Bhajarangi 2 First Half Review: ಶಿವರಾಜ್ಕುಮಾರ್ ನಟನೆಯ ‘ಭಜರಂಗಿ 2’ ಮೊದಲಾರ್ಧದಲ್ಲಿ ಏನೆಲ್ಲ ಇದೆ? ಇಲ್ಲಿದೆ ಉತ್ತರ
ಭಜರಂಗಿ 2 ಸಿನಿಮಾ ವಿಮರ್ಶೆ: ‘ಭಜರಂಗಿ 2’ ಚಿತ್ರದ ಮೊದಲಾರ್ಧ ಸಖತ್ ಥ್ರಿಲ್ಲಿಂಗ್ ಆಗಿದ್ದು, ಎಲ್ಲೂ ಬೋರ್ ಬರಿಸದೇ ಕತೆ ಸಾಗುತ್ತದೆ. ಮೊದಲಾರ್ಧದಲ್ಲಿ ಏನೆಲ್ಲಾ ಇದೆ? ಇಲ್ಲಿದೆ ಮಾಹಿತಿ.
ಶಿವರಾಜ್ಕುಮಾರ್ ನಟನೆಯ ‘ಭಜರಂಗಿ 2’ ಸಿನಿಮಾ ರಿಲೀಸ್ಗೆ ಕೌಂಟ್ಡೌನ್ ಶುರುವಾಗಿದೆ. ಈ ಸಿನಿಮಾ ರಾಜ್ಯಾದ್ಯಂತ ಇಂದು (ಅಕ್ಟೋಬರ್ 29) ಭರ್ಜರಿಯಾಗಿ ರಿಲೀಸ್ ಆಗಿದೆ. ರಾಜ್ಯಾದ್ಯಂತ ಬರೋಬ್ಬರಿ 300 ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನ ಜೆ.ಪಿ. ನಗರದ ಸಿದ್ದೇಶ್ವರ ಚಿತ್ರಮಂದಿರ ಹಾಗು ಗೌಡನ ಪಾಳ್ಯದ ಶ್ರೀನಿವಾಸ ಥಿಯೇಟರ್ನಲ್ಲಿ ಮುಂಜಾನೆ 5 ಘಂಟೆಗೆ ಸಿನಿಮಾ ಪ್ರದರ್ಶನ ಕಂಡಿದೆ. ಅಭಿಮಾನಿಗಳು ಶಿವಣ್ಣನ ಕಟೌಟ್ಗೆ ಹಾಲಿನ ಅಭಿಷೇಕ ಮಾಡಿದ್ದಾರೆ.
ಹಲವು ಕಾರಣಗಳಿಗಾಗಿ ‘ಭಜರಂಗಿ 2’ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ. ಸೂಪರ್ ನ್ಯಾಚುರಲ್ ಕಥೆ, ಬೃಹತ್ ಸೆಟ್ಗಳು, ಕಲಾವಿದರ ಭಿನ್ನ ವಿಭಿನ್ನ ಗೆಟಪ್ಗಳು ಗಮನ ಸೆಳೆದಿತ್ತು. ಶಿವರಾಜ್ಕುಮಾರ್ ಮತ್ತು ನಿರ್ದೇಶಕ ಎ. ಹರ್ಷ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ಮೂರನೇ ಸಿನಿಮಾ ಇದಾಗಿದ್ದು, ಸಾಕಷ್ಟು ಹೈಪ್ ಸೃಷ್ಟಿ ಮಾಡಿದೆ. ಹಾಗಾದರೆ ಸಿನಿಮಾದ ಮೊದಲಾರ್ಧ ಹೇಗಿದೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
- ಶಿವರಾಜ್ ಕುಮಾರ್ ಅವರು ಟ್ರೈಲರ್ನಲ್ಲಿ ಕಾಣಿಸಿಕೊಂಡಂತೆ ಮೊದಲಾರ್ಧದಲ್ಲಿ ಕಾಣಿಸಿಕೊಂಡಿಲ್ಲ. ಅವರ ಪಾತ್ರ ಸಖತ್ ಸರ್ಪ್ರೈಸಿಂಗ್ ಆಗಿದೆ.
- ಶಿವರಾಜ್ ಕುಮಾರ್ ಸಿನಿಮಾ ಎಂದರೆ ಆಕ್ಷನ್ ಮಾಮೂಲಿ. ಆದರೆ ವಿಶೇಷ ಎಂದರೆ ಇಲ್ಲಿ ಮೊದಲಾರ್ಧದಲ್ಲಿ ಯಾವುದೇ ಆಕ್ಷನ್ ದೃಶ್ಯಗಳಿಲ್ಲ. ಎಲ್ಲೂ ಬೋರ್ ಬರಿಸದೇ ಬೇರೆಯದೇ ರೀತಿಯಲ್ಲಿ ಕತೆ ಸಾಗುತ್ತದೆ.
- ಭಾವನಾ ಮೆನನ್ ಹಾಗೂ ಶಿವರಾಜ್ ಕುಮಾರ್ ಲವ್ ಸ್ಟೋರಿಯ ಎಳೆ ಮೊದಲಾರ್ಧದಲ್ಲೇ ಇದ್ದು, ವೀಕ್ಷಕರ ಮನಸೂರೆಗೊಳ್ಳೋದು ಪಕ್ಕಾ.
- ಮಾಟ ಮಂತ್ರ ಮೊದಲಾದವುಗಳು ಮೊದಲಾರ್ಧದಲ್ಲಿ ಹೆಚ್ಚಾಗಿ ಪ್ರಸ್ತಾಪವಾಗಿದ್ದು, ನೋಡುಗರಿಗೆ ವಾವ್ ಅನ್ನಿಸುವಂತಿದೆ.
- ‘ನೀ ಸಿಗೋವರೆಗೂ’ ಹಾಡು ಮೊದಲಾರ್ಧದಲ್ಲೇ ಇದ್ದು, ಬಹಳ ಭಿನ್ನವಾದ, ಸುಂದರವಾದ ಮೇಕಿಂಗ್ನಿಂದ ಗಮನ ಸೆಳೆಯುತ್ತದೆ.
- ಮೊದಲಾರ್ಧದಲ್ಲಿ ಅಕ್ಕ, ತಮ್ಮನ ಸೆಂಟಿಮೆಂಟ್ ಹೈಲೈಟ್ ಆಗಿದ್ದು, ವೀಕ್ಷಕರಿಗೆ ಇಷ್ಟವಾಗೋದು ಖಂಡಿತಾ.
- ಮಧ್ಯಂತರದಲ್ಲಿ ಯಾರೂ ಊಹಿಸಿರದ ಟ್ವಿಸ್ಟ್ ಇದ್ದು, ಮುಂದೇನಾಗಲಿದೆ ಎಂಬ ಕುತೂಹಲವನ್ನು ನೋಡುಗರಲ್ಲಿ ಮೂಡಿಸುತ್ತದೆ. ಇದು ಚಿತ್ರದ ಬಹುದೊಡ್ಡ ಪ್ಲಸ್ ಪಾಯಿಂಟ್.
- ಮೊದಲಾರ್ಧವು ಎಲ್ಲೂ ಬೋರ್ ಬರಿಸದೇ, ವೇಗವಾಗಿ ಸಾಗುತ್ತದೆ.
ಇದನ್ನೂ ಓದಿ: ಶಿವರಾಜ್ಕುಮಾರ್ ಕಟೌಟ್, ಹಾಲಿನ ಅಭಿಷೇಕ, ಮುಂಜಾನೆ 5 ಗಂಟೆ ಶೋ; ‘ಭಜರಂಗಿ 2’ ರಿಲೀಸ್ಗೆ ಕೌಂಟ್ಡೌನ್
Published On - 6:29 am, Fri, 29 October 21