AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವರಾಜ್​ಕುಮಾರ್​ ಕಟೌಟ್​, ಹಾಲಿನ ಅಭಿಷೇಕ, ಮುಂಜಾನೆ 5 ಗಂಟೆ ಶೋ; ‘ಭಜರಂಗಿ 2’ ರಿಲೀಸ್​​ಗೆ ಕೌಂಟ್​ಡೌನ್​

ಕೊವಿಡ್​ ಎರಡನೇ ಅಲೆ ಕಡಿಮೆ ಆದ ನಂತರ ತರೆಗೆ ಬರುತ್ತಿರುವ ಕನ್ನಡ ಮೂರನೇ ಬಿಗ್​ ಬಜೆಟ್​ ಸಿನಿಮಾ ಇದಾಗಿದೆ. ಫ್ಯಾಂಟಸಿ ಕಥೆ ಹೊಂದಿರುವ ಚಿತ್ರ ಇದಾಗಿದ್ದು, ರಾಜ್ಯಾದ್ಯಂತ ಬರೋಬ್ಬರಿ 300 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ.

ಶಿವರಾಜ್​ಕುಮಾರ್​ ಕಟೌಟ್​, ಹಾಲಿನ ಅಭಿಷೇಕ, ಮುಂಜಾನೆ 5 ಗಂಟೆ ಶೋ; ‘ಭಜರಂಗಿ 2’ ರಿಲೀಸ್​​ಗೆ ಕೌಂಟ್​ಡೌನ್​
ಶಿವರಾಜ್​ಕುಮಾರ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Oct 28, 2021 | 3:50 PM

Share

ಶಿವರಾಜ್​ಕುಮಾರ್​ ನಟನೆಯ ‘ಭಜರಂಗಿ 2’ ಸಿನಿಮಾ ರಿಲೀಸ್​ಗೆ ಕೌಂಟ್​ಡೌನ್​ ಶುರುವಾಗಿದೆ. ಈ ಸಿನಿಮಾ ರಾಜ್ಯಾದ್ಯಂತ ಶುಕ್ರವಾರ (ಅಕ್ಟೋಬರ್​ 29) ಭರ್ಜರಿಯಾಗಿ ರಿಲೀಸ್​ ಆಗುತ್ತಿದೆ. ನಟ ಶಿವರಾಜ್​​​ಕುಮಾರ್​ ಹಾಗೂ ಹರ್ಷ ಕಾಂಬಿನೇಷನ್​ನಲ್ಲಿ ಮೂಡಿ ಬಂದ ಮೂರನೇ ಸಿನಿಮಾ ಇದಾಗಿದ್ದು, ಪ್ರೇಕ್ಷಕರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಕುತೂಹಲ ಸದ್ಯದ್ದು. ಹಾಗಾದರೆ, ಈ ಸಿನಿಮಾ ಎಷ್ಟು ಚಿತ್ರಮಂದಿರಗಳಲ್ಲಿ ರಿಲೀಸ್​ ಆಗುತ್ತಿದೆ? ಅದಕ್ಕೆ ಏನೆಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

300 ಚಿತ್ರಮಂದಿರಗಳಲ್ಲಿ ‘ಭಜರಂಗಿ 2’

ಕೊವಿಡ್​ ಎರಡನೇ ಅಲೆ ಕಡಿಮೆ ಆದ ನಂತರ ತೆರೆಗೆ ಬರುತ್ತಿರುವ ಕನ್ನಡದ ಮೂರನೇ ಬಿಗ್​ ಬಜೆಟ್​ ಸಿನಿಮಾ ಇದಾಗಿದೆ. ಫ್ಯಾಂಟಸಿ ಕಥೆ ಹೊಂದಿರುವ ಚಿತ್ರ ಇದಾಗಿದ್ದು, ರಾಜ್ಯಾದ್ಯಂತ ಬರೋಬ್ಬರಿ 300 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಹೀಗಾಗಿ, ಮೊದಲ ದಿನವೇ ಚಿತ್ರ ಒಳ್ಳೆಯ ಕಲೆಕ್ಷನ್​ ಮಾಡುವ ನಿರೀಕ್ಷೆ ಇದೆ.

ಮುಂಜಾನೆ ಐದು ಗಂಟೆಗೇ ಶೋ

ಸಾಮಾನ್ಯವಾಗಿ 10 ಗಂಟೆಯಿಂದ ಸಿನಿಮಾ ಪ್ರದರ್ಶನ ಕಾಣುತ್ತದೆ. ಆದರೆ, ‘ಭಜರಂಗಿ 2’ಗಾಗಿ ವಿಶೇಷ ಫ್ಯಾನ್ಸ್​ ಶೋ ಆಯೋಜನೆ ಮಾಡಲಾಗಿದೆ. ಬೆಂಗಳೂರಿನ ಜೆ.ಪಿ. ನಗರದ ಸಿದ್ದೇಶ್ವರ ಚಿತ್ರಮಂದಿರ ಹಾಗು ಗೌಡನ ಪಾಳ್ಯದ ಶ್ರೀನಿವಾಸ ಥಿಯೇಟರ್​​ನಲ್ಲಿ ಮುಂಜಾನೆ 5 ಘಂಟೆಗೆ ಸಿನಿಮಾ ಪ್ರದರ್ಶನ ಕಾಣಲಿದೆ. ಫ್ಯಾನ್ಸ್ ಶೋಗಾಗಿ ಭರ್ಜರಿ ಪ್ಲ್ಯಾನ್​ ನಡೆದಿದೆ. ಈ ಶೋಗೆ ಶಿವರಾಜ್​ಕುಮಾರ್ ಹಾಗೂ ವಸಿಷ್ಠ ಸಿಂಹ ಆಗಮಿಸೋ ಸಾಧ್ಯತೆ ಇದೆ. ಗಾಂಧಿನಗರದ ಅನುಪಮ ಚಿತ್ರಂಮದಿರದಲ್ಲಿ 10 ಘಂಟೆಗೆ ಶೋ ಆರಂಭ ಆಗಲಿದೆ.

ತಲೆ ಎತ್ತಿದ ಕಟೌಟ್​

ಶಿವರಾಜ್​ಕುಮಾರ್​ ನಟನೆಯ ‘ಭಜರಂಗಿ 2’ ಸಿನಿಮಾ ರಿಲೀಸ್​ಗೆ ಅದ್ದೂರಿಯಾಗಿ ಪ್ಲ್ಯಾನ್​ ಮಾಡಿಕೊಳ್ಳಲಾಗಿದೆ. ಈಗಾಗಲೇ ಸಿನಿಮಾದ ಕಟೌಟ್​ಗಳನ್ನು ಚಿತ್ರಮಂದಿರಗಳ ಎದುರು ನಿಲ್ಲಿಸಲಾಗಿದೆ. ಇದಕ್ಕೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಲಿದ್ದಾರೆ.

ಹರ್ಷ-ಶಿವಣ್ಣ ಕಾಂಬಿನೇಷನ್​ನಲ್ಲಿ ಮೂರನೇ ಸಿನಿಮಾ

ಹಲವು ಕಾರಣಗಳಿಗಾಗಿ ‘ಭಜರಂಗಿ 2’ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ. ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿರುವ ಟ್ರೇಲರ್​ ಕಂಡು ಫ್ಯಾನ್ಸ್​ ಫಿದಾ ಆಗಿದ್ದಾರೆ. ಸೂಪರ್​ ನ್ಯಾಚುರಲ್​ ಕಥೆ, ಬೃಹತ್​ ಸೆಟ್​ಗಳು, ಕಲಾವಿದರ ಭಿನ್ನ ವಿಭಿನ್ನ ಗೆಟಪ್​ಗಳು ಗಮನ ಸೆಳೆಯುತ್ತಿವೆ. ಶಿವರಾಜ್​ಕುಮಾರ್​ ಮತ್ತು ನಿರ್ದೇಶಕ ಎ. ಹರ್ಷ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ಮೂರನೇ ಸಿನಿಮಾ ಇದಾಗಿದ್ದು, ಸಾಕಷ್ಟು ಹೈಪ್​ ಸೃಷ್ಟಿ ಮಾಡಿದೆ.

ಪಾತ್ರವರ್ಗ

ಶಿವರಾಜ್​ಕುಮಾರ್ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಹಿರಿಯ ನಟಿ ಶ್ರುತಿ, ಭಜರಂಗಿ ಲೋಕಿ, ಭಾವನಾ ಮೆನನ್​, ಶಿವರಾಜ್​ ಕೆ.ಆರ್​. ಪೇಟೆ, ಚೆಲುವ ರಾಜು ಮುಂತಾದವರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಸ್ವಾಮಿ ಜೆ. ಗೌಡ ಛಾಯಾಗ್ರಹಣ, ದೀಪು ಎಸ್​. ಕುಮಾರ್​ ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ.

ಇದನ್ನೂ ಓದಿ: ಶಿವರಾಜ್​ಕುಮಾರ್​ ‘ಭಜರಂಗಿ 2’ಗೆ ಸಾತ್​ ನೀಡಿದ ಯಶ್​-ಪುನೀತ್​ ​; ಒಂದೇ ವೇದಿಕೆ ಮೇಲೆ ಮೂರು ಸ್ಟಾರ್​ಗಳು

‘ಓವರ್​ ಆ್ಯಕ್ಟಿಂಗ್​ ಬೇಡ’; ವೇದಿಕೆ ಮೇಲೆಯೇ ಶಿವರಾಜ್​ಕುಮಾರ್​ ವಾರ್ನಿಂಗ್

Published On - 3:49 pm, Thu, 28 October 21

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ