AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bhajarangi 2: ಶಿವಣ್ಣನ ಭಜರಂಗಿ 2 ಚಿತ್ರಕ್ಕೆ ಅಲ್ಲು ಅರ್ಜುನ್​ ವಿಶ್​; ವಿಡಿಯೋ ವೈರಲ್​

Allu Arjun: ಶಿವರಾಜ್​ಕುಮಾರ್​ ನಟನೆಯ ‘ಭಜರಂಗಿ 2’ ಸಿನಿಮಾ ಬಗ್ಗೆ ‘ಸ್ಟೈಲಿಶ್​ ಸ್ಟಾರ್​’ ಅಲ್ಲು ಅರ್ಜುನ್​ ಮಾತನಾಡಿರುವ ವಿಡಿಯೋ ಸಖತ್​ ವೈರಲ್​ ಆಗುತ್ತಿವೆ. ಶಿವಣ್ಣನ​ ಅಭಿಮಾನಿಗಳು ಇದನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿ ಸಂಭ್ರಮಿಸುತ್ತಿದ್ದಾರೆ.

Bhajarangi 2: ಶಿವಣ್ಣನ ಭಜರಂಗಿ 2 ಚಿತ್ರಕ್ಕೆ ಅಲ್ಲು ಅರ್ಜುನ್​ ವಿಶ್​; ವಿಡಿಯೋ ವೈರಲ್​
ಅಲ್ಲು ಅರ್ಜುನ್​, ಶಿವರಾಜ್​ಕುಮಾರ್​
TV9 Web
| Edited By: |

Updated on:Oct 28, 2021 | 2:44 PM

Share

ಶಿವರಾಜ್​ಕುಮಾರ್​ ಅಭಿನಯದ ‘ಭಜರಂಗಿ 2’ ಸಿನಿಮಾ ನಾಳೆ (ಅ.29) ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ. ಎ. ಹರ್ಷ ನಿರ್ದೇಶನದ ಈ ಸಿನಿಮಾ ಈಗಾಗಲೇ ಟ್ರೇಲರ್​ ಮೂಲಕ ಭಾರಿ ನಿರೀಕ್ಷೆ ಮೂಡಿಸಿದೆ. ಶಿವಣ್ಣನ ಅಭಿಮಾನಿಗಳು ಈ ಸಿನಿಮಾಗಾಗಿ ಕಾದುಕುಳಿತಿದ್ದಾರೆ. ಅಷ್ಟೇ ಅಲ್ಲ, ಪರಭಾಷೆಯ ಸ್ಟಾರ್​ ನಟರು ಕೂಡ ‘ಭಜರಂಗಿ 2’ ಸಿನಿಮಾ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ. ಟಾಲಿವುಡ್​ ಸ್ಟಾರ್​ ನಟ ಅಲ್ಲು ಅರ್ಜುನ್​ ಅವರು ಈ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಆ ವಿಡಿಯೋ ಈಗ ಸಖತ್​ ವೈರಲ್​ ಆಗಿದೆ.

‘ವರುಡು ಕಾವಲೇನು’ ಚಿತ್ರದ ಪ್ರೀ-ರಿಲೀಸ್​ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್​ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇದಿಕೆಯ ಮೇಲೆ ಅವರು ‘ಭಜರಂಗಿ 2’ ಚಿತ್ರದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕೊರೊನಾ ಎರಡನೇ ಅಲೆ ಬಳಿಕ ಅನೇಕ ಸಿನಿಮಾಗಳು ರಿಲೀಸ್​ ಆಗುತ್ತಿವೆ. ಇದು ಇಡೀ ಭಾರತೀಯ ಚಿತ್ರರಂಗಕ್ಕೆ ತುಂಬ ಕಷ್ಟದ ಕಾಲಘಟ್ಟ ಎಂದು ಅಲ್ಲು ಅರ್ಜುನ್​ ಹೇಳಿದ್ದಾರೆ.

ಕೊರೊನಾ ಹೊಡೆತಕ್ಕೆ ಸಿಕ್ಕ ಚಿತ್ರೋದ್ಯಮ ಈಗತಾನೇ ಚೇತರಿಸಿಕೊಳ್ಳುತ್ತಿದೆ. ಇಂಥ ಸಂದರ್ಭದಲ್ಲಿ ಬಿಡುಗಡೆ ಆಗುತ್ತಿರುವ ಚಿತ್ರಗಳ ಬಗ್ಗೆ ಅಲ್ಲು ಅರ್ಜುನ್​ ಮಾತನಾಡಿದ್ದು, ಈ ವೇಳೆ ಅವರು ‘ಭಜರಂಗಿ 2’ ಚಿತ್ರಕ್ಕೆ ವಿಶ್​ ಮಾಡಿದ್ದಾರೆ. ‘ಕರ್ನಾಟಕದಲ್ಲಿ ಚಿತ್ರಮಂದಿರಗಳು ಶೇ.100 ಆಕ್ಯುಪೆನ್ಸಿಯಲ್ಲಿ ಓಪನ್​ ಆಗಿವೆ. ‘ಭಜರಂಗಿ 2’ ಚಿತ್ರ ಬಿಡುಗಡೆ ಆಗುತ್ತಿದೆ. ನಾನು ಹೃತ್ಪೂರ್ವಕವಾಗಿ ಶುಭಾಶಯ ತಿಳಿಸುತ್ತೇನೆ. ಇಡೀ ಕನ್ನಡ ಚಿತ್ರರಂಗಕ್ಕೆ ವಿಶ್​ ಮಾಡುತ್ತೇನೆ. ಈಗತಾನೇ ಎಲ್ಲ ವಿಘ್ನಗಳು ನಿವಾರಣೆಯಾಗಿ ಜನರು ಚಿತ್ರಮಂದಿರಕ್ಕೆ ಬರಲು ಆರಂಭಿಸಿದ್ದಾರೆ. ಈ ಪಾಸಿಟಿವಿಟಿ ಹೀಗೆಯೇ ಮುಂದುವರಿಯಲಿ’ ಎಂದು ಅಲ್ಲು ಅರ್ಜುನ್​ ಶುಭ ಕೋರಿದ್ದಾರೆ.

‘ಹ್ಯಾಟ್ರಿಕ್​ ಹೀರೋ’ ಸಿನಿಮಾ ಬಗ್ಗೆ ‘ಸ್ಟೈಲಿಶ್​ ಸ್ಟಾರ್​’ ಮಾತನಾಡಿರುವ ಈ ವಿಡಿಯೋ ಸಖತ್​ ವೈರಲ್​ ಆಗುತ್ತಿವೆ. ಶಿವರಾಜ್​ಕುಮಾರ್​ ಅಭಿಮಾನಿಗಳು ಶೇರ್​ ಮಾಡಿ ಸಂಭ್ರಮಿಸುತ್ತಿದ್ದಾರೆ. ಅದೇ ರೀತಿ ಅಕ್ಷಯ್​ಕುಮಾರ್​ ನಟನೆಯ ‘ಸೂರ್ಯವಂಶಿ’, ರಜನಿಕಾಂತ್​ ನಟನೆಯ ‘ಅಣ್ಣಾತೆ’ ಸಿನಿಮಾಗಳು ದೀಪಾವಳಿ ಪ್ರಯುಕ್ತ ರಿಲೀಸ್​ ಆಗಲಿವೆ. ಆ ಚಿತ್ರಗಳಿಗೂ ಸಹ ಅಲ್ಲು ಅರ್ಜುನ್​ ಆಲ್​ ದಿ ಬೆಸ್ಟ್​ ಎಂದಿದ್ದಾರೆ. ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್​ ಜೋಡಿಯ ‘ಪುಷ್ಪ’ ಚಿತ್ರ ಡಿ.17ರಂದು ಬಿಡುಗಡೆ ಆಗಲಿದೆ. ಆ ಚಿತ್ರಕ್ಕಾಗಿ ಸಿನಿಪ್ರಿಯರು ಕಾಯುತ್ತಿದ್ದಾರೆ.

ಇದನ್ನೂ ಓದಿ:

‘ಭಜರಂಗಿ 2’ ಗೆಲುವಿಗಾಗಿ ಪೂಜೆ ಸಲ್ಲಿಸಿದ ಅಭಿಮಾನಿಗಳು; ರಿಲೀಸ್​ಗೂ ಮೊದಲೇ ಹೆಚ್ಚಿದ ಕ್ರೇಜ್​​

Bhajarangi 2 Trailer: ‘ಭಜರಂಗಿ 2’ ಟ್ರೇಲರ್ ಮೂಲಕ ಮೋಡಿ ಮಾಡಿದ ಶಿವರಾಜ್​ಕುಮಾರ್​; ದುಪ್ಪಟ್ಟಾಯಿತು ನಿರೀಕ್ಷೆ

Published On - 12:50 pm, Thu, 28 October 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್