ ಸಮಾಜಕ್ಕೆ ಒಂದೊಳ್ಳೆಯ ಸಂದೇಶ ರವಾನಿಸುವ ಪ್ರಯತ್ನ ಮಾಡಿದ್ದಾರೆ. ಹಾಗಾದರೆ, ‘ಭಜರಂಗಿ 2’ ಸಿನಿಮಾದಲ್ಲಿ ಏನೆಲ್ಲ ಇದೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಕಥೆಯ ಒಂದೆಳೆ

ವಿರಾಜ್​ ಅನೇಕ ವರ್ಷಗಳ ನಂತರ ಕೊಂಪೆಯಲ್ಲಿರುವ ಅರವಳ್ಳಿ ಎಂಬ ಊರಿಗೆ ಅಕ್ಕ ಅಲಮೇಲಮ್ಮನನ್ನು (ಶ್ರುತಿ) ನೋಡಲು ಬರುತ್ತಾನೆ. ಈತನಿಗೆ ಪ್ರಾಣಿಗಳೆಂದರೆ ಪ್ರೀತಿ. ಈತ ದಾನಿ. ಆದರೆ, ಆತನ ಅಕ್ಕ ಆ ರೀತಿ ಅಲ್ಲ. ಆಕೆ, ಆ ಊರಿನಲ್ಲಿ ಬಡ್ಡಿ ವ್ಯವಹಾರ ಮಾಡುತ್ತಿರುತ್ತಾಳೆ. ಸಮಯಕ್ಕೆ ಸರಿಯಾಗಿ ಹಣ ನೀಡದವರಿಗೆ ಕಿಂಚಿತ್ತೂ ದಯೆ ತೋರದೆ ಹೊಡೆಸುತ್ತಾಳೆ. ಆಗ ವಿರಾಜ್​ ಅಕ್ಕನ ಮನಸ್ಸನ್ನು ಬದಲಾಯಿಸುತ್ತಾನೆ. ಇದೇ ವೇಳೆ ಚಿಣ್​ಮಿಣಕಿ (ಭಾವನಾ) ಜತೆ ವಿರಾಜ್​ ಲವ್​ಸ್ಟೋರಿ ಶುರುವಾಗುತ್ತದೆ. ಎಲ್ಲವೂ ಸರಿ ಆಯಿತು ಎನ್ನುವಾಗಲೇ ಇವರೆಲ್ಲರ ಬಾಳಲ್ಲಿ ಒಂದು ರಾಕ್ಷಸನ ಎಂಟ್ರಿ ಆಗುತ್ತದೆ. ನಂತರ ಏನಾಗುತ್ತದೆ ಎಂದು ತಿಳಿದುಕೊಳ್ಳುವ ಹಂಬಲದಲ್ಲಿರುವ ಪ್ರೇಕ್ಷನಿಗೆ ನಿರ್ದೇಶಕ ಎ. ಹರ್ಷ ಮತ್ತೊಂದು ಕಥೆಯನ್ನೂ ತೋರಿಸುತ್ತಾರೆ.

ಧನ್ವಂತರಿಯ ಕಥೆ: 

ಇಡೀ ಸಿನಿಮಾದ ಕಥೆ ಆಯುರ್ವೇದದ ಮೇಲೆ ನಿಂತಿದೆ. ಆಯುರ್ವೇದವರು ಧನ್ವಂತರಿಯನ್ನು ಮೂಲ ದೇವರು ಎಂದು ಪರಿಗಣಿಸುತ್ತಾರೆ. ಸಮುದ್ರ ಮಥನದ ಸಂದರ್ಭದಲ್ಲಿ ಎಲ್ಲರಿಗೂ ಅಮೃತ ನೀಡಿದ್ದು ಧನ್ವಂತರಿ ಮಹಾವಿಷ್ಣು. ಇದರ ಉಲ್ಲೇಖವೂ ಸಿನಿಮಾದಲ್ಲಿ ಆಗುತ್ತದೆ. ಹೀಗಾಗಿ ಇಡೀ ಸಿನಿಮಾದ ಕಥೆಯ ಜೀವಾಳ ಧನ್ವಂತರಿಯ ಮೇಲೆಯೇ ಇದೆ.

ಏನೆಲ್ಲ ಸರ್​ಪ್ರೈಸ್​

ಟ್ರೇಲರ್​ನಲ್ಲಿ ಶಿವರಾಜ್​ಕುಮಾರ್​ ಅವರ ರಗಡ್​ ಲುಕ್​ ಮಾತ್ರ ಅನಾವರಣಗೊಂಡಿತ್ತು. ಆದರೆ, ಸಿನಿಮಾ ಆರಂಭ ಆಗೋದೇ ಬೇರೆಯದೇ ರೀತಿಯಲ್ಲಿ. ಇದು ಪ್ರೇಕ್ಷಕರಿಗೆ ಕೊಂಚ ಅಚ್ಚರಿ ಎನಿಸಬಹುದು. ಮಧ್ಯಂತರದಲ್ಲಿ ಬರುವ ಒಂದು ಟ್ವಿಸ್ಟ್​ ಪ್ರೇಕ್ಷಕರಿಗೆ ಸರ್​ಪ್ರೈಸ್​ ಎನಿಸಬಹುದು.

ಗಮನ ಸೆಳೆಯುವ ಸಂಗೀತ

‘ಭಜರಂಗಿ 2’ ಸಿನಿಮಾದ ಹಾಡುಗಳು ರಿಲೀಸ್​ ಆಗಿ ಈಗಾಗಲೇ ಮೆಚ್ಚುಗೆ ಪಡೆದುಕೊಂಡಿವೆ. ‘ಭಜರೆ ಭಜರೆ ಭಜರಂಗಿ..’, ‘ನೀ ಸಿಗೋವರೆಗೂ..’, ‘ರೇ ರೇ ಭಜರಂಗಿ’  ಹಾಡುಗಳು ಚಿತ್ರಮಂದಿರದಲ್ಲಿ ಪ್ರೇಕ್ಷಕರನ್ನು ಕಾಡುತ್ತದೆ. , ‘ನೀ ಸಿಗೋವರೆಗೂ..’ ಹಾಡಿನ ಮೇಕಿಂಗ್​ ಗಮನ ಸೆಳೆಯುತ್ತದೆ.

ಶಿವಣ್ಣನ ಎನರ್ಜಿ

ಶಿವರಾಜ್​ಕುಮಾರ್​ ವಯಸ್ಸು 60ರ ಸಮೀಪವಿದೆ. ಆದರೆ, 30ರ ಆಸುಪಾಸಿನ ವ್ಯಕ್ತಿಯ ಎನರ್ಜಿ ಅವರಲ್ಲಿದೆ. ಫೈಟಿಂಗ್​ ದೃಶ್ಯಗಳನ್ನು ಶ್ರಮವಿಲ್ಲದೆ, ಅವರು ಲೀಲಾಜಾಲವಾಗಿ ಮಾಡುತ್ತಿದ್ದಾರೇನೋ ಎನಿಸುತ್ತದೆ. ಅವರ ಎನರ್ಜಿ ಸಿನಿಮಾಗೆ ಬೂಸ್ಟ್​ ನೀಡಿದೆ. ಅನೇಕ ದೃಶ್ಯಗಳಲ್ಲಿ ಅವರು ಶಿಳ್ಳೆ ಗಿಟ್ಟಿಸಿಕೊಳ್ಳುತ್ತಾರೆ.

ಗಮನ ಸೆಳೆಯುವ ಪಾತ್ರ​ಗಳು..

ನಿರ್ದೇಶಕ ಎ. ಹರ್ಷ ಅವರು ವಿಲನ್​ಗಳ ಆಯ್ಕೆಯಲ್ಲಿ ಗೆದ್ದಿದ್ದಾರೆ. ‘ಭಜರಂಗಿ 2’ ಸಿನಿಮಾ ಮೂಲಕ ಹೊಸ ವಿಲನ್​ಗಳ ಕೊಡುಗೆ ಸ್ಯಾಂಡಲ್​ವುಡ್​ಗೆ ಆಗಿದೆ. ಸಿನಿಮಾದ ಖಳ ಆರಕ (ಚೆಲುವರಾಜ್​​) ಸಾಕಷ್ಟು ಗಮನ ಸೆಳೆಯುತ್ತಾರೆ. ವಿಲನ್​ ಆಗಿ  ಕೆಲ ದೃಶ್ಯಗಳಲ್ಲಿ ಅವರು ಆವರಿಸಿಕೊಳ್ಳುತ್ತಾರೆ. ಅನುಭವಿ ನಟನಂತೆ ಅವರು ಪಾತ್ರ ನಿರ್ವಹಿಸಿದ್ದಾರೆ. ಆರಕನ ತಂದೆ ಜಾಗ್ರವ ಪಾತ್ರಧಾರಿ ಪ್ರಸನ್ನ ಕೂಡ ಭರವಸೆ ಮೂಡಿಸುತ್ತಾರೆ. ಗುರೂಜಿ ಪಾತ್ರ ಮಾಡಿದ ಗಿರೀಶ್​ ಅವರು ಹೆಚ್ಚು ಅಂಕ ಗಿಟ್ಟಿಸಿಕೊಳ್ಳುತ್ತಾರೆ. ಶ್ರುತಿ ಅವರಿಗೆ ನೀಡಿದ ಪಾತ್ರವನ್ನು ಇನ್ನೂ ಗಟ್ಟಿಗೊಳಿಸಬಹುದಿತ್ತು. ಭಾವನಾ ಹಾಗೂ ಮೊದಲಾದ ಕಲಾವಿದರು ಕೆಲವೇ ಹೊತ್ತು ತೆರೆ ಮೇಲೆ ಕಾಣಿಸಿಕೊಂಡರೂ ಗಮನ ಸೆಳೆಯುತ್ತಾರೆ. ಕುರಿ ಪ್ರತಾಪ್​ ಪಾತ್ರ ಅಲ್ಲೊಂದು, ಇಲ್ಲೊಂದು ನಗುವಿನ ಕಚಗುಳಿ ಇಡುತ್ತದೆ. ಭಜರಂಗಿ ಲೋಕಿ ಅವರ ಕಟ್ಟು ಮಸ್ತಾದ ದೇಹ, ನಟನೆ ಗಮನ ಸೆಳೆಯುತ್ತದೆ.

ಕನ್​​ಫ್ಯೂಸ್​ ಆಗಬಹುದು ಹುಶಾರ್​

ಸಿನಿಮಾದ ಕಥೆ ಒಮ್ಮೆ ಪ್ರಸ್ತುತದಲ್ಲಿದ್ದರೆ, ಮತ್ತೊಮ್ಮೆ ಭೂತಕಾಲಕ್ಕೆ ಹೋಗುತ್ತದೆ. ಸಾಕಷ್ಟು ಫ್ಲ್ಯಾಶ್​ಬ್ಯಾಕ್​ಗಳು ಸಿನಿಮಾದಲ್ಲಿ ಬರುತ್ತವೆ. ಇದರಿಂದ ಪ್ರೇಕ್ಷಕರಿಗೆ ಕೊಂಚ ಗೊಂದಲ ಎನಿಸಬಹುದು. ನಿರ್ದೇಶಕರು ಈ ವಿಚಾರದಲ್ಲಿ ಹೆಚ್ಚು ಗಮನ ಹರಿಸಿ, ಈ ಗೊಂದಲವನ್ನು ಪರಿಹರಿಸಬಹುದಿತ್ತು. ಮೊದಲಾರ್ಧದಲ್ಲಿ ಕಾಡುವ ಕೆಲ ಪ್ರಶ್ನೆಗಳಿಗೆ ದ್ವಿತೀಯಾರ್ಧದಲ್ಲಿ ಉತ್ತರ ನೀಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಆದರೆ, ಕೆಲವು ವಿಚಾರಗಳಿಗೆ ಜಸ್ಟಿಫಿಕೇಶನ್​ ಸಿಕ್ಕಿಲ್ಲ. ಕಥೆ ಯಾವ ಘಟ್ಟದಲ್ಲಿ ಸಾಗುತ್ತಿದೆ ಎನ್ನುವ ಗೊಂದಲವೂ ಮೂಡುತ್ತದೆ.

ಭಜರಂಗಿಗೆ ಇಲ್ಲ ವೇಗ

ಮೊದಲಾರ್ಧ ಕಡಿಮೆ ಸಮಯ ಇದೆ. ಹೀಗಾಗಿ, ಕಥೆ ವೇಗ ಪಡೆದುಕೊಳ್ಳುತ್ತದೆ. ಆದರೆ, ದ್ವಿತೀಯಾರ್ಧದಲ್ಲಿ ಪ್ರೇಕ್ಷಕರಿಗೆ ದಣಿವಾದಂತೆ ಅನಿಸಬಹುದು. ಇನ್ನು, ದ್ವಿತೀಯಾರ್ಧದಲ್ಲಿ ಕಥೆ ಒಂದೇ ಕಡೆ ಗಿರಕಿ ಹೊಡೆಯುವುದರಿಂದ ತುಂಬಾನೇ ನಿಧಾನವಾಗಿ ಸಾಗುತ್ತದೆ. ಇದು ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತದೆ. ಕಥೆ ಎಲ್ಲೆಲ್ಲೋ ಸುತ್ತಾಡುತ್ತದೆ. ಈ ಸುತ್ತಾಟದಲ್ಲಿ ಪ್ರೇಕ್ಷಕನಿಗೆ ದಣಿವಾಗುತ್ತದೆ.

ಮತ್ತೇನೆಲ್ಲ ಇದೆ?

‘ಭಜರಂಗಿ 2’ ಸಿನಿಮಾದ ಸೆಟ್​ಗಳು ಗಮನ ಸೆಳೆಯುತ್ತವೆ. ಆರಕನ ಆಸ್ಥಾನದ ಸೆಟ್​ ಅದ್ಭುತವಾಗಿ ಮೂಡಿ ಬಂದಿದೆ. ಸ್ವಾಮಿ ಜೆ ಛಾಯಾಗ್ರಹಣ ಅದ್ಭುತವಾಗಿದೆ. ಕ್ಲೈಮ್ಯಾಕ್ಸ್​ನಲ್ಲಿ ಶಿವಣ್ಣನ ಡೈಲಾಗ್​ ಡೆಲಿವರಿ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಪ್ರೀ ಕ್ಲೈಮ್ಯಾಕ್ಸ್​ನಲ್ಲಿ ಬರುವ ಆತ್ಮಗಳ ದೃಶ್ಯ ನೋಡಿ ಮೈ ಒಮ್ಮೆ ಜುಮ್​ ಎನ್ನಬಹುದು. ವೈದ್ಯಕೀಯ ಕ್ಷೇತ್ರದ ಬಗ್ಗೆ ಸಿನಿಮಾದಲ್ಲಿ ಒಂದೊಳ್ಳೆ ಸಂದೇಶ ಹೇಳುವ ಪ್ರಯತ್ನ ನಡೆದಿದೆ. ರಘು ನಿಡುವಳ್ಳಿ ಅವರ ಹೆಚ್ಚು ಸಂಭಾಷಣೆ ಅಂಕಗಿಟ್ಟಿಸಿಕೊಳ್ಳುತ್ತದೆ.

ಇದನ್ನೂ ಓದಿ: Bhajarangi 2 First Half Review: ಶಿವರಾಜ್​ಕುಮಾರ್​ ನಟನೆಯ ‘ಭಜರಂಗಿ 2’ ಮೊದಲಾರ್ಧದಲ್ಲಿ ಏನೆಲ್ಲ ಇದೆ? ಇಲ್ಲಿದೆ ಉತ್ತರ

Published On - 10:02 am, Fri, 29 October 21

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ