ಇಬೈಕ್ಗೋ ಸಂಸ್ಥೆಯ ರಗ್ಡ್ ಎಲೆಕ್ಟ್ರಿಕ್ ಬೈಕ್ಗೆ ಎರಡೇ ತಿಂಗಳಲ್ಲಿ ಒಂದು ಲಕ್ಷಕ್ಕೂ ಮೀರಿ ಬುಕಿಂಗ್ಗಳಾಗಿವೆ
ಇಬೈಕ್ಗೋ ಕಂಪನಿಯು ತನ್ನ ರಗ್ಡ್ ಇ ಬೈಕ್ ಇದುವರೆಗೆ ಸೃಷ್ಟಿಯಾಗಿರುವ ಎಲೆಕ್ಟ್ರಿಕ್ ಬೈಕ್ಗಳಲ್ಲೊ ಎಲ್ಲಕ್ಕಿಂತ ಪವರ್ ಫುಲ್ ಅಂತ ಹೇಳಿಕೊಂಡಿದೆ. ಭಾರತದ ಬಹಳಷ್ಟು ನಗರಗಳಲ್ಲಿ ರಗ್ಡ್ ಬೈಕ್ ಲಭ್ಯವಾಗುವಂಥ ಏರ್ಪಾಟನ್ನು ಕಂಪನಿ ಮಾಡುತ್ತಿದೆ.
ಪ್ರತಿದಿನ ತುಟ್ಟಿಯಾಗುತ್ತಿರುವ ಪೆಟ್ರೋಲ್ ಬೆಲೆಯಿಂದ ಕಂಗಾಲಾಗಿರುವ ಜನ ಬಹಳ ಕಾತುರತೆಯಿಂದ ಇಲೆಕ್ಟ್ರಿಕ್ ಬೈಕ್ ಗಳಿಗಾಗಿ ಕಾಯುತ್ತಿದ್ದಾರೆ. ಓಲಾ ಸಂಸ್ಥೆಯ ಎರಡೂ ಎಲೆಕ್ಟ್ರಿಕ್ ಸ್ಕೂಟರ್ಗಳಿಗೆ ಮೊದಲ ಹಂತದ ಬುಕಿಂಗ್ ಕೊನೆಗೊಂಡು ನವೆಂಬರ್ ಒಂದರಿಂದ ಎರಡನೇ ಹಂತ ಶುರುವಾಗಲಿದೆ. ಇಬೈಕ್ಗೋ ಕಂಪನಿಯು ಎರಡು ತಿಂಗಳ ಹಿಂದೆ ತನ್ನ ರಗ್ಡ್ ಎಲೆಕ್ಟ್ರಿಕ್ ಬೈಕ್ ಲಾಂಚ್ ಮಾಡಿ ಬುಕಿಂಗ್ ಆರಂಭಿಸಿತ್ತು. ಎರಡು ದಿನಗಳ ಹಿಂದೆ ಕಂಪನಿಯು ಬಿಡುಗಡೆ ಮಾಡಿರುವ ಹೇಳಿಕೆಯೊಂದರ ಪ್ರಕಾರ ರಗ್ಡ್ ಎಲೆಕ್ಟ್ರಿಕ್ ಬೈಕ್ ಗೆ ಒಂದು ಲಕ್ಷಕ್ಕಿಂತ ಹೆಚ್ಚು ಆರ್ಡರ್ ಗಳು ಬಂದಿವೆಯಂತೆ. ಮುಂಗಡ ರೂಪದಲ್ಲಿ ಕೇವಲ ಎರಡು ತಿಂಗಳಲ್ಲಿ ರೂ, 1,000 ಕೋಟಿ ಜಮೆಯಾಗಿದೆಯಂತೆ. ಇದರಿಂದ ಮೇಲೆ ಹೇಳಿರುವ ಮಾತು ಮತ್ತಷ್ಟು ಸ್ಪಷ್ಟವಾಗುತ್ತದೆ. ಜನ ಇ-ಬೈಕ್ ಗಳಿಗೆ ಹಾತೊರೆಯುತ್ತಿದ್ದಾರೆ.
ಇಬೈಕ್ಗೋ ಕಂಪನಿಯು ತನ್ನ ರಗ್ಡ್ ಇ ಬೈಕ್ ಇದುವರೆಗೆ ಸೃಷ್ಟಿಯಾಗಿರುವ ಎಲೆಕ್ಟ್ರಿಕ್ ಬೈಕ್ಗಳಲ್ಲೊ ಎಲ್ಲಕ್ಕಿಂತ ಪವರ್ ಫುಲ್ ಅಂತ ಹೇಳಿಕೊಂಡಿದೆ. ಭಾರತದ ಬಹಳಷ್ಟು ನಗರಗಳಲ್ಲಿ ರಗ್ಡ್ ಬೈಕ್ ಲಭ್ಯವಾಗುವಂಥ ಏರ್ಪಾಟನ್ನು ಕಂಪನಿ ಮಾಡುತ್ತಿದೆ. ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಬಿಹಾರ- ಈ ಮೂರು ರಾಜ್ಯಗಳಲ್ಲಿ ಮಾಸ್ಟರ್ ಫ್ರಾಂಚೈಸಿಗಳನ್ನು ಬಂದ್ ಮಾಡಿ, 22 ಡೀಲರ್ ಶಿಪ್ ಗಳನ್ನು ಸ್ಥಾಪಿಸಿದೆಯಂತೆ.
ಹಬ್ಬದ ಸೀಸನ್ ಇನ್ನೂ ಜಾರಿಯಲ್ಲಿರುವುದರಿಂದ ರಗ್ಡ್ ಬೈಕ್ ಗಾಗಿ ಬುಕಿಂಗ್ ಮತ್ತಷ್ಟು ವೇಗ ಪಡೆದುಕೊಳ್ಳುಬಹುದೆಂಬ ನಿರೀಕ್ಷೆಯನ್ನು ಇಬೈಕ್ಗೋ ಕಂಪನಿ ಇಟ್ಟುಕೊಂಡಿದೆ.
ತಮ್ಮ ಬೈಕ್ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಕಂಪನಿಯ ಸಂಸ್ಥಾಪಕ ಮತ್ತು ಸಿಇಓ ಇರ್ಫಾನ್ ಖಾನ್ ಅವರು, ‘ಇದು ಭಾರತದ ಅತ್ಯಂತ ಪರಿಸರ ಸ್ನೇಹಿ, ಚಾಣಾಕ್ಷ ಮತ್ತು ಹೆಚ್ಚು ಬಾಳಿಕೆಯ ಎಲೆಕ್ಟ್ರಿಕ್ ಮೊಟೊ-ಸ್ಕೂಟರ್ ಅಗಿದ್ದು, ಭಾರತದಲ್ಲಿ ಎ-ಮೊಬಿಲಿಟಿ ದಿಕ್ಕನ್ನೇ ಬದಲಿಸುವಂಥ ಸಾಮರ್ಥ್ಯ ಹೊಂದಿದೆ ಮತ್ತು ಎಲೆಕ್ಟ್ರಿಕ್ ಬೈಕ್ ಕೆಟೆಗಿರಿಯಲ್ಲಿ ಕ್ರಿಯಾಶೀಲತೆಯ ಹರಹು ಅನ್ನು ಮತ್ತಷ್ಟು ವಿಸ್ತರಿಸಲಿದೆ,’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರಾರ್ಥನಾ ಮಂದಿರಗಳ ಮುಂದೆ ಭಕ್ತರು ಕಳಚಿರುವ ಚಪ್ಪಲಿಗಳು ಹೇಗೆ ಕಳುವಾಗುತ್ತವೆ ಗೊತ್ತಾ? ವಿಡಿಯೋ ನೋಡಿ