AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೀನಾ ಕಮ್ಯುನಿಸ್ಟ್ ಸರ್ಕಾರದ ನಿರಂತರ ಪ್ರಹಾರಗಳ ಹೊರತಾಗಿಯೂ ಬಿಸಿನೆಸ್​​  ಟೈಕೂನ್ ಜ್ಯಾಕ್ ಮಾ ಎದೆಗುಂದಿದಂತಿಲ್ಲ!

ಚೀನಾ ಕಮ್ಯುನಿಸ್ಟ್ ಸರ್ಕಾರದ ನಿರಂತರ ಪ್ರಹಾರಗಳ ಹೊರತಾಗಿಯೂ ಬಿಸಿನೆಸ್​​  ಟೈಕೂನ್ ಜ್ಯಾಕ್ ಮಾ ಎದೆಗುಂದಿದಂತಿಲ್ಲ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Oct 28, 2021 | 9:14 PM

Share

ಸರ್ಕಾರದ ಪಾಲಿಸಿಗಳನ್ನು ಈ ಚಾಣಾಕ್ಷ ಬಿಸಿನೆಸ್​​​ಮನ್ ನಿರಂತರವಾಗಿ ಟೀಕಿಸುತ್ತಿದ್ದಾರೆ. ಝಿ ಜಿನ್​ಪಿಂಗ್ ಅವರಿಗೆ ಮಾ ಅವರ ಟೀಕೆಗಳು ಸರಿಯೆನಿಸುತ್ತಿಲ್ಲ, ಹಾಗಾಗಿ ಅವರನ್ನು ಟಾರ್ಗೆಟ್ ಮಾಡಿದ್ದಾರೆ.

ಚೀನಾದ ಬಿಸಿನೆಸ್ ಟೈಕೂನ್ ಮತ್ತು ವಿಶ್ವದ ಆಗರ್ಭ ಶ್ರೀಮಂತರಲ್ಲಿ ಒಬ್ಬರೆನಿಸಿಕೊಂಡಿರುವ ಜ್ಯಾಕ್ ಮಾ ಕೇವಲ 55 ನೇ ವಯಸ್ಸಿನಲ್ಲಿ ತಮ್ಮ ಬಿಸಿನೆಸ್ ಸಾಮ್ರಾಜ್ಯದ ಅತಿದೊಡ್ಡ ಮಾತ್ರವಲ್ಲದೆ ಈ-ಕಾಮರ್ಸ್ನ ದೈತ್ಯ ಕಂಪನಿ ಅಲಿಬಾಬಾದ ಚೇರ್ಮನ್ ಹುದ್ದೆಯನ್ನು ತ್ಯಜಿಸಿ ಅದರ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಿಕೊಟ್ಟು, ಅಂತಿಮ ದಿನಗಳನ್ನು ಆಫೀಸಿನ ನನ್ನ ಕ್ಯಾಬಿನ್ ಬದಲು ಸುಂದರವಾದ ಬೀಚ್ಗಳಲ್ಲಿ ಕಳೆಯಲಿಚ್ಛಿಸುತ್ತೇನೆ ಅಂತ ಹೇಳಿದಾಗ, ಅವರಿಗೆ ಅವ್ಯಾಹತವಾಗಿ ಕಿರುಕುಳ ನೀಡುತ್ತಿರುವ ಚೀನಾದ ಕಮ್ಯುನಿಸ್ಟ್ ಸರ್ಕಾರದ ವಿರುದ್ಧ ಸೋಲೊಪ್ಪಿಕೊಂಡಿದ್ದಾರೆ ಅಂತಲೇ ಎಲ್ಲರೂ ಭಾವಿಸಿದ್ದರು. ಆದರೆ ಅಂಥದ್ದೇನೂ ಆಗಿಲ್ಲ. ಚೀನಾ ಸರ್ಕಾರ ಅವರಿಗೆ ಒಂದಾದ ನಂತರ ಒಂದು ಹೊಡೆತ ನೀಡುತ್ತಿದ್ದರೂ ಅವರು ಎದೆಗುಂದಿಲ್ಲ. ಸರ್ಕಾರದ ಪಾಲಿಸಿಗಳನ್ನು ಈ ಚಾಣಾಕ್ಷ ಬಿಸಿನೆಸ್​​​ಮನ್ ನಿರಂತರವಾಗಿ ಟೀಕಿಸುತ್ತಿದ್ದಾರೆ. ಝಿ ಜಿನ್​ಪಿಂಗ್ ಅವರಿಗೆ ಮಾ ಅವರ ಟೀಕೆಗಳು ಸರಿಯೆನಿಸುತ್ತಿಲ್ಲ, ಹಾಗಾಗಿ ಅವರನ್ನು ಟಾರ್ಗೆಟ್ ಮಾಡಿದ್ದಾರೆ.

ಕಳೆದೆರಡು ವರ್ಷಗಳಲ್ಲಿ ಮಾ ಲಕ್ಷಾಂತರ ಕೋಟಿಗಳಷ್ಟು ಹಣ ಕಳೆದುಕೊಂಡಿದ್ದಾರೆ. ಶಾಂಘೈ ಸ್ಟಾಕ್ ಎಕ್ಸ್ಚೇಂಜ್ ಮಾ ಅವರ ಹೊಸ ದಿ ಌಂಟ್ ಗ್ರೂಪ್ ನ ಶೇರ್ಗಳ ಡುಯಲ್ ಲಿಸ್ಟಿಂಗ್ ಸಸ್ಪೆಂಡ್ ಮಾಡಿದಾಗ ಅವರು ಕಳೆದುಕೊಂಡಿದ್ದು, ಸುಮಾರು 3 ಲಕ್ಷ ಕೋಟಿ ರೂಪಾಯಿ!

ಸೋಜಿಗ ಹುಟ್ಟಿಸುವ ಸಂಗತಿಯೆಂದರೆ, ವ್ಯಾಪಾರದಲ್ಲಿ ಎದುರಾಗುವ ನಷ್ಟಗಳಿಂದ ಮಾ ಯಾವತ್ತೂ ಎದೆಗುಂದುವುದಿಲ್ಲ. ತಮ್ಮ ಸಂಪತ್ತು ಮತ್ತು ಬಿಸಿನೆಸ್ ಸಾಮ್ರಾಜ್ಯ ಕುಸಿಯುತ್ತಿರುವ ಸಂಗತಿಯನ್ನು ಎಲ್ಲರಿಗಿಂತ ಮೊದಲು ಅವರೇ ಮನಗಂಡಿರುತ್ತಾರೆ. ಎಲ್ಲವನ್ನೂ ಎದುರಿಸುವ ಗುಂಡಿಗೆ ಅವರಲ್ಲಿದೆ.

ನಮಗೆ ಲಭ್ಯವಿರುವ ಮಾಹಿತಿಯೊಂದರ ಪ್ರಕಾರ ಜ್ಯಾಕ್ ಮಾ ಈಗ ಕೃಷಿ ಅಧ್ಯಯನಕ್ಕಾಗಿ ಯೂರೋಪ್ ಪ್ರವಾಸದಲ್ಲಿದ್ದಾರಂತೆ. ಸ್ಪೇನ್ನಲ್ಲಿ ಅವರು ಪರಿಸರಕ್ಕೆ ಸಂಬಂಧಿಸಿದ ಕೃಷಿ ತಂತ್ರಜ್ಞಾನದ ಅಧ್ಯಯನ ನಡೆಸುತ್ತಿದ್ದಾರೆ.

ಸುಮಾರು ಒಂದು ವರ್ಷಷ ಬಳಿಕ ಅವರು ಪ್ರವಾಸಕ್ಕೆ ತೆರಳಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. 2018ರಲ್ಲಿ ಅವರು ಪ್ರತಿ ಮೂರು ದಿನಗಳಲ್ಲಿ ಒಂದು ದಿನ ಪ್ರವಾಸದಲ್ಲಿರುತ್ತಿದ್ದರು!

ಇದನ್ನೂ ಓದಿ:   Vijayapura: ತಪ್ಪುತಪ್ಪಾಗಿ ಇಂಗ್ಲೀಷ್ ಪಾಠ ಮಾಡಿದ ಶಿಕ್ಷಕ, ವಿಡಿಯೋ ವೈರಲ್