Bhajarangi 2: ‘ಭಜರಂಗಿ 2’ ಹಬ್ಬ; ಚಿತ್ರಮಂದಿರಗಳ ಮುಂದೆ ದೀಪಾವಳಿ ಆಚರಿಸಿದ ಶಿವರಾಜ್ಕುಮಾರ್ ಫ್ಯಾನ್ಸ್
Shivarajkumar: ‘ಭಜರಂಗಿ 2’ ಚಿತ್ರವನ್ನು ಶಿವರಾಜ್ಕುಮಾರ್ ಫ್ಯಾನ್ಸ್ ಭರ್ಜರಿಯಾಗಿ ಬರಮಾಡಿಕೊಂಡಿದ್ದಾರೆ. ಬೆಂಗಳೂರಿನ ಜೆಪಿ ನಗರದ ಸಿದ್ದೇಶ್ವರ ಚಿತ್ರಮಂದಿರ, ಚಿತ್ರದುರ್ಗದ ಪ್ರಸನ್ನ ಥಿಯೇಟರ್, ದಾವಣಗೆರೆಯ ವಸಂತಾ ಟಾಕೀಸ್ ಸೇರಿದಂತೆ ಅನೇಕ ಕಡೆಗಳಲ್ಲಿ ಅಭಿಮಾನಿಗಳ ಸಂಭ್ರಮ ಜೋರಾಗಿದೆ.
ಶಿವರಾಜ್ಕುಮಾರ್ ಅಭಿನಯದ ‘ಭಜರಂಗಿ 2’ ಸಿನಿಮಾ ಅದ್ದೂರಿಯಾಗಿ ಇಂದು (ಅ.29) ಬಿಡುಗಡೆ ಆಗಿದೆ. ಸೂರ್ಯೋದಯಕ್ಕೂ ಮುನ್ನವೇ ಕೆಲವು ಕಡೆಗಳಲ್ಲಿ ಸಿನಿಮಾ ಪ್ರದರ್ಶನ ಆರಂಭ ಆಗಿದೆ. ಮುಂಜಾನೆ 5 ಗಂಟೆಗೆ ಭಜರಂಗಿಯನ್ನು ಬರಮಾಡಿಕೊಳ್ಳಲು ನಿನ್ನೆ ರಾತ್ರಿಯಿಂದಲೇ ಅಭಿಮಾನಿಗಳು ತಯಾರಿ ಮಾಡಿಕೊಂಡಿದ್ದರು. ಥಿಯೇಟರ್ ಮುಂಭಾಗದಲ್ಲಿ ದೊಡ್ಡ ದೊಡ್ಡ ಕಟೌಟ್ಗಳು ರಾರಾಜಿಸಿದ್ದವು. ಇಂದು ಬೆಳಗ್ಗೆ ಫ್ಯಾನ್ಸ್ ಪಾಲಿಗೆ ನಿಜವಾದ ದೀಪಾವಳಿ ಬಂದಿದೆ. ಪಟಾಕಿ ಸಿಡಿಸಿ, ಕುಂಬಳಕಾಯಿ ಒಡೆದು, ಹಾಲಿನ ಅಭಿಷೇಕ ಮಾಡಿ, ಜಾನಪದ ಕಲಾ ತಂಡಗಳ ಜೊತೆ ಡ್ಯಾನ್ಸ್ ಮಾಡಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ಬೆಂಗಳೂರಿನ ಜೆಪಿ ನಗರದ ಸಿದ್ದೇಶ್ವರ ಚಿತ್ರಮಂದಿರ, ಚಿತ್ರದುರ್ಗದ ಪ್ರಸನ್ನ ಥಿಯೇಟರ್, ದಾವಣಗೆರೆಯ ವಸಂತಾ ಟಾಕೀಸ್ ಸೇರಿದಂತೆ ಅನೇಕ ಕಡೆಗಳಲ್ಲಿ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಈ ಚಿತ್ರಕ್ಕೆ ಎ. ಹರ್ಷ ನಿರ್ದೇಶನ ಮಾಡಿದ್ದಾರೆ. ಶ್ರುತಿ, ಭಾವನಾ ಮೆನನ್, ಭಜರಂಗಿ ಲೋಕಿ ಮುಂತಾದವರು ನಟಿಸಿದ್ದಾರೆ.
ಇದನ್ನೂ ಓದಿ:
Bhajarangi 2: ಶಿವಣ್ಣನ ಭಜರಂಗಿ 2 ಚಿತ್ರಕ್ಕೆ ಅಲ್ಲು ಅರ್ಜುನ್ ವಿಶ್; ವಿಡಿಯೋ ವೈರಲ್